ಬೆಂಗಳೂರು: ಖ್ಯಾತ ಚಿತ್ರನಟಿ ಲೀಲಾವತಿ ಇನ್ನಿಲ್ಲ. ಕನ್ನಡದ ಕಲಾಸರಸ್ವತಿ ಲೀಲಾವತಿ ಇಹಲೋಕ ತ್ಯಜಿಸಿದ್ದಾರೆ. ಹಲವು ತಿಂಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿಡಿದ್ದ ನಟಿಗೆ 86 ವರ್ಷವಾಗಿತ್ತು.
ದೊಡ್ಡ ಗಣಪತಿ ಬೆಣ್ಣೆ ಅಲಂಕಾರಕ್ಕೆ ಡಿಮ್ಯಾಂಡ್ ; ಭಕ್ತರು ಕಾಯಲೇಬೇಕು ಇನ್ನೂ 3 ವರ್ಷ!
ಕಡಲೆಕಾಯಿ ಪರಿಷೆಯಿಂದ ದೊಡ್ಡ ಬಸವಣ್ಣ ಫೇಮಸ್ ಆದರೆ, ಇತ್ತ ಭಕ್ತರ ಕೋರಿಕೆ ಈಡೇರಿಸುವ ಮೂಲಕ ದೊಡ್ಡ ಗಣಪತಿ ಫೇಮಸ್ (Dodda Ganapathi temple) ಆಗಿದ್ದಾನೆ. ಹೀಗೆ ಭಕ್ತರ ಕಷ್ಟಗಳನ್ನು ಈಡೇರಿಸುತ್ತಾ ಬಂದಿರುವ ವಿಘ್ನೇಶ್ವರನ ಆರಾಧಕರಿಗೆ ಇದೀಗ ನಿರಾಸೆ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ದೇವರ ಹರಕೆ ತೀರಿಸಲು ಬರುವ ಭಕ್ತರು ಸಪ್ಪೆಮೋರೆ ಹಾಕಿ ಹಿಂತಿರುಗುವಂತಾಗಿದೆ.
ದೊಡ್ಡ ಗಣಪತಿ ಬೆಣ್ಣೆ ಅಲಂಕಾರಕ್ಕೆ ಡಿಮ್ಯಾಂಡ್ ; ಭಕ್ತರು ಕಾಯಲೇಬೇಕು ಇನ್ನೂ 3 ವರ್ಷ!
ನಾಳೆಯಿಂದ ಕಡಲೆಕಾಯಿ ಪರಿಷೆ; 5 ದಿನಗಳು ಈ ಮಾರ್ಗ ಬಂದ್!
ರಾಜಧಾನಿ ಬೆಂಗಳೂರಿನ ಪಾರಂಪರಿಕ ಕಡಲೆಕಾಯಿ ಪರಿಷೆ 2023 (Kadlekai Parishe 2023) ಡಿ.9 ರಿಂದ ಶುರುವಾಗುತ್ತಿದೆ. ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಪರಿಷೆಗೆ ಚಾಲನೆ ನೀಡಲಾಗುತ್ತಿದೆ. ಡಿ. 9 ರಿಂದ 13ರವರೆಗೆ ಕಡಲೆಕಾಯಿ ಪರಿಷೆ ನಡೆಯಲಿದ್ದು, ಬಸವನಗುಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗುತ್ತಿದೆ. ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
Kadlekai Parishe 2023: ನಾಳೆಯಿಂದ ಕಡಲೆಕಾಯಿ ಪರಿಷೆ; 5 ದಿನ ಈ ಮಾರ್ಗ ಬಂದ್!
ತಾಳಿ ಕಟ್ಟಲು ಬಂದ್ರೆ ತಾಳಿಯನ್ನೇ ದೂಡಿದ ವಧು; ಅರ್ಧದಲ್ಲೇ ನಿಂತು ಹೋಯಿತು ಮದುವೆ
ಇತ್ತೀಚಿನ ದಿನಗಳಲ್ಲಿ ಮಂಟಪದವರೆಗೆ ಹೋದ ಮದುವೆಗಳು ರದ್ದುಗೊಳ್ಳುವುದು (Marriage Cancel) ಸಾಮಾನ್ಯವಾಗಿ ಬಿಟ್ಟಿದೆ. ಪೋಷಕರ ಒತ್ತಾಯಕ್ಕೆ ಮಣಿದು ನಡೆಯುವ ಮದುವೆಯು ಕೊನೆ ಕ್ಷಣದಲ್ಲಿ ವರನೋ ಅಥವಾ ವಧುವೋ ಮದುವೆ ಬೇಡವೆಂದ ಘಟನೆಗಳು ನಡೆದಿವೆ. ಇದೇ ರೀತಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ವರ ತಾಳಿ ಕಟ್ಟಲು ಬಂದಾಗ ತಾಳಿಯನ್ನೇ ದೂಡಿ ವಧು ಮದುವೆ ಬೇಡ ಎಂದಿದ್ದಾಳೆ.
Marriage Cancel : ತಾಳಿ ಕಟ್ಟಲು ಬಂದ್ರೆ ತಾಳಿಯನ್ನೇ ದೂಡಿದ ವಧು; ಅರ್ಧದಲ್ಲೇ ನಿಂತು ಹೋಯಿತು ಮದುವೆ
ಯಶ್- 19 ಸಿನಿಮಾ ಟೈಟಲ್ ರಿವೀಲ್
ಬೆಂಗಳೂರು: ಯಶ್- 19 ಸಿನಿಮಾ ಟೈಟಲ್ ರಿವೀಲ್ ಆಗಿದೆ. ʼಟಾಕ್ಸಿಕ್ʼ ಎಂದು ಹೆಸರಿಡಲಾಗಿದೆ. ಭಾರತ ಮಲೇಶಿಯಾ, ಜಪಾನ್, ನ್ಯೂಜಿಲ್ಯಾಂಡ್, ಆಫ್ರಿಕಾ, ಆಸ್ಟ್ರೇಲಿಯಾ, ರಷ್ಯಾ, ಯುಕೆ, ಯೂರೋಪ್ ಸೇರಿದಂತೆ ಹಲವೆಡೆ ಟೈಟಲ್ ರಿವೀಲ್ ಆಗಿದೆ. ಜತೆಗೆ ರಿಲೀಸ್ ಡೇಟ್ ಕೂಡ ಘೋಷಿಸಲಾಗಿದೆ. 2025ರ ಏಪ್ರಿಲ್ 10ಕ್ಕೆ ಸಿನಿಮಾ ರಿಲೀಸ್ ಆಗಲಿದೆಯಂತೆ.
ಭೂ ಕಂದಾಯ ತಿದ್ದುಪಡಿ ವಿಧೇಯಕ ವಾಪಸ್
ಬೆಂಗಳೂರು: ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಈ ಮೊದಲು ಕೃಷಿ ಭೂಮಿ ಹೊಂದಿದವರಿಗೆ ಮಾತ್ರ ಕೃಷಿ ಭೂಮಿ ಖರೀದಿಗೆ ಅವಕಾಶ ಇತ್ತು. 2022ರಲ್ಲಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿದೇಯಕದ ಮೂಲಕ ಯಾರು ಬೇಕಾದರು ಭೂಮಿ ಖರೀದಿಗೆ ಅವಕಾಶ ಮಾಡಿ ಕೊಡಲಾಗಿತ್ತು.