ಬೆಂಗಳೂರು: ರಾಜ್ಯದ ಹಲವು ಕಡೆ ನಡೆದ ಪುರಸಭೆ, ನಗರಸಭೆಗಳ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾಗಿದೆ. ಇದರೊಂದಿಗೆ ರಾಜ್ಯದ ಪ್ರಮುಖ ರಾಜಕೀಯ, ಸಾಂಸ್ಕೃತಿಕ ಮತ್ತಿತರ ಸುದ್ದಿ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್ (Karnataka Live News) ಇಲ್ಲಿ ಸಿಗಲಿದೆ.
ಯಲಹಂಕದಲ್ಲಿ ಹುಚ್ಚು ನಾಯಿ ದಾಳಿ; ಬಾಲಕರು ಸೇರಿ 7 ಮಂದಿಗೆ ಗಾಯ
ಸಿಕ್ಕ ಸಿಕ್ಕವರ ಮೇಲೆ ಎರಗಿ ಹುಚ್ಚು ನಾಯಿ ದಾಳಿ (Dog Bite) ಮಾಡುತ್ತಿದೆ. ಯಲಹಂಕದ ಕೊಂಡಪ್ಪ ಲೇಔಟ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಹುಚ್ಚುನಾಯಿಯೊಂದು ದಾಳಿ ಮಾಡಿ ಕಚ್ಚುತ್ತಿದೆ.
Dog Bite : ಯಲಹಂಕದಲ್ಲಿ ಹುಚ್ಚು ನಾಯಿ ದಾಳಿ; ಬಾಲಕರು ಸೇರಿ 7 ಮಂದಿಗೆ ಗಾಯ
ಕುಡಿತದ ಅಮಲಿನಲ್ಲಿ 33ನೇ ಮಹಡಿ ಮೇಲಿಂದ ಹಾರಿ ಬಿದ್ದ ಟೆಕ್ಕಿ ಸಾವು
ಕುಡಿತದ ಅಮಲಿನಲ್ಲಿ (Alcohol Effect) ಕಂಡ ಕಂಡವರ ಮೇಲೆ ಹಲ್ಲೆ ಮಾಡುವವರನ್ನು ನೋಡಿದ್ದೇವೆ, ಕೊಲೆ ಮಾಡುವವರನ್ನು ನೋಡಿದ್ದೇವೆ. ಕುಡಿದ ಮೇಲೆ ಅವರಿಗೆ ತಾವು ಏನು ಮಾಡುತ್ತಿದ್ದೇವೆ ಅನ್ನೋದೇ ತಿಳಿಯದೆ ಈ ರೀತಿ ಮಾಡುತ್ತಾರೆ ಅಂತೇವೆ. ಆದರೆ, ಇಲ್ಲೊಬ್ಬ ಕುಡಿತದ ಅಮಲಿನಲ್ಲಿ ಏನು ಮಾಡುತ್ತಿದ್ದೇನೆ ಎನ್ನುವ ಅರಿವೇ ಇಲ್ಲದೆ, 33ನೇ ಮಹಡಿಯಿಂದ (Techie Death) ಬಿದ್ದು ಮೃತಪಟ್ಟಿದ್ದಾನೆ.
Techie Death : ಕುಡಿತದ ಅಮಲಿನಲ್ಲಿ 33ನೇ ಮಹಡಿ ಮೇಲಿಂದ ಹಾರಿ ಬಿದ್ದ ಟೆಕ್ಕಿ ಸಾವು
ಪುತ್ತೂರು ನಗರಸಭೆಯಲ್ಲಿ ಪುತ್ತಿಲಗೆ ನಿರಾಸೆ
ಮಂಗಳೂರು: ಪುತ್ತೂರು ನಗರಸಭೆಯ ತೆರವಾದ ಎರಡು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಒಂದು ಸ್ಥಾನ ಬಿಜೆಪಿ, ಇನ್ನೊಂದು ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಪುತ್ತಿಲ ಬಣ ನಿರಾಸೆಗೆ ಒಳಗಾಗಿದೆ.
ಚಿತ್ರದುರ್ಗ ಅಸ್ಥಿಪಂಜರ ಪ್ರಕರಣಕ್ಕೆ ಟ್ವಿಸ್ಟ್
ಚಿತ್ರದುರ್ಗ: ಚಿತ್ರದುರ್ಗದ ಪಾಳು ಮನೆಯಲ್ಲಿ ದೊರೆತ ಐದು ಅಸ್ಥಿಪಂಜರಗಳ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ. ಮನೆಯಲ್ಲಿ ಡೆತ್‌ನೋಟ್ ದೊರೆತಿದ್ದು, ಅದರಲ್ಲಿ ತಮಗೆ ಕಿರುಕುಳ ಕೊಡುತ್ತಿದ್ದ ಇಬ್ಬರ ಹೆಸರನ್ನು ಉಲ್ಲೇಖಿಸಲಾಗಿದೆ.