ಬೆಂಗಳೂರು: ಮುಂದುವರಿದ ಮಳೆಯಿಂದ ರಾಜ್ಯದ ನದಿಗಳು ತುಂಬಿ ಹರಿಯುತ್ತಿವೆ. ಇದರೊಂದಿಗೆ ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ನೋಡಿ.
ಕನಕಗಿರಿಯಲ್ಲಿ ವಿದ್ಯುತ್ ಶಾಕ್‌ಗೆ 15 ಕುರಿ, 2 ಎತ್ತು ಬಲಿ
ವಿದ್ಯುತ್ ಶಾಕ್‌ಗೆ 15 ಕುರಿಗಳು, 2 ಎತ್ತುಗಳು ಬಲಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಟಿಸಿ ಕಂಬದ ವಿದ್ಯುತ್ ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದು ಅರ್ಥ್ ಗ್ರೌಂಡ್ ಅವಘಡ ಸಂಭವಿಸಿದೆ. ಕರಡಿಗುಡ್ಡ ಗ್ರಾಮದ ಹುಲುಗಪ್ಪ, ಕನಕಪ್ಪ ಎಂಬುವವರ ಕುರಿಗಳು ಹಾಗೂ ಎತ್ತುಗಳು ಮೃತಪಟ್ಟಿವೆ. ಅರ್ಥ್ ಗ್ರೌಂಡ್ ಆಗಿ ಘಟನೆ ನಡೆದಿರುವ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
Electric Shock: ಕನಕಗಿರಿಯಲ್ಲಿ ವಿದ್ಯುತ್ ಶಾಕ್‌ಗೆ 15 ಕುರಿ, 2 ಎತ್ತು ಬಲಿ
ಇಬ್ಬರು ಪಿಡಿಒಗಳ ವರ್ಗಾವಣೆ; ಪ್ರಿಯಾಂಕ್ ಖರ್ಗೆ ವಿರುದ್ಧ ನಿಯಮ ಉಲ್ಲಂಘನೆ ಆರೋಪ
ಸಾರ್ವತ್ರಿಕ ವರ್ಗಾವಣೆ ಅವಧಿಯ ಕೊನೇ ದಿನ ಮುಕ್ತಾಯವಾದ ಬಳಿಕವೂ ಇಬ್ಬರು ಪಿಡಿಒಗಳನ್ನು ವರ್ಗಾವಣೆ ಮಾಡಿರುವುದು ಕಂಡುಬಂದಿದೆ. ಈ ಮೂಲಕ ಸರ್ಕಾರದ ವರ್ಗಾವಣೆ ನಿಯಮವನ್ನು (PDO Transfer) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉಲ್ಲಂಘಿಸಿರುವುದು ಬಹಿರಂಗಗೊಂಡಿದೆ.
PDO Transfer: ಇಬ್ಬರು ಪಿಡಿಒಗಳ ವರ್ಗಾವಣೆ; ಪ್ರಿಯಾಂಕ್ ಖರ್ಗೆ ವಿರುದ್ಧ ನಿಯಮ ಉಲ್ಲಂಘನೆ ಆರೋಪ
ಇನ್ನೈದು ದಿನ ನಿರಂತರ ಮಳೆ ಆರ್ಭಟ
ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಯಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಭಯಂಕರ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
Weather Report : ಇನ್ನೈದು ದಿನ ನಿರಂತರ ಮಳೆ ಆರ್ಭಟ
ಸಂಸದ ಸಿದ್ದೇಶ್ವರ್‌ಗೆ ಅಶ್ಲೀಲ ವಿಡಿಯೊ ಕಾಲ್ ಮಾಡಿ ಬ್ಲ್ಯಾಕ್‌ಮೇಲ್‌ಗೆ ಯತ್ನ!
ಆನ್‌ಲೈನ್‌ನಲ್ಲಿ ಹಣ ಸುಲಿಗೆ ಮಾಡಲು ಸೈಬರ್ ಕಳ್ಳರು ಹೊಸ ತಂತ್ರವನ್ನು ಕಂಡುಕೊಂಡಿದ್ದಾರೆ. ಜನರಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಶ್ಲೀಲ ವಿಡಿಯೊ ಕಾಲ್ ಮಾಡಿ, ನಂತರ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಡುವೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಅಶ್ಲೀಲ ವಿಡಿಯೊ ಕಾಲ್ ಮಾಡಿ, ಹಣ ಕೀಳಲು ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Digital Honey Trap: ಸಂಸದ ಸಿದ್ದೇಶ್ವರ್‌ಗೆ ಅಶ್ಲೀಲ ವಿಡಿಯೊ ಕಾಲ್ ಮಾಡಿ ಬ್ಲ್ಯಾಕ್‌ಮೇಲ್‌ಗೆ ಯತ್ನ!
DJ Halli case : ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನ?: ತೇಜಸ್ವಿ ಸೂರ್ಯ, ಸಿ.ಟಿ. ರವಿ ಕಿಡಿ
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವಂತೆ ಶಾಸಕ ತನ್ವೀರ್ ಸೇಠ್ ಬರೆದಿರುವ ಪತ್ರ ಈಗ ರಾಜಕೀಯ ಸಂಚಲವನ್ನು ಸೃಷ್ಟಿಸಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ. ಇದಕ್ಕೆ ಈಗ ಬಿಜೆಪಿ ಕೆಂಡಾಮಂಡಲವಾಗಿದೆ.
DJ Halli case : ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನ?: ತೇಜಸ್ವಿ ಸೂರ್ಯ, ಸಿ.ಟಿ. ರವಿ ಕಿಡಿ