ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಬಿಗ್ ಬಾಸ್ ಸೀಸನ್ 10 ಸ್ಪರ್ಧಿ, ಪ್ರಗತಿಪರ ಕೃಷಿಕ ವರ್ತೂರು ಸಂತೋಷ್ ಅವರಿಗೆ ಕೋರ್ಟ್ ಜಾಮೀನು ನೀಡಿದೆ.ಹುಲಿಯುಗುರಿನ ಪೆಂಡೆಂಟ್ ಧರಿಸಿದ್ದನ್ನು ಟಿವಿಯಲ್ಲಿ ಗಮನಿಸಿದ್ದ ಅರಣ್ಯಾಧಿಕಾರಿಗಳು ಕಳೆದ ಭಾನುವಾರ ಬಿಗ್ ಬಾಸ್ ಮನೆಗೇ ದಾಳಿ ನಡೆಸಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು.. ಸೋಮವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಕೋರ್ಟ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಅದರ ನಡುವೆ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯ ಬಳಿಕ ಈಗ ಜಾಮೀನಿಗಡಿ ಬಿಡುಗಡೆಗೆ ಕೋರ್ಟ್ ಆದೇಶ ಮಾಡಿದೆ. ಇದರೊಂದಿಗೆ ಭಾರಿ ಸದ್ದು ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದಂತಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಿತರ ಪ್ರಮುಖ ಸುದ್ದಿಗಳನ್ನು (Karnataka Live News) ಇಲ್ಲಿಯೇ ಓದಿ.
ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ್
ಅನುಭವ ಮಂಟಪದ ರೂವಾರಿ ಬಸವೇಶ್ವರರ ಹೆಸರನ್ನು ‘ನಮ್ಮ ಮೆಟ್ರೋʼಗೆ ಇಡುವ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (Namma Metro) ಶುಕ್ರವಾರ ತಿಳಿಸಿದರು.
Namma Metro: ನಮ್ಮ ಮೆಟ್ರೋಗೆ ಬಸವೇಶ್ವರರ ಹೆಸರಿಡಲು ಸಿಎಂ ಜತೆ ಚರ್ಚೆ: ಎಂ.ಬಿ. ಪಾಟೀಲ್
ಅರಣ್ಯಾಧಿಕಾರಿಗೂ ಹುಲಿ ಉಗುರು ಸಂಕಷ್ಟ; ಅಮಾನತಾದ ಬೆನ್ನಲ್ಲೇ ಅರೆಸ್ಟ್
ಹುಲಿ ಉಗುರು ಪ್ರಕರಣದಲ್ಲಿ (Tiger Nail) ಅಮಾನತಾಗಿದ್ದ ಅರಣ್ಯ ಅಧಿಕಾರಿಯನ್ನು ಬಂಧಿಸಲಾಗಿದೆ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕಳಸ ಉಪ ವಲಯ ಅರಣ್ಯಾಧಿಕಾರಿಯೊಬ್ಬರನ್ನು (ಡಿಆರ್‌ಎಫ್‌ಒ) ಅಮಾನತು ಮಾಡಲಾಗಿತ್ತು. ಅದಾದ ಬೆನ್ನಲ್ಲೇ ಅವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
Tiger Nail: ಅರಣ್ಯಾಧಿಕಾರಿಗೂ ಹುಲಿ ಉಗುರು ಸಂಕಷ್ಟ; ಅಮಾನತಾದ ಬೆನ್ನಲ್ಲೇ ಅರೆಸ್ಟ್
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; 3 ಆರೋಪಿಗಳ ಪತ್ತೆಗೆ ನಗದು ಬಹುಮಾನ ಘೋಷಿಸಿದ ಎನ್‌ಐಎ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ (Praveen Nettaru) ಮೂವರು ಆರೋಪಿಗಳ ಪತ್ತೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 2 ಲಕ್ಷ ಬಹುಮಾನ ಘೋಷಣೆ ಮಾಡಿದೆ. ಆರೋಪಿಗಳಾದ ಅಬ್ದುಲ್ ನಾಸೀರ್, ನೌಷದ್ ಹಾಗೂ ಅಬ್ದುಲ್ ರಹಮಾನ್ ಸುಳಿವು ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ಎನ್‌ಐಎ ತಿಳಿಸಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; 3 ಆರೋಪಿಗಳ ಪತ್ತೆಗೆ ನಗದು ಬಹುಮಾನ ಘೋಷಿಸಿದ ಎನ್‌ಐಎ
ಮೊಬೈಲ್ ಕಳ್ಳರ ಕೋಟೆ ಭೇದಿಸಿದ ಪೊಲೀಸ್ರು; ಗೋರಿಪಾಳ್ಯದಲ್ಲಿ ಸಿಕ್ಕಿದ್ದು ಎಷ್ಟು?
ರಾಜಧಾನಿ ಬೆಂಗಳೂರಲ್ಲಿ ಪ್ರತಿನಿತ್ಯ ನೂರಾರು ಮೊಬೈಲ್ ಫೋನ್‌ಗಳ (Mobile Theft) ಕಳ್ಳತನ ಆಗುತ್ತವೆ. ಆದರೆ ಆ ಮೊಬೈಲ್‌ಗಳು ಎಲ್ಲಿ? ಯಾರ ಕೈ ಸೇರುತ್ತವೆ ಎಂಬುದೇ ತಿಳಿದಿರಲಿಲ್ಲ. ಇಂತಹ ನಿಗೂಢ ಪ್ರಕರಣವನ್ನು ಭೇದಿಸಿರುವ ಬನ್ನೇರುಘಟ್ಟ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ 1 ಸಾವಿರಕ್ಕೂ ಅಧಿಕ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
https://vistaranews.com/karnataka/bengaluru/mobile-theft-bannerghatta-police-arrest-mobile-thieves-in-goripalya/491759.html
ಮುಂಬೈ ಲೋಕಲ್ ಟ್ರೈನ್‌ನಂತಾಯ್ತು ನಮ್ಮ ಮೆಟ್ರೋ; ಹತ್ತಕ್ಕಾಗಲ್ಲ, ಇಳಿಯೋಕ್ಕಾಗಲ್ಲ!
ಮುಂಜಾನೆ, ಮುಸ್ಸಂಜೆ ವೇಳೆ ನಮ್ಮ ಮೆಟ್ರೋ ರೈಲಿನಲ್ಲಿ ಕಾಲಿಡಲು ಆಗದಷ್ಟು ಜನಸಂದಣಿ ಹೆಚ್ಚಾಗಿದೆ. ನಮ್ಮ ಮೆಟ್ರೋ ವಿಸ್ತೃತ ನೇರಳೆ ಮಾರ್ಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ವಿಸ್ತರಿತಗೊಂಡಿದ್ದೆ ತಡ ರೈಲಿನಲ್ಲಿ ಜನರು ತುಂಬಿ (Namma Metro) ತುಳುಕುತ್ತಿರುತ್ತಾರೆ. ಸದ್ಯ ಬೆಂಗಳೂರು ನಮ್ಮ ಮೆಟ್ರೋ ರೈಲು ಮುಂಬೈ ಲೋಕಲ್ ಟ್ರೈನ್ ರೀತಿ ಆಗಿದೆ ಎಂದು ವಿಡಿಯೊವೊಂದನ್ನು ಹಾಕಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Namma Metro : ಮುಂಬೈ ಲೋಕಲ್ ಟ್ರೈನ್‌ನಂತಾಯ್ತು ನಮ್ಮ ಮೆಟ್ರೋ; ಹತ್ತಕ್ಕಾಗಲ್ಲ, ಇಳಿಯೋಕ್ಕಾಗಲ್ಲ!