ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ 100 ದಿನಗಳು ತುಂಬಿದ್ದು, ಸರ್ಕಾರದ ವೈಫಲ್ಯಗಳ ಕುರಿತು ಚಾರ್ಜ್‌ಶೀಟ್ ಬಿಡುಗಡೆಗೆ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸಿದ್ಧವಾಗಿದೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ (Karnataka Live News) ಇಲ್ಲಿ ನೋಡಿ.
ತಮ್ಮನಿಂದಲೇ ಅಣ್ಣ-ಅತ್ತಿಗೆಯ ಬರ್ಬರ ಹತ್ಯೆ; ಆಸ್ತಿ ವಿಚಾರಕ್ಕೆ ಜೋಡಿ ಕೊಲೆ
ಆಸ್ತಿ ವಿಚಾರಕ್ಕೆ ತಮ್ಮನೇ ಅಣ್ಣ ಮತ್ತು ಅತ್ತಿಗೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ (Double Murder) ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ನುಗ್ಗಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಶಿವಲಿಂಗೇಗೌಡ (55), ಪತ್ನಿ ಭಾರತಿ (47) ಮೃತ ದುರ್ದೈವಿಗಳು. ಹನುಮಂತೇಗೌಡ (50) ಕೊಲೆ ಆರೋಪಿ.
Double Murder: ತಮ್ಮನಿಂದಲೇ ಅಣ್ಣ-ಅತ್ತಿಗೆಯ ಬರ್ಬರ ಹತ್ಯೆ; ಆಸ್ತಿ ವಿಚಾರಕ್ಕೆ ಜೋಡಿ ಕೊಲೆ
ರಾಜ್ಯಾದ್ಯಂತ ನಾಳೆ ವ್ಯಾಪಕ ಮಳೆ
ಮುಂದಿನ 24 ಗಂಟೆಯೊಳಗೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ (Rain News) ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ತುಂತುರು ಮಳೆಯ (Weather report) ಸಿಂಚನವಾಗಲಿದೆ.
Weather Report : ರಾಜ್ಯಾದ್ಯಂತ ನಾಳೆ ವ್ಯಾಪಕ ಮಳೆ
ಕೆಂಗೇರಿ-ಚಲ್ಲಘಟ್ಟ, ಬೈಯಪ್ಪನಹಳ್ಳಿ- ಕೆಆರ್‌ಪುರಂ ಮೆಟ್ರೋ ಶೀಘ್ರ ಲೋಕಾರ್ಪಣೆ
ರಾಜಧಾನಿ ಬೆಂಗಳೂರಲ್ಲಿ ಬಿಎಂಟಿಸಿಯಷ್ಟೇ (Bmtc bus) ಮೆಟ್ರೋ ರೈಲು (Metro rail) ಕೂಡ ಜನರ ಜೀವನಾಡಿಯಾಗಿದೆ. ಟ್ರಾಫಿಕ್ ಕಿರಿಕಿರಿಗೆ (Bengaluru Traffic) ಬಹುತೇಕ ದೂರ ಪ್ರಯಾಣ ಮಾಡುವ ಮಂದಿ ಮೆಟ್ರೋ (Bengaluru Metro) ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಸದ್ಯ ಮೆಟ್ರೋ ಮಾರ್ಗಗಳ ವಿಸ್ತರಣೆಗೆ ಬಿಎಂಆರ್‌ಸಿಎಲ್ (BMRCL) ಒತ್ತು ನೀಡುತ್ತಿದ್ದು, ನೇರಳೆ ಮಾರ್ಗದ (Purple metro line) ಪ್ರಯಾಣಿಕರಿಗೆ ಸಿಹಿ ಸುದ್ದಿಗೆ ಪ್ಲ್ಯಾನ್ ಮಾಡಿದೆ.
Bengaluru Metro : ಕೆಂಗೇರಿ-ಚಲ್ಲಘಟ್ಟ, ಬೈಯಪ್ಪನಹಳ್ಳಿ- ಕೆಆರ್‌ಪುರಂ ಮೆಟ್ರೋ ಶೀಘ್ರ ಲೋಕಾರ್ಪಣೆ
ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಕೌಂಟ್‌ಡೌನ್ ಸ್ಟಾರ್ಟ್; ನಾಳೆಯೇ ಸಿಗಲಿದೆ 2000 ರೂ.
ಮಹಿಳಾ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ಸಿಗಲಿದೆ. ಐತಿಹಾಸಿಕ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮಕ್ಕಾಗಿ (Gruha Lakshmi Scheme) ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
Gruha Lakshmi Scheme: ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಕೌಂಟ್‌ಡೌನ್ ಸ್ಟಾರ್ಟ್; ನಾಳೆಯೇ ಸಿಗಲಿದೆ 2000 ರೂ.