ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜು ವಿಡಿಯೊ ಪ್ರಕರಣದ ತನಿಖಾಧಿಕಾರಿ ಬದಲಾವಣೆ. ಮಲ್ಪೆ ಇನ್ಸ್ ಪೆಕ್ಟರ್ ಮಂಜುನಾಥ ಗೌಡ ಬದಲಿಗೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ. ಇದೂ ಸೇರಿದಂತೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳನ್ನು (Karnataka live news) ತಿಳಿಯಲು ಇಲ್ಲಿ ಗಮನಿಸಿ.
ಅರಶಿನಗುಂಡಿ ಫಾಲ್ಸ್ 200 ಮೀಟರ್ ಕೆಳಗಡೆ ಶರತ್ ಮೃತದೇಹ ಪತ್ತೆ
ಉಡುಪಿಯ ಬೈಂದೂರು ತಾಲೂಕಿನ ಕೊಲ್ಲೂರು (Kolluru incident) ಬಳಿಯಿರುವ ಅರಶಿನಗುಂಡಿ ಜಲಪಾತ (Arashina gundi Falls) ನೋಡಲು ಹೋಗಿ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತದೇಹವು ಪತ್ತೆಯಾಗಿದೆ.
ಅರಶಿನಗುಂಡಿ ಫಾಲ್ಸ್ 200 ಮೀಟರ್ ಕೆಳಗಡೆ ಶರತ್ ಮೃತದೇಹ ಪತ್ತೆ
ದುರ್ಬಲಗೊಂಡ ಮುಂಗಾರು ನಾಳೆ ಈ ಜಿಲ್ಲೆಗೆ Rain alert
ರಾಜ್ಯಾದ್ಯಂತ ನೈರುತ್ಯ ಮುಂಗಾರು (southwest monsoon) ದುರ್ಬಲಗೊಂಡಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ (Rain News) ಸಾಧ್ಯತೆ ಇದೆ.
Weather Report : ದುರ್ಬಲಗೊಂಡ ಮುಂಗಾರು; ಈ ಜಿಲ್ಲೆಗಷ್ಟೇ Rain Alert
ಮೊಹರಂ ಹೆಜ್ಜೆ ಮೇಳದಲ್ಲಿ ಇಬ್ಬರಿಗೆ ಹಾರ್ಟ್ ಅಟ್ಯಾಕ್
ದಿನೇದಿನೆ ಹೃದಯಾಘಾತದಿಂದ ಮೃತಪಡುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮೊಹರಂ ಹಬ್ಬದಲ್ಲಿ (Muharram 2023) ಹೆಜ್ಜೆ ಮೇಳದಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಇಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ.
Heart Attack : ಮೊಹರಂ ಹೆಜ್ಜೆ ಮೇಳದಲ್ಲಿ ಇಬ್ಬರಿಗೆ ಹಾರ್ಟ್ ಅಟ್ಯಾಕ್!
ಮನೆ ಬಿಟ್ಟು ಹೋದವನು ಶವವಾಗಿ ಪತ್ತೆ
ಮನೆ ಬಿಟ್ಟು ಹೋದ ಯುವಕನೊಬ್ಬ ಕೆರೆಗೆ (youth drowned in river) ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇತ್ತ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಪಾದಚಾರಿಗೆ ಬಸ್ ಡಿಕ್ಕಿಯಾಗಿ ದಾರುಣವಾಗಿ (Road Accident) ಮೃತಪಟ್ಟಿದ್ದಾರೆ.
ಮನೆ ಬಿಟ್ಟು ಹೋದವನು ಶವವಾಗಿ ಪತ್ತೆ; ಬಸ್ ಡಿಕ್ಕಿ ಪಾದಚಾರಿ ಸಾವು
ಕುಡಿದ ಮತ್ತಿನಲ್ಲಿ ಸಂಬಂಧಿಕರ ಗಲಾಟೆ
ಶಿವಮೊಗ್ಗದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕ್ಯಾತೆ ತೆಗೆದು ಸಂಬಂಧಿಕರಿಂದಲೇ ಕೊಲೆಯಾಗಿ (Murder case) ಹೋಗಿದ್ದಾನೆ. ಇತ್ತ ತುಮಕೂರಿನಲ್ಲೂ ನಶೆ ಎರಿಸಿಕೊಂಡ ಯುವಕರ ಗುಂಪು ನಡುರಸ್ತೆಯಲ್ಲೆ ಹೊಡೆದಾಡಿಕೊಂಡಿದ್ದಾರೆ.
Murder Case : ಕುಡಿದ ಮತ್ತಿನಲ್ಲಿ ಸಂಬಂಧಿಕರ ಗಲಾಟೆ; ಕೊಲೆಯಲ್ಲಿ ಅಂತ್ಯ!