Site icon Vistara News

karnataka weather forecast : ಮುಕ್ಕಾಲು ರಾಜ್ಯಕ್ಕೆ ಕೈಕೊಟ್ಟ ಮಳೆರಾಯ; ಮತ್ತೆ ಮುಂಗಾರು ದುರ್ಬಲ

No Rain Girl waiting For rain and holding Umbrella

ಬೆಂಗಳೂರು: ಸಕ್ರಿಯವಾಗಿದ್ದ ಮುಂಗಾರು ರಾಜ್ಯದಲ್ಲಿ (karnataka weather forecast) ಮತ್ತೆ ದುರ್ಬಲಗೊಂಡಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇತ್ತು. ಆದರೆ ಇದೀಗ ವರುಣ ಕೈಕೊಟ್ಟಿದ್ದಾನೆ. ಮುಂದಿನ 24 ಗಂಟೆಯಲ್ಲಿ ಒಣ ಹವೆ ಇರಲಿದ್ದು, ಉತ್ತರ ಒಳನಾಡಿನಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನ ಜಿಲ್ಲೆಯಾದ ತುಮಕೂರು, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಒಣಹವೆ ಮೇಲುಗೈ ಸಾಧಿಸುತ್ತದೆ. ಬೆಂಗಳೂರು ನಗರ ಪ್ರದೇಶದಲ್ಲಿ ಯಾವುದೇ ಮಳೆ ಮುನ್ಸೂಚನೆ ಇಲ್ಲ. ಬದಲಿಗೆ ಒಣಹವೆ ಇರಲಿದೆ.

ಇದನ್ನೂ ಓದಿ: Mangaluru News : ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದು ಮಹಿಳೆ ಸಾವು

ಉತ್ತರ ಒಳನಾಡಲ್ಲಿ ಲಘು ಮಳೆ

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉಳಿದಂತೆ ಹಾವೇರಿ, ಗದಗ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿಯಲ್ಲಿ ಗುಡುಗು ಮಳೆ

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಚದುರಿದ ಮಳೆ ಸುರಿಯಬಹುದು.

ಇನ್ನು ರಾಜ್ಯದಲ್ಲಿ ಸೋಮವಾರ ಕಲಬುರಗಿಯ ಅಡಕಿಯಲ್ಲಿ 3 ಸೆಂ.ಮೀ, ಮುಧೋಳದಲ್ಲಿ 2 ಸೆಂ.ಮೀ ಹಾಗೂ ಉತ್ತರ ಕನ್ನಡದ ಕದ್ರಾ, ಮಂಕಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version