ಬೆಂಗಳೂರು: ರಾಜ್ಯದ ರಾಜಕೀಯ ಬೆಳವಣಿಗೆಗಳು, ಸಾಂಸ್ಕೃತಿಕ- ಸಾಮಾಜಿಕ ಬೆಳವಣಿಗೆಗಳು ಸೇರಿದಂತೆ ಇಂದಿನ ಮಹತ್ವದ ಸುದ್ದಿಗಳ ಕ್ಷಣಕ್ಷಣದ ಅಪ್‌ಡೇಟ್‌ಗಳನ್ನು ಓದಲು ಇಲ್ಲಿ ಗಮನಿಸಿ.
ಮಂಗಳವಾರ 74 ಮಂದಿಗೆ ಕೊರೊನಾ, ಇಬ್ಬರ ಸಾವು
ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 74 ಜನರಲ್ಲಿ ಕೊರೊನಾ ಸೋಂಕು (Corona Virus News) ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮೈಸೂರು ಮತ್ತು ದಕ್ಷಿಣ ಕನ್ನಡದಲ್ಲಿ ಒಬ್ಬೊಬ್ಬರು ಬಲಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 464ಕ್ಕೆ ಏರಿಕೆಯಾಗಿದೆ.
Corona Virus News: ಮಂಗಳವಾರ 74 ಮಂದಿಗೆ ಕೊರೊನಾ, ಇಬ್ಬರ ಸಾವು
ಫ್ರೀ ಬಸ್ ಎಫೆಕ್ಟ್;15 ತೊಲೆ ಬಂಗಾರ ಎಗರಿಸಿದ ಚಲಾಕಿ ಕಳ್ಳರು
ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ಎಲ್ಲ ಬಸ್ ನಿಲ್ದಾಣದಲ್ಲೂ ಮಹಿಳಾ ಪ್ರಯಾಣಿಕರೇ ತುಂಬಿ ತುಳುಕುತ್ತಿರುತ್ತಾರೆ. ವಾರಾಂತ್ಯದಲ್ಲಿ ಕಾಲಿಡಲು ಆಗದಷ್ಟು ಎಲ್ಲ ಬಸ್ ಫುಲ್ ಆಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಖದೀಮರು, ಬಸ್ ಹತ್ತುವ ನೆಪದಲ್ಲಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿ ಕಳ್ಳತನ (Theft Case) ಮಾಡುತ್ತಿದ್ದಾರೆ. ಸದ್ಯ ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣವನ್ನು ಕಳ್ಳರು ಎಗರಿಸಿದ್ದಾರೆ.
Theft Case : ಫ್ರೀ ಬಸ್ ಎಫೆಕ್ಟ್;15 ತೊಲೆ ಬಂಗಾರ ಎಗರಿಸಿದ ಚಲಾಕಿ ಕಳ್ಳರು
29 ಮಂದಿಗೆ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ, ಡಿಕೆಶಿ ʼವರ್ಷದ ವ್ಯಕ್ತಿʼ
ಪ್ರೆಸ್ ಕ್ಲಬ್ ಆಫ್ ಬೆಂಗಳೂರು (Press Club Of Bangalore) 2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ 29 ಮಂದಿ, ಈ ಬಾರಿ ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇನ್ನು ಪ್ರೆಸ್‌ಕ್ಲಬ್ ʼವರ್ಷದ ವ್ಯಕ್ತಿ ಪ್ರಶಸ್ತಿʼಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿಗೆ (Press Club Awards) ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
http://vistaranews.com/karnataka/29-journalists-selected-for-bangalore-press-club-annual-award/541686.html
ಅಡುಗೆ ಮಾಡುವಾಗ ಸ್ಟವ್ ಸ್ಫೋಟ; ಬೆಂಕಿ ತಗುಲಿ ಹೊತ್ತಿ ಉರಿದ ಲಾರಿ, ಚಾಲಕನಿಗೆ ಗಾಯ
ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದು (Lorry Fire) ಹೊತ್ತಿ ಉರಿದಿದೆ. ಫ್ಲೈವುಡ್ ತುಂಬಿದ್ದ ಲಾರಿಯು ಸುಟ್ಟು ಭಸ್ಮವಾಗಿದೆ. ರಸ್ತೆಬದಿ ಲಾರಿ ನಿಲ್ಲಿಸಿ, ಚಾಲಕ ಅಡುಗೆ ಮಾಡುವಾಗ ಅಚಾನಕ್ ಆಗಿ ಸ್ಟವ್ ಸ್ಫೋಟಗೊಂಡಿದೆ. ಪಕ್ಕದಲ್ಲೇ ನಿಂತಿದ್ದ ಲಾರಿಗೆ ಬೆಂಕಿ ಆವರಿಸಿದೆ. ನೋಡನೋಡುತ್ತಿದ್ದಂತೆ ಲಾರಿ ಹೊತ್ತಿ ಉರಿದಿದೆ.
Lorry Fire : ಅಡುಗೆ ಮಾಡುವಾಗ ಸ್ಟವ್ ಸ್ಫೋಟ; ಬೆಂಕಿ ತಗುಲಿ ಹೊತ್ತಿ ಉರಿದ ಲಾರಿ, ಚಾಲಕನಿಗೆ ಗಾಯ
ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗಲೇ ಹೊತ್ತಿಕೊಂಡ ಬೆಂಕಿ; ಕಾರು ಚಾಲಕ ಸಜೀವ ದಹನ
ಚಲಿಸುತ್ತಿದ್ದಾಗಲೇ ಕಾರಿನ ಎಂಜಿನ್‌ನಲ್ಲಿ (car Fire) ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದೆ. ಇತ್ತ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಕಾರು ಚಾಲಕ ಸಜೀವ ದಹನವಾಗಿದ್ದಾನೆ. ನೆಲಮಂಗಲದ ಟೋಲ್ ಬಳಿಯ ಪಾರ್ಲೆ ಜಿ ಬಳಿ ಈ ದುರಂತ ನಡೆದಿದೆ.
Car Fire : ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಕಾರು; ಚಾಲಕ ಸಜೀವ ದಹನ