Site icon Vistara News

Karnataka Live News: ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ

karnataka live news kannada today news live vistara news november 18 and CM Siddaramaiah BS Yediyurappa and DCM DK Shivakumar

ಬೆಂಗಳೂರು: ರಾಜ್ಯದ ಹಲವು ಕಡೆ ನಡೆದ ಪುರಸಭೆ, ನಗರಸಭೆಗಳ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಇದರೊಂದಿಗೆ ರಾಜ್ಯದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ಮತ್ತಿತರ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್‌ (Karnataka Live News) ಇಲ್ಲಿ ಸಿಗಲಿದೆ.

Deepa S

ನಡುಗಿಸುವ ಚಳಿ ಮಧ್ಯೆ ಮತ್ತೆ ಮಳೆ ಸದ್ದು!

ಚಳಿಗಾಲ, ಮಳೆಗಾಲ, ಬೇಸಿಗೆ ಕಾಲ ಎಂಬುದೆಲ್ಲ ಬದಲಾಗಿದೆ. ಬೇಸಿಗೆ ಕಾಲದಲ್ಲಿ ಸೂರ್ಯ ಮಂಕಾದರೆ, ಮಳೆಗಾಲದಲ್ಲಿ ವಿಪರೀತ ಬಿಸಿಲು, ಚಳಿಗಾಲದಲ್ಲಿ ಮಳೆಯ ಸಿಂಚನವಾಗುತ್ತದೆ. ಸದ್ಯ ಹವಾಮಾನ ವೈಪರಿತ್ಯದಿಂದಾಗಿ ಚಳಿಗಾಲ ಶುರುವಾದರೂ ಮಳೆಯಾಟ ಮಾತ್ರ (Karnataka weather Forecast) ನಿಂತಿಲ್ಲ. ಡಿ.31ರ ನಂತರ ಇನ್ನೊಂದು ವಾರ ಮಳೆ (Rain News) ಮುನ್ಸೂಚನೆ ಇದೆ.

Karnataka Weather : ನಡುಗಿಸುವ ಚಳಿ ಮಧ್ಯೆ ಮತ್ತೆ ಮಳೆ ಸದ್ದು!
Prabhakar R

ನಿಗಮ ಮಂಡಳಿಗಳಲ್ಲಿ ಶಾಸಕರಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ: ಡಿಕೆಶಿ

ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆ ಮಾಡಲಾಗುವುದು. ಅದಕ್ಕಾಗಿ ಎಲ್ಲಾ ನಾಯಕರು ಕೂತು ಚರ್ಚೆ ಮಾಡುತ್ತೇವೆ. ನಿಗಮ ಮಂಡಳಿಗಳಲ್ಲಿ ಶಾಸಕರಷ್ಟೇ ಸಂಖ್ಯೆಯಲ್ಲಿ ಕಾರ್ಯಕರ್ತರಿಗೂ ಸ್ಥಾನಮಾನ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

DK Shivakumar: ನಿಗಮ ಮಂಡಳಿಗಳಲ್ಲಿ ಶಾಸಕರಷ್ಟೇ ಕಾರ್ಯಕರ್ತರಿಗೂ ಸ್ಥಾನಮಾನ: ಡಿಕೆಶಿ

Deepa S

ಹೊಸ ವರ್ಷದ ಪಾರ್ಟಿಗೆ ರೈಲಿನಲ್ಲಿ ಬಂತು ಗಾಂಜಾ!

ಹೊಸ ವರ್ಷಕ್ಕೆ (New Year 2024) ದಿನಗಣನೆ (Drugs Siezed) ಶುರುವಾಗಿದೆ. ಸಂಭ್ರಮದ ಕಾವು ಜೋರಾಗಿದ್ದು, ಈ ಸಮಯದಲ್ಲಿ ಮಾದಕ ವಸ್ತುಗಳಿಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಆದರೆ ಮಾದಕ ವಸ್ತುಗಳನ್ನು ಸರಬರಾಜು ಮಾಡುವುದು ಪೆಡ್ಲರ್‌ಗಳಿಗೆ ದೊಡ್ಡ ತಲೆನೋವಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಪೆಡ್ಲರ್‌ಗಳು ಮಾದಕ ವಸ್ತುಗಳ ಸರಬರಾಜು ಮಾಡಲು ಆಗುತ್ತಿಲ್ಲ. ಸದ್ಯ ಪೊಲೀಸರ ಕಣ್ತಪ್ಪಿಸಿ ಗಾಂಜಾ ಸಾಗಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ.

New Year 2024 : ಹೊಸ ವರ್ಷದ ಪಾರ್ಟಿಗೆ ರೈಲಿನಲ್ಲಿ ಬಂತು ಗಾಂಜಾ!
Deepa S

ಅಸ್ಥಿಪಂಜರ ಪತ್ತೆ ಕೇಸ್‌; ಪಾಳು ಬಿದ್ದ ಮನೆಯಲ್ಲಿ ಮೊದಲು ಬುರುಡೆ ನೋಡಿದ್ದೇ ವಿದ್ಯಾರ್ಥಿಗಳು

ಚಿತ್ರದುರ್ಗ ನಗರದ ಜೈಲ್ ರೋಡ್ ಬಳಿಯ ಪಾಳು ಮನೆಯಲ್ಲಿ ಸಿಕ್ಕ 5 ಅಸ್ತಿ ಪಂಜರಗಳ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಜಗನ್ನಾಥ್ ರೆಡ್ಡಿ ಕುಟುಂಬದವರು ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದ್ದು, ಅದರಲ್ಲಿ ಕೆಲ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿರುವುದು ಬಹಿರಂಗ ಆಗಿತ್ತು. ಅದರ ಬೆನ್ನಲ್ಲೇ ಇಂದು ಅದೇ ಡೆತ್ ನೋಟ್‌ನಲ್ಲಿ ಇಬ್ಬರು ವ್ಯಕ್ತಿಗಳ ಹೆಸರು ಉಲ್ಲೇಖ ಆಗಿರುವುದು ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಈ ಮಧ್ಯೆ ಪಾಳು ಬಿದ್ದ ಮನೆಗೆ ಮೊದಲು ಪ್ರವೇಶಿಸಿದ್ದೆ ಅಪ್ರಾಪ್ತರು ಎನ್ನಲಾಗಿದೆ.

ಅಸ್ಥಿಪಂಜರ ಪತ್ತೆ ಕೇಸ್‌; ಪಾಳು ಬಿದ್ದ ಮನೆಯಲ್ಲಿ ಮೊದಲು ಬುರುಡೆ ನೋಡಿದ್ದೇ ವಿದ್ಯಾರ್ಥಿಗಳು
Deepa S

ಅಸ್ಥಿಪಂಜರ ಪತ್ತೆ ಕೇಸ್‌; 50 ಎಕರೆ ಜಮೀನಿಗಾಗಿ ಚಿತ್ರಹಿಂಸೆ ಕೊಟ್ಟರಾ! ಡೆತ್‌ನೋಟ್‌ನಲ್ಲಿ ಏನಿದೆ?

ಕೋಟೆ ನಾಡು ಚಿತ್ರದುರ್ಗದಲ್ಲಿ (Chitradurga News) ಅಸ್ಥಿಪಂಜರ ಪತ್ತೆ ಪ್ರಕರಣವು (Skeletons Found) ಬಾರಿ ಸಂಚಲನ ಸೃಷ್ಟಿಸಿದೆ. ಒಂದೇ ಕುಟುಂಬದ ಐವರ ನಿಗೂಢ ಸಾವಿನ ಪ್ರಕರಣವು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪತ್ತೆಯಾಗಿರುವ ಅಸ್ಥಿಪಂಜರಗಳು ಪೊಲೀಸರ ನಿದ್ದೆಗೆಡಿಸಿದ್ದು, ಸದ್ಯ ಪಾಳು ಬಿದ್ದ ಮನೆಯಲ್ಲಿ ಡೆತ್‌ನೋಟ್‌ವೊಂದು ಸಿಕ್ಕಿದೆ.

ಅಸ್ಥಿಪಂಜರ ಪತ್ತೆ ಕೇಸ್‌; 50 ಎಕರೆ ಜಮೀನಿಗಾಗಿ ಚಿತ್ರಹಿಂಸೆ ಕೊಟ್ಟರಾ! ಡೆತ್‌ನೋಟ್‌ನಲ್ಲಿ ಏನಿದೆ?
Exit mobile version