Site icon Vistara News

Karnataka live news: ಸರ್ಕಾರಿ ಶಿಕ್ಷಕರಿಗೆ Good News; ಗಣತಿ, ಚುನಾವಣಾ ಕೆಲಸಕ್ಕೆ ಬಳಸದಂತೆ ಆಯೋಗಕ್ಕೆ ಸೂಚನೆ

karnataka live news

ಬೆಂಗಳೂರು: ಸರ್ಕಾರಿ ಶಾಲೆ ಶಿಕ್ಷಕ/ಶಿಕ್ಷಕಿಯರನ್ನು ಅನ್ಯ ಕಾರ್ಯಕ್ಕೆ ನಿಯೋಜಿಸದಂತೆ ಶಿಕ್ಷಣ ಇಲಾಖೆ ಆಯುಕ್ತರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಇದೂ ಸೇರಿದಂತೆ ರಾಜ್ಯದ ಇಂದಿನ ಹಲವು ಪ್ರಮುಖ ಸುದ್ದಿ ಬೆಳವಣಿಗೆಗಳಿಗಾಗಿ (Karnataka live news) ಇಲ್ಲಿ ಗಮನಿಸಿ.

Adarsha Anche

Karnataka Politics : ಸಚಿವರಿಂದ 6 ಪರ್ಸೆಂಟ್ ವರ್ಗಾವಣೆ‌, ಬಾಕಿಯದ್ದು ಸಿಎಂಗೆ: ಸತೀಶ್‌ ಜಾರಕಿಹೊಳಿ

ರಾಜ್ಯದಲ್ಲಿ ವರ್ಗಾವಣೆ ದಂಧೆ ಪ್ರಾರಂಭವಾಗಿದೆ. ನಾವು ಒಂದು ವರ್ಗಾವಣೆಗೆ ಶಿಫಾರಸು ಮಾಡಿದರೂ ಸಚಿವರಿಗೆ ಹಣ ಕೊಡಬೇಕು ಎಂದು ಕಾಂಗ್ರೆಸ್‌ ಶಾಸಕರು ದೂರಿದ್ದರು. ಆದರೆ, ಇದಕ್ಕೆ ಈಗ ಸ್ಪಷ್ಟನೆ ನೀಡಿರುವ ಸಚಿವ ಸತೀಶ್‌ ಜಾರಕಿಹೊಳಿ, ವರ್ಗಾವಣೆ ಸಂಬಂಧ ಇತಿಮಿತಿಗಳು ಇರುತ್ತವೆ. ಸಚಿವರಿಗೆ ಶೇಕಡಾ 6ರಷ್ಟು ಮಾತ್ರ ವರ್ಗಾವಣೆ ಮಾಡಲು ಅಧಿಕಾರ ಇರುತ್ತದೆ ಎಂದು ಹೇಳಿದ್ದಾರೆ.

http://vistaranews.com/karnataka/karnataka-politics-6-percent-transfer-from-minister-remaining-to-cm-says-satish-jarkiholi/412443.html

Adarsha Anche

Shadow CM : ಸಿಎಂ ಸಿದ್ದರಾಮಯ್ಯಗೆ ಯತೀಂದ್ರ ಶ್ಯಾಡೊ ಸಿಎಂ; ಸಿಕ್ಕಿತು ದಾಖಲೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಶ್ಯಾಡೊ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಇದನ್ನು ಕಾಂಗ್ರೆಸ್‌ ತಳ್ಳಿ ಹಾಕಿತ್ತು. ಈಗ ಶ್ಯಾಡೊ ಸಿಎಂ ಆರೋಪಕ್ಕೆ ಪುಷ್ಟಿ ನೀಡುವಂತಹ ವಿಷಯ ಸಿಕ್ಕಿದೆ.

http://vistaranews.com/karnataka/yathindra-shadow-cm-to-chief-minister-siddaramaiah-found-the-record/412352.html

Adarsha Anche

Weather report : ಉತ್ತರ ಕರ್ನಾಟಕದಲ್ಲಿ ಬಿರು ಮಳೆ; ಕರಾವಳಿ, ಮಲೆನಾಡಲ್ಲೂ ಅಬ್ಬರ!

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಪ್ರಾರಂಭವಾಗಿದೆ. ಬೀದರ್‌, ಕಲಬುರಗಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ವರುಣ ಅಬ್ಬರ ಇರಲಿದೆ. ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ.

http://vistaranews.com/karnataka/weather-report-heavy-rains-lash-north-karnataka-coastal-and-malnad-areas/412318.html

Krishna Bhat

School Teachers : ಸರ್ಕಾರಿ ಶಿಕ್ಷಕರಿಗೆ Good News; ಗಣತಿ, ಚುನಾವಣಾ ಕೆಲಸಕ್ಕೆ ಬಳಸದಂತೆ ಆಯೋಗಕ್ಕೆ ಸೂಚನೆ
Harish Kera

ಸಿಎಂ ವಿರುದ್ಧ ಮೂಲ ಕಾಂಗ್ರೆಸಿಗರ ಅಸಮಾಧಾನ?

ಬೆಂಗಳೂರು: ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಿ.ಕೆ ಹರಿಪ್ರಸಾದ್‌ ಹೇಳಿಕೆಯಿಂದ ಮೂಲ ಕಾಂಗ್ರೆಸ್ ನಾಯಕರ ಟೀಮ್ ಒಳಗೊಳಗೇ ಸಂತಸಪಡುತ್ತಿದೆ. ಡಿಕೆಶಿ, ಮುನಿಯಪ್ಪ, ಪರಮೇಶ್ವರ್ ಪ್ರತ್ಯೇಕ ಭೇಟಿ ಮತ್ತು ಮಾತುಕತೆ ನಡೆಸಿದ್ದಾರೆ. ಸಿಎಂ ವಿರುದ್ಧ ಮೂಲ ಕಾಂಗ್ರೆಸಿಗರು ಒಟ್ಟಾಗುತ್ತಿದ್ದಾರೆ ಎಂಬ ಗುಸುಗುಸು ಕಾಂಗ್ರೆಸ್‌ನಲ್ಲಿ ಹೊಗೆಯಾಡುತ್ತಿದೆ.

Exit mobile version