ಚಿಕ್ಕಮಗಳೂರು: ಒಡಿಶಾ ರೈಲು ಅಪಘಾತದಲ್ಲಿ (odisha train accident) ಬದುಕುಳಿದ ಕನ್ನಡಿಗ ಯಾತ್ರಿಕರೊಬ್ಬರು ಯಾತ್ರೆ ಮುಗಿಸಿ ಬರುತ್ತಿದ್ದಾಗ ಹೃದಯಾಘಾತದಿಂದ (heart attack) ಸಾವಿಗೀಡಾಗಿದ್ದಾರೆ.
ಉತ್ತರ ಭಾರತದ ಪ್ರಸಿದ್ಧ ಯಾತ್ರಾ ತಾಣ ಸುಮೇದ್ ಶಿಖರ್ಜಿಗೆ ಯಾತ್ರೆಗೆ ಹೋಗಿದ್ದ ಕನ್ನಡಿಗರ ತಂಡದಲ್ಲಿದ್ದ ಯಾತ್ರಿಕರೊಬ್ಬರು ರೈಲು ಅಪಘಾತದಲ್ಲಿ ಬದುಕುಳಿದರೂ, ನಂತರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಸುಮೇದ್ ಶಿಖರ್ಜಿಗೆ ತೆರಳಿದ್ದ 110 ಜನರಲ್ಲಿ ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ (61) ಕೂಡ ಒಬ್ಬರಾಗಿದ್ದರು. ಒಡಿಶಾದ ಬಾಲಸೋರ್‌ನಲ್ಲಿ ಅಪಘಾತಕ್ಕೆ ಒಳಗಾಗಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ತಂಡ ಅಪಾಯವಿಲ್ಲದೆ ಪಾರಾಗಿತ್ತು.
ಬಳಿಕ ಸುಮೇದ್ ಶಿಖರ್ಜಿಗೆ ಭೇಟಿ ನೀಡಿದ ಇವರು ಅಲ್ಲಿಂದ ಹಿಂದಿರುಗುವಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್‌ನಲ್ಲಿ ಘಟನೆ ನಡೆದಿದೆ. ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಮೃತರ ದೇಹ ಪಡೆಯಲು ಕನ್ನಡಿಗ ಯಾತ್ರಿಕರ ತಂಡ ಕಾಯುತ್ತಿದೆ ಎಂದು ತಿಳಿದುಬಂದಿದೆ.