ಕಾರವಾರ: ಇಲ್ಲಿನ ಕುಮಟಾದ ಹಳೇ ಮೀನು ಮಾರುಕಟ್ಟೆಯ ಪುರಸಭೆಯ ವಸತಿಗೃಹದಲ್ಲಿ ತಡರಾತ್ರಿ ತಂದೆಯೊಬ್ಬ ವಿಕಲಚೇತನ ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಪ್ರೀತಮ್ ಹರಿಜನ್ (15), ಶ್ರೀಧರ ಹರಿಜನ್ (45) ಮೃತದುರ್ದೈವಿಗಳು.
ಪ್ರೀತಮ್ ಹರಿಜನ್ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು, ಚಿಕಿತ್ಸೆ ಪಡೆದರೂ ಪ್ರಯೋಜವಾಗಿರಲಿಲ್ಲ. ಮಗನ ಅನಾರೋಗ್ಯದಿಂದ ಮಾನಸಿಕವಾಗಿ ಶ್ರೀಧರ ಕುಗ್ಗಿ ಹೋಗಿದ್ದರು. ಮಾನಸಿಕ ಖಿನ್ನತೆಗೂ ಜಾರಿದ್ದ ಶ್ರೀಧರ ಮನನೊಂದು ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ. ಬಳಿಕ ಮಾಳಿಗೆಗೆ ತೆರಳಿ ಶ್ರೀಧರ ನೇಣು ಬಿಗಿದುಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಬ್ಯುಸಿನೆಸ್‌ಗೆ 20 ಸಾವಿರ ಕೇಳಿದ್ದ ಮಗ; ತಾಯಿ ಹಣ ಕೊಡಲಿಲ್ಲವೆಂದು ಕೆರೆಗೆ ಹಾರಿ ಯುವಕ ಆತ್ಮಹತ್ಯೆ
ಬ್ಯುಸಿನೆಸ್ ಮಾಡಲು ತಾಯಿ ಹಣ ಕೊಡಲಿಲ್ಲ ಎಂದು ಮನನೊಂದ ಯುವಕನೊಬ್ಬ ಕೆರೆಗೆ (Lake) ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ವಿಜಯನಗರದ ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಜರುಗಿದೆ.
ಕೊಟ್ಟೂರು ಪಟ್ಟಣದ ಕೆಳಗೇರಿ ನಿವಾಸಿ ಮನ್ಸೂರ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಆಗಿದ್ದಾನೆ. ಬೇಲ್ದಾರ್ ಕೆಲಸ ಮಾಡುತ್ತಿದ್ದ ಈತನು ಪ್ರತಿದಿನ ತನ್ನ ತಾಯಿಗೆ ಬ್ಯುಸಿನೆಸ್ ಮಾಡಲೆಂದು ಹಣ ಕೇಳುತ್ತಿದ್ದ. ಆದರೆ ತಾಯಿ ಬ್ಯುಸಿನೆಸ್ ಬೇಡ ಓದು ಮುಂದುವರಿಸುವಂತೆ ತಿಳಿ ಹೇಳಿದ್ದರು.
ಇದನ್ನೂ ಓದಿ: Smart Virtual Clinic: ಬೆಂಗಳೂರಲ್ಲಿ ಕ್ಲಿಕ್ ಆಯ್ತು ಸ್ಮಾರ್ಟ್ ವರ್ಚುವಲ್ ಕ್ಲಿನಿಕ್; ಏನೆಲ್ಲ ಚಿಕಿತ್ಸೆ ಲಭ್ಯವಿದೆ?
ಒಮ್ಮೆ ಒಪ್ಪಿದ್ದ ಈತ ಪುನಃ ಕಳೆದ ಬುಧವಾರ ತಾಯಿ ಬಳಿಗೆ ಬಂದು 20 ಸಾವಿರ ರೂಪಾಯಿ ಕೊಡುವಂತೆ ಕೇಳಿದ್ದಾನೆ. ತಾಯಿಯು ಬೇಲ್ದಾರ್ ಕೆಲಸ ಮಾಡುವುದರಿಂದ ಗುರುವಾರ ಬಟವಾಡೆಯಾಗುತ್ತದೆ. ಆಮೇಲೆ ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ಯುವಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಕ್ರವಾರ ಸಂಜೆ ಪಟ್ಟಣದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ