ಬೆಂಗಳೂರು: ಮಂಡ್ಯ ಸೇರಿದಂತೆ ರಾಜ್ಯದಲ್ಲಿ ಕಾವೇರಿ ಚಳವಳಿ (cauvery protest) ಮುಂದುವರಿದಿದೆ. ಕಾವೇರಿ ನೀರಿಗೆ ತಮ್ಮ ರಕ್ತ ಚೆಲ್ಲಿ ಪ್ರತಿಭಟಿಸಲು ರೈತರು ಮುಂದಾಗಿದ್ದಾರೆ. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ನೋಡಲು ಇಲ್ಲಿ ಗಮನವಿಡಿ.
ಬೆಂಗಳೂರು ವಿವಿಯಲ್ಲಿ ಶೀಘ್ರವೇ ಇಂದಿರಾ ಕ್ಯಾಂಟೀನ್ ಓಪನ್
ಇಂದಿರಾ ಕ್ಯಾಂಟೀನ್ (Indira Canteen) ಬಡವರ ಹಸಿವು ನೀಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸರ್ಕಾರವು ಕ್ಯಾಂಟೀನ್ ಹೆಚ್ಚಳ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದು, ಸದ್ಯ ಜ್ಞಾನಭಾರತಿ ಆವರಣದಲ್ಲಿ (Bengaluru University) ಇಂದಿರಾ ಕ್ಯಾಂಟೀನ್ ತೆರೆಯುವಂತೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ವಿವಿಯಲ್ಲಿ ಶೀಘ್ರವೇ ಇಂದಿರಾ ಕ್ಯಾಂಟೀನ್ ಓಪನ್
ಚಿಕ್ಕಮಗಳೂರಲ್ಲಿ ಸಂಜೆಯಿಂದ ಬಿರುಮಳೆ; ನಾಳೆವರೆಗೂ 8 ಜಿಲ್ಲೆಗಳಿಗೆ ಅಲರ್ಟ್
ಮುಂದಿನ 24 ಗಂಟೆಯಲ್ಲಿ ಕರಾವಳಿಯಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
https://vistaranews.com/weather/karnataka-weather-forecast-heavy-rain-in-chikmagalur-since-evening-8-districts-on-alert-till-tomorrow/468091.html
ಅವಧಿ ಮೀರಿದ ಔಷಧಿ ಸೇಲ್ ಮಾಡುತ್ತಿದ್ದ ತಂದೆ-ಮಗ; ಫಾರ್ಮಸಿ ಮೇಲೆ ಸಿಸಿಬಿ ದಾಳಿ
ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಇದ್ದರೆ ಕ್ಲಿನಿಕ್‌ಗೆ ಹೋಗುವ ಬದಲು ಜನ-ಸಾಮಾನ್ಯರು ಹತ್ತಿರದ ಫಾರ್ಮಸಿ, ಮೆಡಿಕಲ್ ಶಾಪ್‌ಗೆ ಹೋಗುತ್ತಾರೆ. ಅವರನ್ನು ನಂಬಿ ತಮಗೆ ಬೇಕಾದ ಔಷಧಿ ಖರೀದಿಸುತ್ತಾರೆ. ಆದರೆ ರಾಜಾಜಿನಗರದ ಈ ಫಾರ್ಮಸಿಯಲ್ಲಿ ಅವಧಿ ಮೀರಿದ ಔಷಧಿಗಳನ್ನು ಸ್ಟಾಕ್ ಇಟ್ಟುಕೊಂಡು ಜನರಿಗೆ ಮಾರಾಟ ಮಾಡಿ ಹಣವನ್ನು ಸಂಪಾದಿಸುತ್ತಿದ್ದರು. ಅವಧಿ ಮೀರಿದ ಔಷಧಿ ಹಾಗೂ ಕಾಸ್ಮೆಟಿಕ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರಾಜಾಜಿನಗರದ ಮೆಡಿಗೇಟ್ಸ್ ಫಾರ್ಮಸಿ ಮೇಲೆ ಸಿಸಿಬಿ ಪೊಲೀಸರು (CCB Raid) ದಾಳಿ ನಡೆಸಿದ್ದಾರೆ.
https://vistaranews.com/karnataka/bengaluru/ccb-raid-father-son-duo-selling-expired-medicines-ccb-raids-pharmacy/468019.html
ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದ ಡಿ ಗ್ರೂಪ್ ನೌಕರ
ಡಿ ಗ್ರೂಪ್ ನೌಕರರೊಬ್ಬರು ವಿಷ ಕುಡಿದ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಆನೇಕಲ್ (Anekal News ) ತಾಲೂಕಿನ ಚಂದಾಪುರ ಪುರಸಭೆಯಲ್ಲಿ ಡಿ ಗ್ರೂಪ್ ನೌಕರ ವೇಣು ಎಂಬಾತ ವಿಷ ಕುಡಿದಿದ್ದಾರೆ.
https://vistaranews.com/karnataka/bengaluru-rural/anekal-news-group-d-employee-consumes-poison-after-being-harassed-by-officials/467964.html
ಸರಸರನೇ 300 ಅಡಿ ಮೊಬೈಲ್ ಟವರ್ ಏರಿದ ಸಾಮಾಜಿಕ ಕಾರ್ಯಕರ್ತ!
ಸಾಮಾಜಿಕ ಕಾರ್ಯಕರ್ತರೊಬ್ಬರು (Social Activist) 300 ಅಡಿ ಮೊಬೈಲ್ ಟವರ್‌ನ ತುತ್ತಾತುದಿ (Mobile Tower) ಏರಿ ಕ್ಷಣಕಾಲ ಆತಂಕವನ್ನು ಸೃಷ್ಟಿ ಮಾಡಿದರು. ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನ ಮುಲ್ಕಿ ಬಳಿಯ ಕೊಲ್ನಾಡು ಇಂಡಸ್ಟ್ರೀಯಲ್ ಏರಿಯಾದಲ್ಲಿ ಈ ಘಟನೆ ನಡೆದಿದೆ.
Mobile Tower : ಸರಸರನೇ 300 ಅಡಿ ಮೊಬೈಲ್ ಟವರ್ ಏರಿದ ಸಾಮಾಜಿಕ ಕಾರ್ಯಕರ್ತ!