Site icon Vistara News

Karnataka live news: ತ.ನಾಡಿಗೆ 5000 ಕ್ಯೂಸೆಕ್‌ ನೀರು ಬಿಡುಗಡೆ; 100 ಅಡಿಗೆ ಕುಸಿದ KRS ಮಟ್ಟ; ಹೀಗೇ ಆದ್ರೆ ಡ್ಯಾಂ ಫುಲ್‌ ಖಾಲಿ

karnataka live news

ಬೆಂಗಳೂರು: ಕಾವೇರಿ ನೀರು ಪ್ರಾಧಿಕಾರದ (Cauvery Dispute) ತೀರ್ಪಿನಂತೆ ತಮಿಳುನಾಡಿಗೆ 5000 ಕ್ಯೂಸೆಕ್‌ ನೀರು ಬಿಡುವ ಕರ್ನಾಟಕ ಸರ್ಕಾರದ ನಡೆಯನ್ನು ವಿರೋಧಿಸಿ ಮಂಡ್ಯ- ಶ್ರೀರಂಗಪಟ್ಟಣದ ರೈತರು ಸಿಡಿದೆದ್ದಿದ್ದಾರೆ. ಇಂದು ಶ್ರೀರಂಗಪಟ್ಟಣದಲ್ಲಿ ಅರೆಬೆತ್ತಲೆ ಪ್ರತಿಭಟನೆಗೆ ರೈತರು ಮುಂದಾಗಿದ್ದಾರೆ. ಇದರೊಂದಿಗೆ ರಾಜ್ಯದ ಇನ್ನಷ್ಟು ಮಹತ್ವದ ಸುದ್ದಿಗಳನ್ನು (Karnataka live news) ಇಲ್ಲಿ ಗಮನಿಸಿ.

Deepa S

ಯಮನಂತೆ ಬಂದ ಲಾರಿ; ರಸ್ತೆ ದಾಟುತ್ತಿದ್ದ ವೃದ್ಧೆ ದಾರುಣ ಸಾವು

ಲಾರಿ ಚಾಲಕನ‌ (road Accident) ಅಜಾಗರೂಕತೆಯಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ದಾರುಣವಾಗಿ ಮೃತಪಟ್ಟಿದ್ದಾರೆ. ರೇಣುಕಮ್ಮ(67) ಮೃತ ದುರ್ದೈವಿ. ರಸ್ತೆಯಲ್ಲಿ‌ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ವೃದ್ಧೆ ರೇಣುಕಮ್ಮ ಮೇಲೆ‌ ಲಾರಿ (Lorry accident) ಹರಿದಿದೆ. ಲಾರಿ ಹರಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನೆಲಮಂಗಲದ ದಾಬಸ್ ಪೇಟೆಯಲ್ಲಿ ಈ ದುರ್ಘಟನೆ ನಡೆದಿದೆ.

Road Accident : ಯಮನಂತೆ ಬಂದ ಲಾರಿ; ರಸ್ತೆ ದಾಟುತ್ತಿದ್ದ ವೃದ್ಧೆ ದಾರುಣ ಸಾವು
Deepa S

ಕಟ್ಟಡದಿಂದ ಬಿದ್ದು ಉದ್ಯಮಿ ಆತ್ಮಹತ್ಯೆ; 2ನೇ ಪತ್ನಿ ಮೇಲೆ ಅನುಮಾನ!

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ನಾಗರಭಾವಿಯಲ್ಲಿ ಅನುಮಾನಾಸ್ಪದ (Suspicious Death) ರೀತಿಯಲ್ಲಿ ಉದ್ಯಮಿ ಮೃತಪಟ್ಟಿದ್ದಾರೆ. ಕಟ್ಟಡದಿಂದ ಬಿದ್ದು (Self Harming) ಮಾರಾಂಜಿನಪ್ಪ(62) ಎಂಬುವವರು ಮೃತಪಟ್ಟಿದ್ದಾರೆ.

Suspicious Death : ಕಟ್ಟಡದಿಂದ ಜಿಗಿದು ಉದ್ಯಮಿ ಆತ್ಮಹತ್ಯೆ; 2ನೇ ಪತ್ನಿ ಮೇಲೆ ಅನುಮಾನ!
Deepa S

ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ; ಮಳೆಗಾಲದಲ್ಲೂ ರಣ ಬಿಸಿಲು

ರಾಜ್ಯದಲ್ಲಿ ಆಗಸ್ಟ್‌ ತಿಂಗಳಲ್ಲಿ ವಾಡಿಕೆಗಿಂತಲೂ ಮಳೆ (Rain news) ಪ್ರಮಾಣ ತೀರಾ ಕಡಿಮೆ ಇದೆ. ಕರ್ನಾಟಕದ ಮುಕ್ಕಾಲು ತಾಲೂಕುಗಳಲ್ಲಿ ಬರ ಉಂಟಾಗಿದೆ. ಮಳೆಗಾಲದಲ್ಲೂ ರಣ ಬಿಸಿಲಿಗೆ ಜನರು ತತ್ತರಿಸಿ ಹೋಗಿದ್ದಾರೆ. ಆಗಸ್ಟ್‌ನಲ್ಲಿ 59 ಮಿ.ಮೀ ಮಳೆಯಾಗಿದ್ದು, ಉಷ್ಣಾಂಶದಲ್ಲಿ ಏರಿಕೆ ಆಗಿದೆ. ಇದರ ನಡುವೆಯೂ ಸೆಪ್ಟೆಂಬರ್‌ನಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ.

Weather Report : ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ; ಮಳೆಗಾಲದಲ್ಲೂ ರಣ ಬಿಸಿಲು
Harish Kera

ಶ್ರೀರಂಗಪಟ್ಟಣದಲ್ಲಿ ಇಂದು ಅರೆಬೆತ್ತಲೆ ಪ್ರತಿಭಟನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಇಂದು ಶ್ರೀರಂಗಪಟ್ಟಣದಲ್ಲಿ ರೈತರು ಅರೆೆಬೆತ್ತಲೆ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಇನ್ನೊಂದೆಡೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕೆಆರ್‌ಎಸ್‌ನಲ್ಲಿ ಧರಣಿ ಕುಳಿತಿದ್ದಾರೆ.

Exit mobile version