Site icon Vistara News

Karnataka live news: ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳು; ʼವರ್ಗಾವಣೆ ದಂಧೆʼ ಪತ್ರ ತನ್ನದಲ್ಲವೆಂದ ಬಿ.ಆರ್.‌ ಪಾಟೀಲ್;‌ ಬಿಜೆಪಿ ಫೇಕ್‌ ಫ್ಯಾಕ್ಟರಿ ಎಂದ ಕಾಂಗ್ರೆಸ್!

karnataka live news

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರು ವರ್ಗಾವಣೆಗೆ ಶಾಸಕರಿಂದಲೇ ಹಣ ಕೇಳುತ್ತಿದ್ದಾರೆ ಎಂಬ ಆರೋಪವುಳ್ಳ ಪತ್ರವು ನಕಲಿ ಎಂದು ಆಳಂದ ಶಾಸಕ ಬಿ.ಆರ್.‌ ಪಾಟೀಲ್‌ ಸ್ಪಷ್ಟನೆ ನೀಡಿದ್ದಾರೆ. ನಾನು ಬರೆದಿರುವ ಪತ್ರವೇ ಬೇರೆ ಎಂದು ಅವರು ಹೇಳಿದ್ದಾರೆ. ಇನ್ನು ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ಹಲವೆಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ, ಕೆಲವೆಡೆ ಗುಡ್ಡ ಕುಸಿದ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಇನ್ನಷ್ಟು ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳ (Karnataka live news) ಕ್ಷಣಕ್ಷಣದ ಮಾಹಿತಿಗಾಗಿ ಇಲ್ಲಿ ನೋಡಿ.

Harish Kera

ಬೆಂಗಳೂರು ಬಂದ್‌ ರದ್ದುಪಡಿಸಿದ ಖಾಸಗಿ ಬಸ್‌ ಒಕ್ಕೂಟ

ಬೆಂಗಳೂರು: ಶಕ್ತಿ ಯೋಜನೆಯಿಂದ ತಮಗೆ ಆಗುತ್ತಿರುವ ನಷ್ಟ ಮತ್ತಿತರ ವಿಚಾರ ಮುಂದಿಟ್ಟುಕೊಂಡು ಜುಲೈ 27ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದ ಖಾಸಗಿ ಚಾಲಕರ ಒಕ್ಕೂಟ, ಅದನ್ನು ಹಿಂದೆಗೆದುಕೊಂಡಿದೆ. ಸಾರಿಗೆ ಸಚವರ ಜತೆ ನಡೆದ ಮಾತುಕತೆಯ ಬಳಿಕ ಬಂದ್‌ ಅನ್ನು ವಾಪಸ್ ಪಡೆಯಲಾಗಿದೆ. ಬೇಡಿಕೆ ಈಡೇರದಿದ್ದರೆ ಆಗಸ್ಟ್ 10ರ ನಂತರ ಬಂದ್‌ಗೆ ಕರೆ ನೀಡ್ತೇವೆ ಎಂದು ಸಾರಿಗೆ ಮುಖಂಡರು ಹೇಳಿದ್ದಾರೆ.

Exit mobile version