ಬೆಂಗಳೂರು: ನಿನ್ನೆ ಬಾಂಬ್ ಬೆದರಿಕೆ ಬಂದ ಹಲವು ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ರಾಜ್ಯದ ಇನ್ನಷ್ಟು ಕ್ಷಣಕ್ಷಣದ ಸುದ್ದಿ ಅಪ್‌ಡೇಟ್‌ಗಳಿಗಾಗಿ (Karnataka Live News) ಇಲ್ಲಿ ಗಮನಿಸಿ.
ತಿಂಗಳಿಗೆ 70 ಅಬಾರ್ಷನ್; ಭ್ರೂಣಗಳನ್ನು ಟಾಯ್ಲೆಟ್‌ಗೆ ಎಸೆಯುತ್ತಿದ್ದ ನರ್ಸ್ ಮಂಜುಳಾ
ಭ್ರೂಣ ಹತ್ಯೆ (Foeticide Case) ಪ್ರಕರಣದಲ್ಲಿ ದಿನಕ್ಕೊಂದು ಮಹತ್ತರ ಬೆಳವಣಿಗೆ ನಡೆಯುತ್ತಿದ್ದು, ಮತ್ತೊಬ್ಬ ಮಹಿಳೆ ಅರೆಸ್ಟ್ ಆಗಿದ್ದಾಳೆ. ಡಾ ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದ ನರ್ಸ್‌ವೊಬ್ಬಳನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದು, ಆ ಮೂಲಕ ಆರೋಪಿಗಳ ಸಂಖ್ಯೆ ಹತ್ತಕ್ಕೆ ಏರಿಕೆ ಆಗಿದೆ. ಮಂಜುಳಾ ಬಂಧಿತ ಆರೋಪಿ ಆಗಿದ್ದಾಳೆ.
Foeticide Case : ತಿಂಗಳಿಗೆ 70 ಅಬಾರ್ಷನ್; ಭ್ರೂಣಗಳನ್ನು ಟಾಯ್ಲೆಟ್‌ಗೆ ಎಸೆಯುತ್ತಿದ್ದ ನರ್ಸ್ ಮಂಜುಳಾ
ಅತಿವೇಗ ತಂದ ಆಪತ್ತು; ಇಬ್ಬರ ಪ್ರಾಣ ಕಸಿದ ಅಪಘಾತಗಳು!
ಪ್ರತ್ಯೇಕ ಕಡೆಗಳಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಉಸಿರು ಚೆಲ್ಲಿದ್ದರೆ, ಮತ್ತೊರ್ವ ಸ್ಥಿತಿ ಚಿಂತಾಜನಕವಾಗಿದೆ.
Road Accident : ಅತಿವೇಗ ತಂದ ಆಪತ್ತು; ಇಬ್ಬರ ಪ್ರಾಣ ಕಸಿದ ಅಪಘಾತಗಳು!
ಬೆಂಕಿಗೆ ಸಿಲುಕಿ ಸುಟ್ಟು ಕರಕಲಾದ ಹಸುಗಳು! ನಿಂತಲ್ಲೇ ಹೊತ್ತಿ ಉರಿದ ಲಾರಿ
ಪ್ರತ್ಯೇಕ ಕಡೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಾವು- ನೋವು ಸಂಭವಿಸಿದೆ. ದನದ ಕೊಟ್ಟಿಗೆಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಜಾನುವಾರುಗಳು ಮೃತಪಟ್ಟಿದ್ದರೆ ಮತ್ತೊಂದು ಕಡೆ ಲಾರಿ ಹಾಗೂ ಜ್ಯುವೆಲರಿ ಶಾಪ್‌ವೊಂದು ಸುಟ್ಟು ಕರಕಲಾಗಿದೆ.
Fire Accident : ಬೆಂಕಿಗೆ ಸಿಲುಕಿ ಸುಟ್ಟು ಕರಕಲಾದ ಹಸುಗಳು! ನಿಂತಲ್ಲೇ ಹೊತ್ತಿ ಉರಿದ ಲಾರಿ
ಮೂರು ತಿಂಗಳು ಈ ಮಾರ್ಗಗಳ ರೈಲು ಸಂಚಾರ ರದ್ದು!
ಬೆಂಗಳೂರು ವಿಭಾಗದ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮತ್ತು ಬಸಂಪಲ್ಲಿ ನಿಲ್ದಾಣಗಳ ನಡುವಿನ ಸುರಂಗ ಮಾರ್ಗದ ಕೆಲಸಗಳು ನಡೆಯುತ್ತಿದೆ. ಸುರಂಗ ಮಾರ್ಗಕ್ಕೆ ಸಂಬಂಧಿಸಿದಂತೆ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವು (Trains cancelled) ಸ್ಥಗಿತಗೊಳ್ಳಲಿದೆ.
Trains cancelled : ಮೂರು ತಿಂಗಳು ಈ ಮಾರ್ಗಗಳ ರೈಲು ಸಂಚಾರ ರದ್ದು!