Site icon Vistara News

Karnataka Weather : ಸದ್ಯಕ್ಕೆ ಮಳೆ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ; ಬಿಸಿಲೇ ಎಲ್ಲ, ಚಳಿ ಇಲ್ಲವೆಂದೇನಿಲ್ಲ!

woman enjoying tea cup with winter

ಬೆಂಗಳೂರು: ರಾಜ್ಯದಲ್ಲಿ ವರುಣ ತನ್ನ ಅಬ್ಬರವನ್ನು ಕಡಿಮೆ ಮಾಡಿದ್ದಾನೆ. ಎಲ್ಲಿಯೋ ಅಲ್ಲಿ ಇಲ್ಲಿ ಎಂಬಂತೆ ಮಳೆಯಾಗುವ (Rain News) ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ತನ್ನ ವರದಿಯಲ್ಲಿ (Karnataka Weather Forecast) ಉಲ್ಲೇಖಿಸಿದೆ. ಮುಂದಿನ 48 ಗಂಟೆಗಳ ಕಾಲ ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಎಂದು ಹೇಳಲಾಗಿದೆಯಾದರೂ ಈ ಭಾಗದಲ್ಲಿ ಮಳೆಯಾಗದ ಪ್ರದೇಶಗಳಲ್ಲಿ ಬೆಳಗ್ಗೆ ಹೊತ್ತಿಗೆ ತಾಪಮಾನ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ರಾಜ್ಯದ ಅಲ್ಲಲ್ಲಿ ಚಳಿ ಸಹ ತನ್ನ ಪ್ರಭಾವವನ್ನು ಬೀರಲಿದೆ.

ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಬೆಳಗ್ಗೆ ಹೊತ್ತು ಸೂರ್ಯ ಪ್ರಕಾಶಮಾನವಾಗಿ ಬೆಳಗಲಿದ್ದಾನೆ. ಹೀಗಾಗಿ ಉಷ್ಣಾಂಶದಲ್ಲಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಭಾಗಗಳಲ್ಲಿ ಸಾಮಾನ್ಯಕ್ಕಿಂತ 3.1 ಡಿಗ್ರಿ ಸೆಲ್ಸಿಯಸ್‌ಗಿಂತ 5 ಡಿಗ್ರಿ ಸೆಲ್ಪಿಯಸ್‌ನಷ್ಟು ಹೆಚ್ಚಳವಾಗಲಿದೆ. ಇನ್ನು ಒಳನಾಡಿನ ಒಂದೆರಡು ಕಡೆ ಹಾಗೂ ಕರಾವಳಿಯ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್‌ಗಿಂತ 3 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಬೆಂಗಳೂರಿನ ವಾತಾವರಣವನ್ನು ನೋಡುವುದಾದರೆ, ಹೆಚ್ಚಾಗಿ ಬೆಳಗ್ಗೆ ಸಮಯ ಬಿಸಿಲಿನಿಂದ ವಾತಾವರಣ ಕೂಡಿರುತ್ತದೆ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇರಬಹುದು ಎಂದು ಅಂದಾಜಿಸಲಾಗಿದೆ. ಒಂದೆರಡು ಕಡೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್‌ ಇರಲಿದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Family problem : ಹೆಂಡತಿ ಬೇರೆ ಧರ್ಮಕ್ಕೆ ಮತಾಂತರ ಆದರೆ ಮದುವೆಯೇ ಅನೂರ್ಜಿತ!

ವಿಜಯಪುರದಲ್ಲಿ ಅತಿ ಹೆಚ್ಚು ಚಳಿ

ನ. 10ರ ಹವಾಮಾನವನ್ನು ಗಮನಿಸುವುದಾದರೆ ವಿಜಯಪುರದಲ್ಲಿ ಅತಿ ಕಡಿಮೆ 18.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಕರಾವಳಿಯ ಹಲವು ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಯಡ್ವಾಡ 6, ಕೊಲ್ಲೂರು 5, ಮಂಚಿಕೇರಿ, ಟಿಕ್ಕೋಟ , ಅಡಕಿ, ಕೊಟ್ಟಿಗೆಹಾರ, ಕಳಸದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಉಡುಪಿ, ಕೋಟ, ಸಿದ್ದಾಪುರ, ಮುಧೋಳ, ಸೇಡಂ, ಬಿ ಬಾಗೇವಾಡಿ, ರಬಕವಿ, ಕೊಳ್ಳೇಗಾಲ, ಕಮ್ಮರಡಿ, ತರೀಕೆರೆ, ಜಯಪುರ ಸೇರಿದಂತೆ, ಸಿರುಗುಪ್ಪ, ಅಗರಹರ ಕೋಣಂದೂರಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಶಿರಾಲಿ ಪಿಟಿಒ, ಮಂಕಿ, ಜೋಯಿಡಾ, ಕುಂದಾಪುರ, ಮಸ್ಕಿ, ಗಬ್ಬೂರು, ಚಿಂಚೋಳಿ, ಅಫಜಲಪುರ, ಗೋಕಾಕ, ಹಿಡಕಲ್ ಅಣೆಕಟ್ಟು, ಹುಣಸಗಿ, ಶಹಾಪುರ ಸೇರಿ ವಿಜಯಪುರ ಪಿಟಿಒ, ತಾವರಗೇರಾ, ಮುದ್ದೇಬಿಹಾಳ , ಭಾಗಮಂಡಲ, ಟಿ ನರಸೀಪುರ , ತಾಳಗುಪ್ಪ, ಹುಂಚದಕಟ್ಟೆ , ಸಕಲೇಶಪುರ, ಬೇಲೂರಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version