ಬೆಂಗಳೂರು: ಕಾವೇರಿ ನೀರು ಪ್ರಾಧಿಕಾರದ (Cauvery Dispute) ತೀರ್ಪಿನಂತೆ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡುವ ಕರ್ನಾಟಕ ಸರ್ಕಾರದ ನಡೆಯನ್ನು ವಿರೋಧಿಸಿ ಮಂಡ್ಯ- ಶ್ರೀರಂಗಪಟ್ಟಣದ ರೈತರು ಸಿಡಿದೆದ್ದಿದ್ದಾರೆ. ಇಂದು ಶ್ರೀರಂಗಪಟ್ಟಣದಲ್ಲಿ ಅರೆಬೆತ್ತಲೆ ಪ್ರತಿಭಟನೆಗೆ ರೈತರು ಮುಂದಾಗಿದ್ದಾರೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.
ಸೆಪ್ಟೆಂಬರ್ ಮೊದಲ ವಾರ ಅಲ್ಪಾವಧಿ ಮಳೆಯಷ್ಟೇ!
ರಾಜ್ಯದಲ್ಲಿ ಬುಧವಾರ ನೈರುತ್ಯ ಮುಂಗಾರು (Southwest Monsoon) ದುರ್ಬಲವಾಗಿತ್ತು. ಒಂದೆರಡು ಸ್ಥಳಗಳಲ್ಲಿ ಮಳೆಯಾಗಿರುವ (Rain News) ವರದಿ ಆಗಿದೆ. ಈಗಾಗಲೇ ಹವಾಮಾನ ಇಲಾಖೆ ಸೆಪ್ಟೆಂಬರ್ 7ರವರೆಗೆ ಕರ್ನಾಟಕದಲ್ಲಿ ಮಳೆಯು ಸಾಧಾರಣವಾಗಿರಲಿದೆ ಎಂದು ಮುನ್ಸೂಚನೆಯನ್ನು (Weather report) ನೀಡಿದೆ. ಸೆಪ್ಟೆಂಬರ್ 8 ರಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
Weather Report : ಸೆಪ್ಟೆಂಬರ್ ಮೊದಲ ವಾರ ಅಲ್ಪಾವಧಿ ಮಳೆಯಷ್ಟೇ!
ಸಿಎಂ ಸೇರಿ ಕೈ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವರ ಮೇಲೆ ಕೇಸ್!
ಸೋಶಿಯಲ್ ಮೀಡಿಯಾದಲ್ಲಿ (Social Media) ಬೇಕಾಬಿಟ್ಟಿ ಪೋಸ್ಟ್ ಹಾಕುವವರ ವಿರುದ್ಧ ಬೆಂಗಳೂರು ನಗರ ಪೊಲೀಸರು (Bengaluru city police) ಬಿಸಿ ಮುಟ್ಟಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ (Congress Leader) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ (Derogatory post) ಹಾಕಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Bengaluru News : ಸಿಎಂ ಸೇರಿ ಕೈ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದವರ ಮೇಲೆ ಕೇಸ್!
ಚಿಕಿತ್ಸೆಗೆ ಹೋದಾಗ ಅಟ್ಟಾಡಿಸಿದ ಗಾಯಾಳು ಕಾಡಾನೆ; ಅರಣ್ಯ ಸಿಬ್ಬಂದಿ ಸಾವು!
ಗಾಯಗೊಂಡು ನರಳಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿದು ಚಿಕಿತ್ಸೆ ನೀಡಲು ಮುಂದಾದ ಅರಣ್ಯ ಸಿಬ್ಬಂದಿ ಮೇಲೆ ಮೇಲೆ ದಾಳಿ (Elephant attack) ಮಾಡಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಸಮೀಪ ನಿಂತಿದ್ದ ಕಾಡಾನೆಗೆ ಅನಸ್ತೇಷಿಯಾ ಕೊಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿ ಕೊಂದಿದೆ.
Elephant attack : ಚಿಕಿತ್ಸೆಗೆ ಹೋದಾಗ ಅಟ್ಟಾಡಿಸಿದ ಗಾಯಾಳು ಕಾಡಾನೆ; ಅರಣ್ಯ ಸಿಬ್ಬಂದಿ ಸಾವು!
ಕಿಕ್ ಏರಿಸಿಕೊಂಡು ಹೆಲ್ತ್ ಇನ್ಸ್‌ಪೆಕ್ಟರ್‌ಗೆ ಡಿಶುಂ ಡಿಶುಂ; ಪ್ರಿಯಾಂಕ್ ಖರ್ಗೆ ಬೆಂಬಲಿಗನ ದಾಂಧಲೆ
ಟ್ರೇಡ್ ಲೈಸೆನ್ಸ್ (Trade License) ವಿಚಾರಕ್ಕೆ ಕಲಬುರಗಿ ಮಹಾನಗರ ಪಾಲಿಕೆ ಹೆಲ್ತ್ ಇನ್ಸ್‌ಪೆಕ್ಟರ್ (Health Inspector) ಮೇಲೆ ಹಲ್ಲೆ (Assault Case) ನಡೆದಿದೆ. ಸಚಿವ ಪ್ರಿಯಾಂಕ್ ಖರ್ಗೆ (Minister Priyank Kharge) ಬೆಂಬಲಿಗರು ಕಲಬುರಗಿಯ ಪಾಲಿಕೆ ಕಚೇರಿಗೆ ನುಗ್ಗಿ ಹೆಲ್ತ್ ಇನ್ಸ್‌ಪೆಕ್ಟರ್ ಧನಶೆಟ್ಟಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
Assault Case : ಕಿಕ್ ಏರಿಸಿಕೊಂಡು ಹೆಲ್ತ್ ಇನ್ಸ್‌ಪೆಕ್ಟರ್‌ಗೆ ಡಿಶುಂ ಡಿಶುಂ; ಪ್ರಿಯಾಂಕ್ ಖರ್ಗೆ ಬೆಂಬಲಿಗನ ದಾಂಧಲೆ!