ಬೆಂಗಳೂರು: ನಾಳೆ ವಾಟಾಳ್ ನಾಗರಾಜ್ ಮತ್ತಿತರರು ಕರೆ ನೀಡಿರುವ ಕರ್ನಾಟಕ ಬಂದ್ (karnataka bandh) ತಯಾರಿ, ಪೊಲೀಸರ ಬಿಗಿ ಭದ್ರತೆ, ಬಂದ್‌ಗೆ ಚಿತ್ರೋದ್ಯಮ ಬೆಂಬಲ, ರಾಜಕೀಯ ಬೆಳವಣಿಗೆಗಳು ಸೇರಿದಂತೆ ರಾಜ್ಯದ ಇಂದಿನ ಮಹತ್ವದ ಸುದ್ದಿಗಳನ್ನು (Karnataka Live News) ತಿಳಿಯಲು ಇಲ್ಲಿ ಗಮನಿಸಿ.
ಅಕ್ರಮ ಸಂಬಂಧಕ್ಕೆ ಯುವಕನ ಕೊಂದ ವಾಚ್‌ಮ್ಯಾನ್ ನೇಣಿಗೆ ಶರಣು
ಪ್ರತ್ಯೇಕ ಕಡೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ವರದಿ ಆಗಿವೆ. ಹುಬ್ಬಳ್ಳಿಯಲ್ಲಿ ಕೊಲೆ ಆರೋಪಿಯೊಬ್ಬ ನೇಣಿಗೆ ಶರಣಾಗಿದ್ದರೆ, ಧಾರವಾಡದಲ್ಲಿ ಸಾಲಬಾಧೆಗೆ ರೈತ ಮೃತಪಟ್ಟಿದ್ದಾರೆ.
https://vistaranews.com/karnataka/self-harming-murder-accused-commits-suicide/466044.html
ಗೋವುಗಳ ಜತೆಗೆ ಎಸ್ಕೇಪ್ ಆಗುತ್ತಿದ್ದ ದುರುಳರು; ಚೇಸ್ ಮಾಡಿ ಬಗ್ಗು ಬಡಿದ ಖಾಕಿ ಪಡೆ
ಪೊಲೀಸ್ ಬ್ಯಾರಿಕೇಡ್‌ಗೆ ಗುದ್ದಿ ಪರಾರಿ ಆಗುತ್ತಿದ್ದ ದುರುಳರನ್ನು ಖಾಕಿ ಪಡೆ ಸಿನಿಮಾ ಸ್ಟೈಲ್‌ನಲ್ಲಿ ಚೇಸಿಂಗ್ ಮಾಡಿ ರಕ್ಷಿಸಿರುವ ಘಟನೆ ಮೈಸೂರಲ್ಲಿ ನಡೆದಿದೆ.
https://vistaranews.com/karnataka/mysore/cow-smugglers-attack-on-illegal-cow-smuggling/465997.html
ಕರ್ನಾಟಕ ಬಂದ್‌ಗೆ ಓಲಾ- ಊಬರ್ ಯೂನಿಯನ್ ಬೆಂಬಲ
ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿ ನಾಳೆ ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಓಲಾ, ಊಬರ್ ಆಟೋ ಬಂದ್ ಆಗಲಿವೆ. ಓಲಾ, ಊಬರ್ ಕ್ಯಾಬ್, ಕ್ಯೂಟಾ ಕೂಡ ಸ್ತಬ್ದವಾಗಲಿವೆ. ನಾಯಂಡಹಳ್ಳಿಯಿಂದ ಟೌನ್ ಹಾಲ್‌ಗೆ ರ್ಯಾಲಿ ನಡೆಸುವುದಾಗಿ ಓಲಾ, ಊಬರ್ ಯೂನಿಯನ್ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ.
ಇಂದಿನಿಂದಲೇ ತಮಿಳುನಾಡು ಬಸ್ ಇಲ್ಲ
ಬೆಂಗಳೂರು: ನಾಳೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯದೊಳಗೆ ತಮಿಳುನಾಡು ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಬಂದ್ ಮಾಡಿ ತಮಿಳುನಾಡು ಸಾರಿಗೆ ಸಂಸ್ಥೆ ಆದೇಶ ನೀಡಿದೆ. ಇಂದಿನಿಂದಲೇ ತಮಿಳುನಾಡು ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.