Site icon Vistara News

Karnataka live news: ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳು; ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನ?: ತೇಜಸ್ವಿ ಸೂರ್ಯ, ಸಿ.ಟಿ. ರವಿ ಕಿಡಿ

karnataka live news

ಬೆಂಗಳೂರು: ಮುಂದುವರಿದ ಮಳೆಯಿಂದ ರಾಜ್ಯದ ನದಿಗಳು ತುಂಬಿ ಹರಿಯುತ್ತಿವೆ. ಇದರೊಂದಿಗೆ ರಾಜ್ಯದ ಇಂದಿನ ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ನೋಡಿ.

Deepa S

ಕಾಡುಗೊಲ್ಲರ ಸೂತಕದ ಸಂಪ್ರದಾಯಕ್ಕೆ ಮಗು ಬಲಿ

ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಕುಟುಂಬಸ್ಥರು ಇದೀಗ ಮೌಡ್ಯ ಆಚರಣೆಯಿಂದಾಗಿ ಮಗುವನ್ನೇ ಕಳೆದುಕೊಂಡಿದ್ದಾರೆ. ತುಮಕೂರು (Tumkur News) ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ (kadugollara Tradition) ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ (cold weather) ಬಳಲಿ ಮೃತಪಟ್ಟಿದೆ.

Tumkur News : ಕಾಡುಗೊಲ್ಲರ ಸೂತಕದ ಸಂಪ್ರದಾಯಕ್ಕೆ ಮಗು ಬಲಿ; ಚಳಿಯಲ್ಲಿ ನಡುಗಿ ಸಾವು
Deepa S

ಬೆಂಗಳೂರಲ್ಲಿ ದಿನವಿಡೀ ಜಿಟಿ ಜಿಟಿ ಮಳೆ; ಕರಾವಳಿಗೆ ರೆಡ್‌ ಅಲರ್ಟ್‌

ರಾಜಧಾನಿ ಬೆಂಗಳೂರಲ್ಲಿ ಸೂರ್ಯನ ದರ್ಶನಕ್ಕೆ ಮೋಡಗಳು ಅಡ್ಡಿಯಾಗಲಿದ್ದು, ದಿನವಿಡೀ ಜಿಟಿ ಜಿಟಿ (Rain News) ಮಳೆಯಾಗಲಿದೆ. ಆದರೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗಲಿದ್ದು, ರೆಡ್‌ ಅಲರ್ಟ್‌ (weather report)ನೀಡಲಾಗಿದೆ. ಜು.26ರಂದು ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಂದೆರಡು ಕಡೆಗಳಲ್ಲಿ ಅತ್ಯಂತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

Weather Report : ಬೆಂಗಳೂರಲ್ಲಿ ದಿನವಿಡೀ ಜಿಟಿ ಜಿಟಿ ಮಳೆ; ಕರಾವಳಿಗೆ ರೆಡ್‌ ಅಲರ್ಟ್‌!
Harish Kera

ತಣಿಯದ ಬಿ.ಕೆ ಹರಿಪ್ರಸಾದ್‌ ಸಿಟ್ಟು

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ ಮುಖಂಡ ಬಿ.ಕೆ ಹರಿಪ್ರಸಾದ್ ಅವರ ಆಕ್ರೋಶ ತಣಿಸಿ ಮನವೊಲಿಸುವ ಕೈ ನಾಯಕರ ಪ್ರಯತ್ನ ವಿಫಲವಾಗಿದೆ. ಹರಿಪ್ರಸಾದ್ ಜೊತೆಗೆ ಡಿಸಿಎಂ ಡಿಕೆಶಿ ಹಾಗೂ ಕೆ.ಎಚ್ ಮುನಿಯಪ್ಪ ನಡೆಸಿದ ಸುದೀರ್ಘ ಮಾತುಕತೆ ಬಗೆಹರಿದಿಲ್ಲ.

Exit mobile version