Site icon Vistara News

Karnataka Live News: ಹುಲಿಯುಗುರು ಪ್ರಕರಣ; ಬಿಗ್‌ ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ಗೆ ಜಾಮೀನು

Varthur Santosh releaseon on bail

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಬಿಗ್‌ ಬಾಸ್‌ ಸೀಸನ್‌ 10 ಸ್ಪರ್ಧಿ, ಪ್ರಗತಿಪರ ಕೃಷಿಕ ವರ್ತೂರು ಸಂತೋಷ್‌ ಅವರಿಗೆ ಕೋರ್ಟ್‌ ಜಾಮೀನು ನೀಡಿದೆ.ಹುಲಿಯುಗುರಿನ ಪೆಂಡೆಂಟ್‌ ಧರಿಸಿದ್ದನ್ನು ಟಿವಿಯಲ್ಲಿ ಗಮನಿಸಿದ್ದ ಅರಣ್ಯಾಧಿಕಾರಿಗಳು ಕಳೆದ ಭಾನುವಾರ ಬಿಗ್‌ ಬಾಸ್‌ ಮನೆಗೇ ದಾಳಿ ನಡೆಸಿ ವರ್ತೂರು ಸಂತೋಷ್‌ ಅವರನ್ನು ಬಂಧಿಸಿದ್ದರು.. ಸೋಮವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಕೋರ್ಟ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಅದರ ನಡುವೆ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯ ಬಳಿಕ ಈಗ ಜಾಮೀನಿಗಡಿ ಬಿಡುಗಡೆಗೆ ಕೋರ್ಟ್‌ ಆದೇಶ ಮಾಡಿದೆ. ಇದರೊಂದಿಗೆ ಭಾರಿ ಸದ್ದು ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದಂತಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಿತರ ಪ್ರಮುಖ ಸುದ್ದಿಗಳನ್ನು (Karnataka Live News) ಇಲ್ಲಿಯೇ ಓದಿ.

Deepa S

ರಕ್ತ ಚಿಮ್ಮುವಂತೆ ಗುಂಪುಗಳ ನಡುವೆ ಹೊಡೆದಾಟ ಬಡಿದಾಟ!

ಪ್ರತ್ಯೇಕ ಕಡೆಗಳಲ್ಲಿ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಕಲಬುರಗಿಯಲ್ಲಿ ಯುವಕರ ಗುಂಪೊಂದು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರೆ, ರಾಮನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿಮೀರಿದೆ. ಮಂಗಳೂರಲ್ಲಿ ಮೂವರು ಯುವಕರಿಗೆ ಚೂರಿ ಇರಿಯಲಾಗಿದೆ.

https://vistaranews.com/karnataka/assault-case-group-clashes-at-isolated-places/491635.html

Deepa S

ಪತ್ನಿಗೆ ಕಚ್ಚಿ, ಸಿಗರೇಟ್‌ನಿಂದ ಮೈ-ಕೈ ಸುಟ್ಟಿರುವ ಸೈಕೋ ಪತಿ!

ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಸೈಕೋಪಾಥ್‌ ಪತಿಯೊಬ್ಬ ಪತ್ನಿಗೆ ಸಿಗರೇಟ್‌ನಿಂದ ಮೈ-ಕೈ ಸುಟ್ಟು, ಕಚ್ಚಿದ್ದಾನೆ. ಪತಿಯ ನಿರಂತರ ಕಾಟಕ್ಕೆ ಬೇಸತ್ತು ನೊಂದ (Husband Torture) ಮಹಿಳೆ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ಇತ್ತ ಪೊಲೀಸರು ದೂರು ದಾಖಲಿಸಿಕೊಳ್ಳದೇ ರಾಜಿಗೆ ಯತ್ನಿಸಿದ್ದಾರೆ.

https://vistaranews.com/karnataka/tumakuru/husband-torture-psycho-husband-bites-wife-burns-hands-with-cigarette/491549.html

Krishna Bhat

Tiger Nail : ಲಕ್ಷ್ಮೀ ಹೆಬ್ಬಾಳ್ಕರ್‌ ಮನೆಗೂ ಅಧಿಕಾರಿಗಳ ಲಗ್ಗೆ; ಮಗ ಮೃಣಾಲ್‌ ಪೆಂಡೆಂಟ್‌ ವಶಕ್ಕೆ
Deepa S

ಹೊಡೆದು ಬಡಿದು ಹಿಂಸೆ ಕೊಡುವ ಗಂಡ; ಠಾಣೆ ಮೆಟ್ಟಿಲೇರಿದ ನಾಯಕ ನಟಿ

ಹೊಡೆದು ಬಡಿದು ದೈಹಿಕವಾಗಿ ನನ್ನ ಪತಿ ನನಗೆ ಹಿಂಸೆಯನ್ನು (Assault Case) ನೀಡುತ್ತಿದ್ದಾರೆ ಎಂದು ಕೋಲಾರ 1990 ಚಿತ್ರದ ನಾಯಕ ನಟಿ ನೇಹಾ ಸರ್ವಾರ್ ಠಾಣೆ ಮೆಟ್ಟಿಲೇರಿದ್ದಾರೆ.

https://vistaranews.com/karnataka/bengaluru/assault-case-1990-film-lead-actress-neha-sarwar-harassed-by-husband/491409.html

Deepa S

ಡಿವೋರ್ಸ್‌ಗಾಗಿ ಪತ್ನಿಯ ಖಾಸಗಿ ಫೋಟೊ ಅಪ್ಲೋಡ್‌ ಮಾಡಿದ ಇನ್ಸ್‌ಪೆಕ್ಟರ್‌!

ಪತಿಯೇ ಪತ್ನಿ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್‌ ಖಾತೆ ತೆಗೆದು ಖಾಸಗಿ ಫೋಟೊ ಅಪ್‌ಲೋಡ್‌ ಮಾಡಿರುವ ಆರೋಪವೊಂದು (Husband assault) ಕೇಳಿ ಬಂದಿದೆ. ಶರವಣ್ ಕುಮಾರ್ ಎಂಬಾತನ ವಿರುದ್ಧ ಪತ್ನಿ ಗರೀಮಾ ಕುಮಾರಿ ಎಂಬುವವರು ದೂರು ನೀಡಿದ್ದಾರೆ.

https://vistaranews.com/karnataka/bengaluru/husband-assault-inspector-uploads-wifes-private-photo-for-divorce/491367.html

Exit mobile version