ಬೆಂಗಳೂರು: ರಾಜ್ಯದ ಹಲವು ಕಡೆ ನಡೆದ ಪುರಸಭೆ, ನಗರಸಭೆಗಳ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಇದರೊಂದಿಗೆ ರಾಜ್ಯದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ಮತ್ತಿತರ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್ (Karnataka Live News) ಇಲ್ಲಿ ಸಿಗಲಿದೆ.
ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ; ಅರಣ್ಯದಲ್ಲಿ ಮರ ಕಳವು ಆರೋಪ
ಅರಣ್ಯದಲ್ಲಿ ಮರ ಕಳವು ಆರೋಪದಲ್ಲಿ (Wood Smuggling) ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹ (Vikram Simha) ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೇಲೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕೋಟ್ಯಂತರ ರೂ. ಮೌಲ್ಯದ ಮರ ಕಡಿದು ಸಾಗಣೆ ಆರೋಪದಲ್ಲಿ ಅವರ ಬಂಧನವಾಗಿದೆ.
Wood Smuggling: ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ; ಅರಣ್ಯದಲ್ಲಿ ಮರ ಕಳವು ಆರೋಪ
ನದಿಯಲ್ಲಿ ಈಜಲು ಹೋದ ಮೂವರು ನೀರುಪಾಲು; ಮತ್ತಿಬ್ಬರು ಪಾರು
ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು (Drowned in river) ನೀರುಪಾಲಾಗಿದ್ದಾರೆ. ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದ ಬರಪೊಳೆಯಲ್ಲಿ ಘಟನೆ ನಡೆದಿದೆ. ರಷಿಕ್ ಕುಶಾಲಪ್ಪ(20), ಆಕಾಶ್ ಬಿದ್ದಪ್ಪ(20), ಸುದೀಶ್ ಅಯ್ಯಪ್ಪ(20) ಮೃತ ವಿದ್ಯಾರ್ಥಿಗಳಾಗಿದ್ದಾರೆ.
Drowned in river : ನದಿಯಲ್ಲಿ ಈಜಲು ಹೋದ ಮೂವರು ನೀರುಪಾಲು; ಮತ್ತಿಬ್ಬರು ಪಾರು
ಎಲ್ಲೆಂದರಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡಿದ್ರೆ ಹುಷಾರ್; ನ್ಯೂ ಇಯರ್ ಸೆಲೆಬ್ರೆಷನ್‌ಗೆ ಟೋಯಿಂಗ್ ಶಾಕ್!
2024ರ ಹೊಸ ವರ್ಷ ಸಂಭ್ರಮಾಚರಣೆಗೆ (Bengaluru News) ಬೆಂಗಳೂರಲ್ಲಿ ತಯಾರಿ ಜೋರಾಗಿದೆ. ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ಸೆಲೆಬ್ರೆಷನ್‌ಗೆ ಹಾಟ್ ಸ್ಪಾಟ್ ಆಗಿರುವ ಕೆಲ ಏರಿಯಾಗಳಲ್ಲಿ ಬೆಂಗಳೂರು ನಗರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಮಧ್ಯೆ ಟ್ರಾಫಿಕ್ ಪೊಲೀಸರು ವಾಹನ ಸವಾರರಿಗೆ ಶಾಕ್‌ವೊಂದನ್ನು ನೀಡಿದ್ದಾರೆ. ತಾತ್ಕಾಲಿಕ ಟೋಯಿಂಗ್ ವಾಹನಗಳನ್ನು (Towing In bengaluru) ರಸ್ತೆಗಿಳಿಸಲಿದ್ದಾರೆ.
New Year 2024: ಎಲ್ಲೆಂದರಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡಿದ್ರೆ ಹುಷಾರ್; ನ್ಯೂ ಇಯರ್ ಸೆಲೆಬ್ರೆಷನ್‌ಗೆ ಟೋಯಿಂಗ್ ಶಾಕ್!
ತಾಲೂಕು ಉಸ್ತುವಾರಿ ಅಧಿಕಾರಿಗಳ ನೇಮಕ; ಇವರ ಜವಾಬ್ದಾರಿಗಳೇನು?
ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯನ್ನು ತಾಲೂಕು ಉಸ್ತುವಾರಿ ಅಧಿಕಾರಿಗಳನ್ನಾಗಿ (Taluk In charge Officer) ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
http://vistaranews.com/karnataka/appointment-of-taluk-in-charge-officers/544404.html