ಬೆಂಗಳೂರು: ಮುಂದುವರಿದ ಮಳೆಯಿಂದ ರಾಜ್ಯದ ನದಿಗಳು ತುಂಬಿ ಹರಿಯುತ್ತಿವೆ. ಇದರೊಂದಿಗೆ ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ನೋಡಿ.
ಮೆಟ್ರೋ ಟ್ರೈನ್‌ನಲ್ಲಿ ಕುಸಿದು ಪ್ರಯಾಣಿಕ ಸಾವು
ಮೆಟ್ರೋ ಟ್ರೈನ್‌ನಲ್ಲಿ (Bangalore Metro) ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಳೆದ ಜು.20 ರಂದು ನಡೆದಿತ್ತು. ಚಾಮರಾಜನಗರ ನಿವಾಸಿ ತಿಮ್ಮೇಗೌಡ (67) ಮೃತ ದುರ್ದೈವಿ. ಇದೀಗ ತಿಮ್ಮೇಗೌಡ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೆಟ್ರೋ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ (Negligence of metro staff) ದೂರು ದಾಖಲಿಸಿದ್ದಾರೆ.
Bangalore Metro : ಮೆಟ್ರೋ ಟ್ರೈನ್‌ನಲ್ಲಿ ಕುಸಿದು ಪ್ರಯಾಣಿಕ ಸಾವು; ನಿರ್ಲಕ್ಷ್ಯಕ್ಕೆ ಕೇಸ್ ದಾಖಲು
ತೀರ್ಥಹಳ್ಳಿಯಲ್ಲಿ ಜಿಂಕೆ ಶಿಕಾರಿ ಮಾಡಿದ ಇಬ್ಬರ ಬಂಧನ
ಶಿವಮೊಗ್ಗದ (Shivamogga News) ತೀರ್ಥಹಳ್ಳಿಯಲ್ಲಿ ಜಿಂಕೆ ಶಿಕಾರಿ ಮಾಡಿದ (Sale of deer meat) ಇಬ್ಬರ ಬಂಧನವಾಗಿದೆ. ಮಂಡಗದ್ದೆ ವಲಯದ ಕುಳ್ಳುಂಡೆ ಗ್ರಾಮದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿ ಆಗಿದ್ದಾನೆ.
ತೀರ್ಥಹಳ್ಳಿಯಲ್ಲಿ ಜಿಂಕೆ ಶಿಕಾರಿ ಮಾಡಿದ ಇಬ್ಬರ ಬಂಧನ, ಮತ್ತೊಬ್ಬ ಪರಾರಿ
ಮಳೆ ಅನಾಹುತಕ್ಕೆ ಪ್ರತ್ಯೇಕ ಕಡೆ ಮೂವರು ವೃದ್ಧೆಯರು ಸಾವು
ಭೀಕರ ಮಳೆಗೆ ಮನೆಗಳು ಬೀಳುತ್ತಿದ್ದು, ಜನರ ಬದುಕು ತತ್ತರಿಸುತ್ತಿದೆ. ಮಳೆ (Rain News) ಅನಾಹುತಕ್ಕೆ ಸಾವು-ನೋವು (Rain Effect) ಮುಂದುವರಿದಿದೆ. ಮಳೆ ಅನಾಹುತಕ್ಕೆ ಪ್ರತ್ಯೇಕ ಕಡೆಗಳಲ್ಲಿ ಮೂವರು ವೃದ್ಧೆಯರು ಮೃತಪಟ್ಟಿದ್ದಾರೆ.
Rain News : ಮಳೆ ಅನಾಹುತಕ್ಕೆ ಪ್ರತ್ಯೇಕ ಕಡೆ ಮೂವರು ವೃದ್ಧೆಯರು ಸಾವು
ಮಳೆಗೆ 212ಕ್ಕೂ ಹೆಚ್ಚು ಗ್ರಾಮಗಳ ಕರೆಂಟ್ ಕಟ್, ರೈಲು ಸಂಚಾರ ಸ್ಥಗಿತ
ರಾಜ್ಯಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಮಲೆನಾಡಿನ 212 ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ (Power cut) ಕಡಿತಗೊಂಡಿದೆ. ಇತ್ತ ಕಾರವಾರದಲ್ಲಿ ಭೂ ಕುಸಿತ ಉಂಟಾಗಿ ರೈಲು ಸಂಚಾರ (Rail running stop) ಸ್ಥಗಿತಗೊಂಡಿದೆ.
Rain News : ಮಳೆಗೆ 212ಕ್ಕೂ ಹೆಚ್ಚು ಗ್ರಾಮಗಳ ಕರೆಂಟ್ ಕಟ್; ರೈಲು ಸಂಚಾರ ಸ್ಥಗಿತ
Harassment Case : ಟಾಯ್ಲೆಟ್ಟಲ್ಲಿ ಹೆಣ್ಮಕ್ಕಳ ವಿಡಿಯೊ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ FIR
ಮುಸ್ಲಿಂ ವಿದ್ಯಾರ್ಥಿನಿಯರು ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಇತರ ಹೆಣ್ಣುಮಕ್ಕಳು ಶೌಚಾಲಯ ಬಳಸುವುದನ್ನು ಚಿತ್ರೀಕರಿಸಿಕೊಂಡ ಪ್ರಕರಣ ಸಂಬಂಧ ಕೊನೆಗೂ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.