Site icon Vistara News

Karnataka Weather : ಬೆಂಗಳೂರು-ಮೈಸೂರಲ್ಲಿ ವಾಡಿಕೆ ಮಳೆ; ಇನ್ನೆರಡು ದಿನ ವರ್ಷಧಾರೆ

Rain in karwar

ಬೆಂಗಳೂರು: ಕೈ ಕೊಟ್ಟಿದ್ದ ನೈರುತ್ಯ ಮುಂಗಾರಲ್ಲಿ ಮಳೆಯು (Rain News) ನವೆಂಬರ್‌ನಲ್ಲಿ ಅಬ್ಬರಿಸುತ್ತಿದೆ. ಇಡೀ ರಾಜ್ಯದಲ್ಲಿ ಅಕ್ಟೋಬರ್‌ 1ರಿಂದ ಈವರೆಗೆ ಮಳೆ ಕೊರತೆಯು ಶೇ. 44ರಷ್ಟಿದೆ. ಆದರೂ ಬೆಂಗಳೂರು ನಗರ, ಮೈಸೂರು, ಕೊಡಗು, ರಾಮನಗರ, ಮಂಡ್ಯ ಸೇರಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರಲ್ಲಿ ವಾಡಿಕೆ ಮಳೆಯಾಗಿದೆ ಎಂದು ತಜ್ಞರು ಮಾಹಿತಿ (Karnataka Weather Forecast) ನೀಡಿದ್ದಾರೆ.

ಸಮುದ್ರ ಮಟ್ಟದಲ್ಲಿ ಸುಳಿಗಾಳಿ ಎದ್ದಿದ್ದು, ಜತೆಗೆ ಪೂರ್ವ ಈಶಾನ್ಯ ದಿಕ್ಕಿನಿಂದ ತೇವಾಂಶದ ಜತೆಗೆ ರಭಸವಾಗಿ ಗಾಳಿ ಬೀಸುತ್ತಿದೆ. ಹೀಗಾಗಿ ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜತೆಗೆ ಒಳನಾಡಿನ ಕೆಲವು ಕಡೆಗಳಲ್ಲಿ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Road Accident : ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಲಾರಿ; ಚಾಲಕ ಸ್ಪಾಟ್‌ ಡೆತ್‌

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ಕೆಲವೊಮ್ಮೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇರುತ್ತದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕಾರವಾರದಲ್ಲಿ ಭಾರಿ ಮಳೆ ದಾಖಲು

ನ.7ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆಯು ಕಾರವಾರದಲ್ಲಿ 9 ಸೆಂ.ಮೀ ದಾಖಲಾಗಿದೆ. ಉಳಿದಂತೆ ಹಗರಿಬೊಮ್ಮನಹಳ್ಳಿ 5, ಕದ್ರಾ, ಕ್ಯಾಸಲ್ ರಾಕ್, ಜೇವರ್ಗಿ, ಗುಂಡಗುರ್ತಿ, ಶಿವಮೊಗ್ಗ ತಲಾ 4 ಸೆಂ.ಮೀ ಮಳೆಯಾಗಿದೆ.

ಅಂಕೋಲಾ, ಮಂಗಳೂರು ವಿಮಾನ ನಿಲ್ದಾಣ , ಕಮಲಾಪುರ, ಚಿತ್ತಾಪುರ , ಬೆಂಗಳೂರು ನಗರ, ಲಿಂಗನಮಕ್ಕಿ ಎಚ್‌ಎಂಎಸ್, ಹೊಸದುರ್ಗದಲ್ಲಿ ತಲಾ 3 ಸೆಂ.ಮೀ, ಮಾನ್ವಿ, ಕೊಟ್ಟಿಗೆಹಾರ, ಯಗಟಿ, ಅಜ್ಜಂಪುರ, ಹರಪನಹಳ್ಳಿದಲ್ಲಿ ತಲಾ 2 ಸೆಂ.ಮೀ, ಶಿರಾಲಿ ಪಿಟಿಒ, ಸಿದ್ದಾಪುರ, ಪಣಂಬೂರು, ಮೂಡಬಿ, ಸೇಡಂ, ಅಡಕಿ, ಅಫಜಲಪುರ, ಶಿಗ್ಗಾಂವ್, ಮುದ್ದೇಬಿಹಾಳ, ಕೊಣನೂರು, ತೊಂಡೇಭಾವಿ, ಮಡಿಕೇರಿ, ಹಾಸನ, ಕನಕಪುರ, ಚಿಕ್ಕಬಳ್ಳಾಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಡಿಮೆ ಉಷ್ಣಾಂಶ 19.0 ಡಿ.ಸೆ. ಶಿರಾಲಿಯಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version