ಬೆಂಗಳೂರು: ಬಂಧನ ಭೀತಿಯಿಂದ ಕಲ್ಲಡ್ಕ ಪ್ರಭಾಕರ ಭಟ್‌ಗೆ ನ್ಯಾಯಾಲಯ ರಿಲೀಫ್, ಹೊಸ ವರ್ಷಾಚರಣೆಗೆ ಬಿಗಿ ರೂಲ್ಸ್ ಸೇರಿದಂತೆ ರಾಜ್ಯದ ಇನ್ನಷ್ಟು ಮಹತ್ವದ ಇಂದಿನ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ (Karnataka Live News) ಅಪ್‌ಡೇಟ್ಸ್ ಇಲ್ಲಿವೆ.
ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ, ವಿಮೆ ಘೋಷಣೆ
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರಿಗೆ (Guest Lecturer) ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊನೆಗೂ ಅತಿಥಿ ಉಪನ್ಯಾಸಕರ ಮನವಿಗೆ ಸ್ಪಂದಿಸಿರುವ ಸರ್ಕಾರವು ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದೆ.
Guest Lecturer: ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ, ವಿಮೆ ಘೋಷಣೆ
Kannada Name plate: ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆ ಮಾಡದಿದ್ರೆ ಬೆಂಗಳೂರು ಬಂದ್!
ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಪರಭಾಷಿಕ ಉದ್ಯಮಿ, ವ್ಯಾಪಾರಸ್ಥರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸಿದ್ದಕ್ಕೆ ಸರ್ಕಾರ ಬಂಧನ ಮಾಡಿರುವುದು ಖಂಡನಾರ್ಹ. ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ (TA Narayana Gowda) ಸೇರಿ ಕಾರ್ಯಕರ್ತರನ್ನು ಬಿಡುಗಡೆ ಮಾಡದಿದ್ದರೆ ಬೆಂಗಳೂರು ಬಂದ್ ಮಾಡಲಾಗುವುದು ಎಂದು ಕರವೇ ಮತ್ತೊಂದು ಬಣದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
Kannada Name plate: ಕರವೇ ಅಧ್ಯಕ್ಷ ನಾರಾಯಣ ಗೌಡರನ್ನು ಬಿಡುಗಡೆ ಮಾಡದಿದ್ರೆ ಬೆಂಗಳೂರು ಬಂದ್!
ಕಲ್ಲಡ್ಕ ಪ್ರಭಾಕರ ಭಟ್‌ಗೆೆ ಮಧ್ಯಂತರ ಜಾಮೀನು
ಬೆಂಗಳೂರು: ಪ್ರಚೋದನಕಾರಿ ಭಾಷಣ ಮಾಡಿ ಮುಸ್ಲಿಂ ಮಹಿಳೆಯರಿಗೆ ಅವಹೇಳನ ಮಾಡಿದ ಆರೋಪಕ್ಕೆ ಗುರಿಯಾಗಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಶ್ರೀರಂಗಪಟ್ಟಣ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅವರ ಮೇಲೆ ಬಲವಂತದ ಕ್ರಮ ಕೈಗೊಳ್ಳಬೇಡಿ ಎಂದು ಹೈಕೋರ್ಟ್ ಕೂಡ ಸರ್ಕಾರಕ್ಕೆ ತಿಳಿಸಿದೆ.