Site icon Vistara News

ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಗೆ ವಿಧ್ಯುಕ್ತ ಚಾಲನೆ

vokkaliga abhivurddi nigama

ಬೆಂಗಳೂರು: ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ಕಚೇರಿಗೆ ಸೋಮವಾರ (ಜು.18) ನಗರದ ಯುನಿಟಿ ಬಿಲ್ಡಿಂಗ್‌ ಸಿಲ್ವರ್‌ ಜ್ಯೂಬಿಲಿ ಬ್ಲಾಕ್‌ನಲ್ಲಿ ಚಾಲನೆ ದೊರೆಯಿತು. ನಿಗಮ ಅಧ್ಯಕ್ಷ ಕೃಷ್ಣಪ್ಪ ಅವರು ಸರಳ ಪೂಜೆ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.

ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮವು ಒಕ್ಕಲಿಗ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳ ಸುಧಾರಣೆ ಮತ್ತು ಸಮುದಾಯದವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಈ ಕಚೇರಿಯನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಯುವಪೀಳಿಗೆಯ ಸಬಲೀಕರಣದ ದೃಷ್ಟಿಯನ್ನಿಟ್ಟುಕೊಂಡು ನಿರುದ್ಯೋಗಿ ಯುವಕ/ಯುವತಿಯರನ್ನು ಕೌಶಲ್ಯಪರರನ್ನಾಗಿಸಲು ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ಆಯೋಜಿಸಿ ಉದ್ಯೋಗದ ಅವಕಾಶಗಳನ್ನು ಗರಿಷ್ಠ ಮಟ್ಟದಲ್ಲಿ ಹೆಚ್ಚಿಸುವುದೇ ಈ ಯೋಜನೆಯ ಉದ್ದೇಶವಾಗಿದೆ.

ಸಮುದಾಯದ ರೈತಾಪಿ ವರ್ಗದವರಿಗೆ ನೀರಾವರಿ ಸೌಲಭ್ಯ ಒದಗಿಸಲು ಗಂಗಾ ಕಲ್ಯಾಣ ನೀರಾವರಿ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಎಲ್ಲ ಯೋಜನೆಗಳ ಉಪಯೋಗಗಳನ್ನು ಪಡೆಯಲು ನಿಗಮದ ಜಾಲತಾಣದಲ್ಲಿ (https://kvcdc.karnataka.gov.in/kn) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಉಚಿತ ಸೌಲಭ್ಯ ಕಲ್ಪಿಸಲಾಗಿದೆ.

ಒಕ್ಕಲಿಗ ಸಮುದಾಯವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಹಾಗೂ ಸಶಕ್ತಗೊಳಿಸಲು ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮವು ಕಾರ್ಯರೂಪಕ್ಕೆ ಬಂದಿದೆ.

Exit mobile version