ಬೆಂಗಳೂರು: ದಿವಂಗತ ನಟ ಪುನೀತ್ ರಾಜಕುಮಾರ್ ಪುತ್ಥಳಿ ಮತ್ತು ಕನ್ನಡ ಧ್ವಜ ನಿರ್ಮಿಸದಂತೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರೊಬ್ಬರು ವ್ಯಕ್ತಿಯೊಬ್ಬರಿಗೆ ಮಸಿ ಬಳಿದು ಎಳೆದಾಡಿದ್ದಾರೆ.
ಚಿಕ್ಕಪೇಟೆಯ ರಾಜಮಾರ್ಕೆಟ್ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಉಮಾಶಂಕರ್ ಎಂಬ ವ್ಯಕ್ತಿಗೆ ಕರವೇ ಕಾರ್ಯಕರ್ತ ಮಸಿ ಬಳಿದು ರಸ್ತೆಯಲ್ಲಿ ಎಳೆದಾಡಿ ಆಕ್ರೋಶ ಹೊರಹಾಕಿದ್ದಾರೆ. ರಾಜ ಮಾರ್ಕೆಟ್ ಸರ್ಕಲ್‌ನಲ್ಲಿ ಪುತ್ಥಳಿ ಹಾಗೂ ಧ್ವಜಸ್ತಂಭ ನಿರ್ಮಾಣಕ್ಕಾಗಿ ಕನ್ನಡಪರ ಸಂಘಟನೆಗಳು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅನುಮತಿ ಸಿಗುವ ಮುನ್ನವೇ ಪುತ್ಥಳಿ ಹಾಗೂ ಧ್ವಜ ಸ್ತಂಭ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಆನೆ ದಂತ ಕಲಾಕೃತಿ ಮಾರಾಟಕ್ಕೆ ಯತ್ನ; ಐವರ ಬಂಧನ
ಹೀಗಾಗಿ ಆರ್‌ಟಿಐ ಕಾರ್ಯಕರ್ತರಾಗಿರುವ ಉಮಾಶಂಕರ್ ಧ್ವಜ ಹಾಗೂ ಪುತ್ಥಳಿ ಸ್ಥಾಪನೆ ಮಾಡದಂತೆ ಕೋರ್ಟ್‌ನಿಂದ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿ ಪ್ರಶ್ನಿಸಿದ್ದ ಕಾರ್ಯಕರ್ತರ ಗುಂಪೊಂದು ವಾಗ್ವಾದ ನಡೆಸಿದೆ. ಈ ನಡುವೆ ಉಮಾಶಂಕರ್‌ಗೆ ಹಿಂದಿನಿಂದ ತಲೆ ಮೇಲೆ ಕಪ್ಪು ಮಸಿ ಸುರಿದು ಮುಖಕ್ಕೆಲ್ಲ ಬಳಿದು ಎಳೆದಾಡಿದ್ದಾರೆ. ಚಿಕ್ಕಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.