ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿದರು. ಇದರೊಂದಿಗೆ ರಾಜ್ಯದ ಇಂದಿನ ಇನ್ನಷ್ಟು ಪ್ರಮುಖ ಸುದ್ದಿ ಬೆಳವಣಿಗೆಗಳಿಗೆ (Karnataka live news) ಇಲ್ಲಿ ಗಮನಿಸಿ.
ಹೊಟ್ಟೆ ಕಿಚ್ಚಿಗೆ 2 ಎಕರೆ ಬೆಳೆದಿದ್ದ ಟೊಮ್ಯಾಟೊ ನಾಶ
ಟೊಮ್ಯಾಟೊಗೆ ಬಂಗಾರದ ಬೆಲೆ (Tomato price) ಬಂದಿರುವ ಹೊತ್ತಿನಲ್ಲೆ ಕೆಲ ಕಿಡಿಗೇಡಿಗಳು ಜಮೀನಿಗೆ ನುಗ್ಗಿ ಗಿಡಗಳನ್ನು ನಾಶ ಮಾಡಿ ವಿಕೃತಿ ಮೆರೆದಿದ್ದಾರೆ. ಟೊಮ್ಯಾಟೊ ಗಿಡಗಳನ್ನು ಬುಡ ಸಮೇತ ಕಿತ್ತು ಬೀಸಾಕಿದ್ದಾರೆ.
Tomato Destroy : ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಹೊಟ್ಟೆಕಿಚ್ಚಿಗೆ ಬಲಿ; ಕಣ್ಣೀರಿಟ್ಟ ರೈತ
ರಿಕವರಿಗೆ ತೆರಳಿದ್ದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಕೇರಳದಲ್ಲಿ ಅರೆಸ್ಟ್!
ಸೈಬರ್ ವಂಚನೆ (fraud case) ಪ್ರಕರಣದ ಸಂಬಂಧ ಕೇರಳಕ್ಕೆ ತೆರಳಿದ್ದ ಸೈಬರ್ ಕ್ರೈಂ ಪೊಲೀಸರು (Whitefield Cyber Crime Police) ಆರೋಪಿಗಳಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಬಂಧಿತರಾಗಿದ್ದಾರೆ. ಸಿಇಎನ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಸೇರಿ ಮೂವರು ಬಂಧಿತರಾಗಿದ್ದಾರೆ.
ರಿಕವರಿಗೆ ತೆರಳಿದ್ದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಕೇರಳದಲ್ಲಿ ಅರೆಸ್ಟ್!
ಬೇಲ್‌ಗಾಗಿ ಲಾಯರ್‌ರೇ ಕಿಡ್ನ್ಯಾಪ್, ಅರೆಬೆತ್ತಲೆಗೊಳಿಸಿ ರೌಡಿಸಂ
ಜೈಲಲ್ಲಿ ಇರುವ ನಮ್ಮವರಿಗೆ ಜಾಮೀನು ಕೊಡಿಸಬೇಕೆಂದು ಕೆಲ ರೌಡಿಗಳು ವಕೀಲರನ್ನೇ ಕಿಡ್ನ್ಯಾಪ್ (Kidnapping Case) ಮಾಡಿರುವ ಘಟನೆ ನಡೆದಿದೆ. ನಾಲ್ವರು ರೌಡಿಶೀಟರ್‌ಗಳು (Rowdy Sheeter) ಸೇರಿ ವಕೀಲ ಗಿರಿಧರ್ ಎಂಬುವವರನ್ನು (Lawyer kidnapping) ಅಪಹರಿಸಿ, ಮನಬಂದಂತೆ ಹಲ್ಲೆ (Assault Case) ನಡೆಸಿದ್ದಾರೆ.
Assault Case : ಬೇಲ್‌ಗಾಗಿ ಲಾಯರ್‌ರೇ ಕಿಡ್ನ್ಯಾಪ್; ಅರೆಬೆತ್ತಲೆಗೊಳಿಸಿ ರೌಡಿಸಂ
50 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ, ಕರಾವಳಿಗೆ ಮಳೆ ಅಲರ್ಟ್
ಮುಂದಿನ 48 ಗಂಟೆಯಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ (rain news) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (weather report) ಮುನ್ಸೂಚನೆಯನ್ನು ನೀಡಿದೆ.
Weather Report : 50 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ; ಕರಾವಳಿಗೆ ಮಳೆ ಅಲರ್ಟ್
ಇಂದು ಸಿಎಂ ಹುಟ್ಟುಹಬ್ಬ, ಮೋದಿ ಭೇಟಿ
ಹೊಸದಿಲ್ಲಿ: ತಮ್ಮ ಹುಟ್ಟು ಹಬ್ಬದ ದಿನವೇ ಪಿಎಂ ನರೇಂದ್ರ ಮೋದಿಯವರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆ. ಸಿದ್ದರಾಮಯ್ಯ 76ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು 11 ಗಂಟೆಗೆ ಪಿಎಂ ಭೇಟಿಯಾಗಲಿದ್ದಾರೆ.