ಬೆಂಗಳೂರು: ರಾಜ್ಯಾದ್ಯಂತ ಹಲವು ಕಡೆ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಇದನ್ನೂ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ಇಲ್ಲಿ ಗಮನಿಸಿ.
ಶೌಚಾಲಯದಲ್ಲಿ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ
ಚಿಕ್ಕಮಗಳೂರು : ಇಲ್ಲಿನ ಕೊಪ್ಪ ತಾಲೂಕಿನ (Chikkamagaluru News) ಮೊರಾರ್ಜಿ ವಸತಿ ಶಾಲೆಯ (Morarji Residential School) ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 9ನೇ ತರಗತಿಯಲ್ಲಿ ಓದುತ್ತಿರುವ ಅಮೂಲ್ಯ (15 ) ಶೌಚಾಲಯದಲ್ಲಿ ನೇಣಿಗೆ (Self Harming) ಶರಣಾಗಿದ್ದಾಳೆ.
Self Harming : ಶೌಚಾಲಯದಲ್ಲಿ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ!
ಬೆಂಗಳೂರಲ್ಲಿ ತಗ್ಗಿದ ಮಳೆ, ಕರಾವಳಿ- ಮಲೆನಾಡಲ್ಲಿ ಮುಂದುವರಿದ ಅಬ್ಬರ
ರಾಜ್ಯದಲ್ಲಿ ಇನ್ನೈದು ದಿನ ಮಳೆ ಆರ್ಭಟ (Rain News) ಮುಂದುವರಿಯಲಿದೆ. ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಧಾರಾಕಾರ (Weather report) ಮಳೆಯಾಗಲಿದೆ.
Weather Report : ಬೆಂಗಳೂರಲ್ಲಿ ತಗ್ಗಿದ ಮಳೆ; ಕರಾವಳಿ, ಮಲೆನಾಡಲ್ಲಿ ಮುಂದುವರಿದ ಅಬ್ಬರ
ಒಕ್ಕಲಿಗರಿಗೇ ರಾಜ್ಯ ಬಿಜೆಪಿ ಅಧ್ಯಕ್ಷ ಪಟ್ಟ?
ಬೆಂಗಳೂರು: ರಾಜ್ಯ ಬಿಜೆಪಿಯ ಅಧ್ಯಕ್ಷರ ಆಯ್ಕೆಯ ಚಟುವಟಿಕೆ ಬಿರುಸಾಗಿದೆ. ಜೆಡಿಎಸ್ ಜತೆಗಿನ ಮೈತ್ರಿ, ವಿಲೀನ ಸದ್ಯಕ್ಕಿಲ್ಲ ಎಂಬುದು ದೇವೇಗೌಡರ ರೆಡ್‌ಸಿಗ್ನಲ್ ನಂತರ ಸ್ಪಷ್ಟವಾಗಿದ್ದು, ಮತ್ತಷ್ಟು ಕಾಯದೆ ರಾಜ್ಯ ಅಧ್ಯಕ್ಷರ ನೇಮಕ ಮಾಡುವ ಕಡೆಗೆ ಪಕ್ಷ ಗಮನ ನೀಡಿದೆ. ಎರಡು ಪ್ರಬಲ ಸಮುದಾಯಗಳಿಗೆ ಮಣೆ ಹಾಕಬೇಕಾದ ಅನಿವಾರ್ಯತೆಯಿದ್ದು, ಒಕ್ಕಲಿಗರಿಗೆ ಒಲಿಯುವ ನಿರೀಕ್ಷೆ ಇದೆ.