ಬೆಂಗಳೂರು: ನಾಳೆ ವಾಟಾಳ್ ನಾಗರಾಜ್ ಮತ್ತಿತರರು ಕರೆ ನೀಡಿರುವ ಕರ್ನಾಟಕ ಬಂದ್ (karnataka bandh) ತಯಾರಿ, ಪೊಲೀಸರ ಬಿಗಿ ಭದ್ರತೆ, ಬಂದ್‌ಗೆ ಚಿತ್ರೋದ್ಯಮ ಬೆಂಬಲ, ರಾಜಕೀಯ ಬೆಳವಣಿಗೆಗಳು ಸೇರಿದಂತೆ ರಾಜ್ಯದ ಇಂದಿನ ಮಹತ್ವದ ಸುದ್ದಿಗಳನ್ನು (Karnataka Live News) ತಿಳಿಯಲು ಇಲ್ಲಿ ಗಮನಿಸಿ.
ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್
ಕರಾವಳಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ (Rain News) ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ, ಬೆಳಗಾವಿ, ಬೀದರ್, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ (Weather report) ಇದೆ. ಹೀಗಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
http://vistaranews.com/weather/weather-report-yellow-alert-issued-for-7-districts-of-the-state/466356.html
ಧಾರಾಕಾರ ಮಳೆಗೆ ಕುಸಿದು ಬಿದ್ದ ಗೋಡೆ; ಬಾಲಕಿ ದಾರುಣ ಸಾವು
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ (Rain News) ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಸತತ ಮಳೆಗೆ ಮನೆ ಗೋಡೆ (Wall collapse) ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬಾಜೋಳಗಾ ಗ್ರಾಮದಲ್ಲಿ ನಡೆದಿದೆ.
http://vistaranews.com/weather/rain-news-girl-dies-after-wall-collapses-due-to-rain/466319.html
ಕರ್ನಾಟಕ ಬಂದ್ ಬಿಸಿ ನಡುವೆ ಈ 8 ನಿಲ್ದಾಣಗಳಲ್ಲಿ ಮೆಟ್ರೋ ರೈಲು ಓಡಾಟವಿಲ್ಲ!
ಕರ್ನಾಟಕ ಬಂದ್ (Karnataka Bandh) ಬಿಸಿ ನಡುವೆಯೇ ಬಿಎಂಆರ್‌ಸಿಎಲ್ (Namma Metro) ಕೆಲವು ಮಾರ್ಗದಲ್ಲಿ ಸುರಕ್ಷತಾ ಪರಿಶೀಲನೆಗೆ ಮುಂದಾಗಿದೆ. ಇದರಿಂದಾಗಿ ಸೆಪ್ಟೆಂಬರ್ 29ರಂದು ಮೆಟ್ರೋ ರೈಲಿನ ಒಂದು ಮಾರ್ಗದಲ್ಲಿ ಇಡೀ ದಿನ ಸಂಚಾರ (No metro service full day on sep 29) ಇರುವುದಿಲ್ಲ.
http://vistaranews.com/karnataka/namma-metro-karnataka-bandh-no-metro-rail-services-at-these-8-stations/466307.html
ನಾಳೆ ಕರ್ನಾಟಕ ಬಂದ್; ಈ ಪರೀಕ್ಷೆಗಳು ಮುಂದಕ್ಕೆ
ಕಾವೇರಿ ನೀರಿಗಾಗಿ ಹೋರಾಟದ (Cauvery Water Dispute) ಕಿಚ್ಚು ಹೆಚ್ಚಾಗುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ, ರೈತ ಪರ ಸಂಘಟನೆಗಳಿಂದ ಕರ್ನಾಟಕ ಬಂದ್ (Karnataka Bandh) ಕರೆ ನೀಡಲಾಗಿದೆ. ಸೆ.29ಕ್ಕೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಿಗದಿಯಾಗಿದ್ದ ಪರೀಕ್ಷೆಗಳನ್ನು (Exams Postponed) ಮುಂದೂಡಲಾಗಿದೆ.
http://vistaranews.com/karnataka/cauvery-water-dispute-karnataka-bandh-tomorrow-these-exams-have-been-postponed/466250.html
ಬೈಕ್‌ಗೆ ಡಿಕ್ಕಿ ಹೊಡೆದು ಕಂದಕ್ಕೆ ಉರುಳಿದ ಲಾರಿ; ಮೂವರು ಗಂಭೀರ
ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ವರದಿ ಆಗಿವೆ. ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಕಂದಕ್ಕೆ ಉರುಳಿದರೆ, ಮತ್ತೊಂದು ಕಡೆ ಅಪರಿಚಿತ ವಾಹನವೊಂದು ಬೈಕ್‌ಗೆ ಗುದ್ದಿದೆ.
http://vistaranews.com/karnataka/road-accident-lorry-collides-with-bike/466144.html