ಬೆಂಗಳೂರು: ರಾಜ್ಯದ ರಾಜಕೀಯ ಬೆಳವಣಿಗೆಗಳು, ಸಾಂಸ್ಕೃತಿಕ- ಸಾಮಾಜಿಕ ಬೆಳವಣಿಗೆಗಳು ಸೇರಿದಂತೆ ಇಂದಿನ ಮಹತ್ವದ ಸುದ್ದಿಗಳ ಕ್ಷಣಕ್ಷಣದ ಅಪ್‌ಡೇಟ್‌ಗಳನ್ನು ಓದಲು ಇಲ್ಲಿ ಗಮನಿಸಿ.
ರೂಂನಲ್ಲಿ 3 ವರ್ಷದ ಮಗು ಲಾಕ್; ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಸಾಹಸ
ನಿಂತಲ್ಲಿ ನಿಲ್ಲದೆ, ಅತ್ತಿಂದಿತ್ತ ಓಡಾಡುತ್ತಾ, ಕ್ಷಣಕೊಂದು ತುಂಟಾಟ ಮಾಡುವ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತದೆ. ಆದರೆ ಅದೇ ಮಕ್ಕಳ ತುಂಟಾಟವು ಒಮ್ಮೊಮ್ಮೆ ಪೋಷಕರಿಗೆ ಸಂಕಷ್ಟಕ್ಕೆ ಕಾರಣವಾಗುತ್ತದೆ. ಮಕ್ಕಳ ಮೇಲೆ ಎಷ್ಟೇ ನಿಗಾವಿಟ್ಟು ಜಾಗ್ರತೆ ವಹಿಸಿದರೂ ಸಾಲದು. ಕ್ಷಣ ಮಾತ್ರದಲ್ಲಿ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಸದ್ಯ ಅಪಾರ್ಟ್‌ಮೆಂಟ್ ರೂಂವೊಂದರಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ (Child rescue) ರಕ್ಷಿಸಿದ್ದಾರೆ.
Child rescue : ರೂಂನಲ್ಲಿ 3 ವರ್ಷದ ಮಗು ಲಾಕ್; ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಸಾಹಸ
ಡಗ್ಸ್ ಸೇವನೆ ಆರೋಪ; ಕ್ರಿಕೆಟಿಗ ಕೆಸಿ ಕಾರಿಯಪ್ಪಗೆ ʻNadaʼ ಸಂಕಷ್ಟ
ಕ್ರಿಕೆಟರ್ ಕಾರಿಯಪ್ಪ ಅವರ ಪ್ರೇಮ ಪುರಾಣ (KC Cariappa Love Case) ಪೊಲೀಸ್ ಠಾಣೆ ಮೆಟ್ಟಿಲೇರಿ, ಮಾಜಿ ಸೈನಿಕರೊಬ್ಬರ ಪುತ್ರಿ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರೊಂದಿಗೆ ಡ್ರಗ್ಸ್ ಸೇವನೆ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಕರ್ನಾಟಕದ ರಣಜಿ ತಂಡದ ಆಟಗಾರನಾಗಿರುವ ಕೆಸಿ ಕಾರಿಯಪ್ಪಗೆ ಯಾವುದೇ ಕ್ಷಣದಲ್ಲೂ ನಾಡಾ (Nada- national anti doping agency) ಸಂಕಷ್ಟ ಎದುರಾಗಬಹುದು.
KC Cariappa Love Case: ಡಗ್ಸ್ ಸೇವನೆ ಆರೋಪ; ಕ್ರಿಕೆಟಿಗ ಕೆಸಿ ಕಾರಿಯಪ್ಪಗೆ ʻNadaʼ ಸಂಕಷ್ಟ
ಯುವನಿಧಿಗೆ ಇಂದು ಚಾಲನೆ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ʼಯುವನಿಧಿʼಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಜನವರಿ 12ರಿಂದ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗಲಿದೆ.