Site icon Vistara News

Karnataka Live News: ಮೋದಿ, ಸಿಎಂ ಹೆಸರು ಬಳಸಿ ಕಾಲ್‌; ಮಠ, ಉದ್ಯಮಿಗಳಿಗೆ ಮಹಾ ವಂಚನೆ

Karave Protest

ಬೆಂಗಳೂರು: ಕರವೇ ಅಧ್ಯಕ್ಷ ನಾರಾಯಣ ಗೌಡ ಮತ್ತು ಸಂಗಡಿಗರಿಗೆ 14 ದಿನಗಳ ನ್ಯಾಯಾಂಗ ಬಂಧನ, ಇಂದು ಸಿಎಂ ಮತ್ತು ಸಚಿವರ ಮನೆಗಳ ಮುಂದೆ ಕರವೇ ಕಾರ್ಯಕರ್ತರ ಪ್ರತಿಭಟನೆ ಸೇರಿದಂತೆ ಇಂದಿನ ಮಹತ್ವದ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್‌ (Karnataka Live News) ಇಲ್ಲಿದೆ.

Deepa S

ವಿವಾಹಿತೆಯೊಂದಿಗೆ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡ ಯುವಕ

ಒಂದೇ ಮರಕ್ಕೆ ನೇಣು ಬಿಗಿದುಕೊಂಡು (Lovers Death) ಗೃಹಿಣಿ ಹಾಗೂ ಯುವಕ ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಎಸ್ ಜಿಡಿಮಾಕಲಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅನುಸೂಯ (35), ವಿಜಯ್ ಕುಮಾರ್ (27) ಮೃತರು.

Lovers Death : ವಿವಾಹಿತೆಯೊಂದಿಗೆ ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡ ಯುವಕ
Deepa S

ಶಿಕ್ಷಣ ಸಚಿವರ ತವರೂರಲ್ಲೇ ಶಾಲಾ ಮಕ್ಕಳಿಂದ ಟಾಯ್ಲೆಟ್‌ ಕ್ಲೀನಿಂಗ್‌!

ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿರುವ ಅಂದ್ರಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛತೆ (Toilet Cleaning) ಮಾಡಿಸಿರುವ ಪ್ರಕರಣ ಮಾಸುವೇ ಮುನ್ನವೇ ಇದೀಗ ಶಿವಮೊಗ್ಗದಲ್ಲೂ ಮಕ್ಕಳಿಂದ ಟ್ಲಾಯೆಟ್‌ ಕ್ಲೀನಿಂಗ್‌ ಮಾಡಿಸಲಾಗಿದೆ. ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.

Toilet Cleaning: ಶಿಕ್ಷಣ ಸಚಿವರ ತವರೂರಲ್ಲೇ ಶಾಲಾ ಮಕ್ಕಳಿಂದ ಟಾಯ್ಲೆಟ್‌ ಕ್ಲೀನಿಂಗ್‌!
Deepa S

ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಬಲಿ ಪಡೆದ ಬಿಎಂಟಿಸಿ

ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ (Killer BMTC) ಮತ್ತೊಬ್ಬರು ಬಲಿಯಾಗಿದ್ದಾರೆ. ನಗರದ ಸುಬ್ಬಯ್ಯ ಸರ್ಕಲ್ ಬಳಿ ಅಪಘಾತ (Road Accident) ಸಂಭವಿಸಿದೆ. ಪುಷ್ಪ (51) ಎಂಬಾಕೆ ಬಿಎಂಟಿಸಿಗೆ ಬಲಿಯಾದವರು.

Killer BMTC : ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಬಲಿ ಪಡೆದ ಬಿಎಂಟಿಸಿ
Deepa S

ಬಾಲಕಿ ಮೇಲೆ ಎರಗಿ ಕಿತ್ತು ತಿಂದ ಹುಚ್ಚು ನಾಯಿಗಳು

ಕಲಬುರಗಿ ನಗರದ ಮಿಜ್ಬಾ ನಗರದಲ್ಲಿ ಹುಚ್ಚು ನಾಯಿಗಳ (Dog Bite) ಹಾವಳಿ ಹೆಚ್ಚಾಗಿದ್ದು, ಜನರ ನಿದ್ದೆಗೆಡಿಸಿದೆ. ರಸ್ತೆಯಲ್ಲಿ ಓಡಾಡುವವರ ಮೇಲೆ ಎರಗಿ ಕಚ್ಚುತ್ತಿದ್ದು, ಜನರು ಭಯಗೊಂಡಿದ್ದಾರೆ. ಮಿಜ್ಬಾ ನಗರದಲ್ಲಿ ಹುಚ್ಚು ನಾಯಿ ಕಡಿತ (Dog Bite) ಪ್ರಕರಣಗಳು ಹೆಚ್ಚಾಗಿವೆ. ಸದ್ಯ ಬಾಲಕಿಯೊಬ್ಬ ಮೇಲೆ ಹುಚ್ಚು ನಾಯಿಗಳು ದಾಳಿ ಮಾಡಿದೆ.

Dog Bite : ಬಾಲಕಿ ಮೇಲೆ ಎರಗಿ ಕಿತ್ತು ತಿಂದ ಹುಚ್ಚು ನಾಯಿಗಳು
Deepa S

ಹೈ ಸ್ಕೂಲ್‌ ಸ್ಟೂಡೆಂಟ್ ಜತೆಗೆ ಹೆಡ್‌ ಮಿಸ್‌ ರೊಮ್ಯಾಂಟಿಕ್‌ ಫೋಟ್‌ ಶೂಟ್‌

ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವೇಳೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು (teacher romance with student) ಹದಿಹರೆಯದ ವಿದ್ಯಾರ್ಥಿಯೊಂದಿಗೆ ಮುದ್ದಾಡಿ, ಜತೆಗೆ ರೊಮ್ಯಾಂಟಿಕ್‌ ಆಗಿ ಫೋಟೊ ಶೂಟ್‌ ಮಾಡಿಸಿದ್ದಾರೆ. ಹೈ ಸ್ಕೂಲ್‌ ವಿದ್ಯಾರ್ಥಿ ಜತೆಗೆ ತೆಗೆದ ಫೋಟೊ, ವಿಡಿಯೊ ವೈರಲ್‌ ಆಗಿದ್ದು, ಮುಖ್ಯ ಶಿಕ್ಷಕಿಯ ವರ್ತನೆಗೆ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

Teacher Romance : ಹೈ ಸ್ಕೂಲ್‌ ಸ್ಟೂಡೆಂಟ್ ಜತೆಗೆ ಹೆಡ್‌ ಮಿಸ್‌ ರೊಮ್ಯಾಂಟಿಕ್‌ ಫೋಟ್‌ ಶೂಟ್‌!
Exit mobile version