ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Women’s Day)ನಿಮಿತ್ತ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮಹಿಳೆಯರಿಗಾಗಿ ವಿಶೇಷ ಕೊಡುಗೆಯನ್ನು (Women’s Day Offer) ನೀಡಿದೆ. ರಾಜ್ಯದೆಲ್ಲೆಡೆ ಇರುವ, ರಾಜ್ಯ ಸರ್ಕಾರಿ ಒಡೆತನದ ಮಯೂರ ಗ್ರೂಪ್ ಆಫ್ ಹೋಟೆಲ್ಗಳಲ್ಲಿ ಮಾರ್ಚ್ 6ರಿಂದ 10ರವರೆಗೆ ಎಲ್ಲ ಮಹಿಳೆಯರಿಗೆ ರಿಯಾಯಿತಿ ನೀಡುವುದಾಗಿ ಟೂರಿಸ್ಟ್ ಡಿಪಾರ್ಟ್ಮೆಂಟ್ ತಿಳಿಸಿದೆ.
ಈ ಮಯೂರ ಗ್ರೂಪ್ ಆಫ್ ಹೋಟೆಲ್ಗಳು ರಾಜ್ಯದ ಬಹುತೇಕ ಎಲ್ಲ ಕಡೆ ಇವೆ. ಅದರಲ್ಲೂ ಪ್ರಮುಖ ಪ್ರವಾಸಿ ತಾಣಗಳ ಬಳಿಯೇ ಇದ್ದು, ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಮಾರ್ಚ್ 6ರಿಂದ 10ರವರೆಗಿನ ಅವಧಿಯಲ್ಲಿ ಈ ಹೋಟೆಲ್ಗಳಿಗೆ ಬಂದು ಉಳಿಯುವ ಮಹಿಳೆಯರಿಗೆ (ಏಕಾಂಗಿಯಾಗೇ ಬರಲಿ, ಅಥವಾ ಕುಟುಂಬದೊಂದಿಗೆ/ಸ್ನೇಹಿತರೊಂದಿಗೇ ಬರಲಿ) ರೂಮ್ ಬುಕ್ಕಿಂಗ್ನಲ್ಲಿ ಶೇ.50ರಷ್ಟು ಮತ್ತು ತಿಂಡಿ-ಊಟದಲ್ಲಿ ಶೇ.20ರಷ್ಟು ರಿಯಾಯಿತಿ ಕೊಡುವುದಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮಾಹಿತಿ ನೀಡಿದೆ.
‘48ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲ ಮಯೂರ ಗ್ರೂಪ್ ಆಫ್ ಹೋಟೆಲ್ಗಳಲ್ಲಿ ಮಹಿಳೆಯರಿಗೆ ಡಿಸ್ಕೌಂಟ್ ಇರಲಿದೆ. ಮಾರ್ಚ್ 6ರಿಂದ 10ರವರೆಗೆ ನೀಡಲಾದ ಈ ಕೊಡುಗೆಯನ್ನು ಹೆಚ್ಚೆಚ್ಚು ಮಹಿಳೆಯರು ಬಳಸಿಕೊಳ್ಳಬೇಕು ಎಂದೂ ಕೊಡುವುದಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತಿಳಿಸಿದೆ. ಅಂದಹಾಗೇ, ರಾಜ್ಯ ಸರ್ಕಾರದ ಒಡೆತನದಲ್ಲಿರುವ ಈ ಮಯೂರಾ ಹೋಟೆಲ್ಗಳು, ಮೈಸೂರು, ಹಂಪಿ, ಶ್ರೀರಂಗಪಟ್ಟಣ, ಆಲಮಟ್ಟಿ, ಮಡಿಕೇರಿ, ನಂದಿಬೆಟ್ಟ, ಹೊಯ್ಸಳ, ವಿಜಯಪುರ ಮತ್ತು ತಮಿಳುನಾಡಿನ ಊಟಿಯಲ್ಲಿ ಇವೆ. ಬಹುತೇಕ ಎಲ್ಲ ಪ್ರವಾಸಿ ಸ್ಥಳಗಳಲ್ಲಿಯೇ ಮಯೂರ ಹೋಟೆಲ್ಗಳಿದ್ದು, ಪ್ರವಾಸಿಗರಿಗೆ ವರದಾನವಾಗಿವೆ.
ಇನ್ನು ಮಹಿಳಾ ದಿನಾಚರಣೆ ನಿಮಿತ್ತ ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಮಾರ್ಚ್ 8ರಂದು ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಘೋಷಣೆ ಮಾಡಿದೆ. ಅಂದರೆ ಮಾರ್ಚ್ 8ರಂದು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರು ಹಣಕೊಟ್ಟು, ಟಿಕೆಟ್ ಪಡೆಯುವ ಅಗತ್ಯವಿಲ್ಲ.
ಇದನ್ನೂ ಓದಿ: International Women’s Day 2023: ಮಾರ್ಚ್ 8 ಮಹಿಳಾ ದಿನಾಚರಣೆ ಪ್ರಯುಕ್ತ ಬಿಎಂಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ