Site icon Vistara News

Suicide case | ವಿಷ ಪದಾರ್ಥ ಸೇವಿಸಿ ಆಂಧ್ರ ಪ್ರದೇಶದ ಗುಂಟೂರಿನ ತಂದೆ, ಮಗ ಆತ್ಮಹತ್ಯೆ

Suicide Case

ಕಾರವಾರ: ವಿಷ ಪದಾರ್ಥಗಳನ್ನು ಸೇವಿಸಿ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ತಂದೆ ಮಗ ಆತ್ಮಹತ್ಯೆ (Suicide case) ಮಾಡಿಕೊಂಡ ಘಟನೆ ಅಂಕೋಲಾದಲ್ಲಿ ನಡೆದಿದೆ.

ಗಂಗರಾಜು ವೆಂಕಟ ನಾಗಾ ನರಸಿಂಹ ರಾಘವ ದಿನಕರ (41) ಮತ್ತು ಈತನ ಮಗ ಗಂಗರಾಜು ವ್ಯಾಗ್ರೇಶ್ವರ ಕಾರ್ತಿಕೇಯ ತರುಣ (15) ಮೃತರು.

ಇವರು ತಮ್ಮ ಸಹೋದರಿ ಪದ್ಮಜಾ ಅವರ ಆಂಧ್ರ ಪ್ರದೇಶದ ಮನೆಯಲ್ಲಿ ವಾಸವಿದ್ದರು. ಡಿ 14 ರಂದು ಹೈದ್ರಾಬಾದ್‌ನಲ್ಲಿ ಅಡುಗೆ ಕೆಲಸ ಸಿಕ್ಕಿದ್ದು, ತನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಹೋದವರು ನೇರವಾಗಿ ಗೋಕರ್ಣ ಕಡೆಗೆ ಬಂದಿದ್ದು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತಂದೆ ಮತ್ತು ಮಗ ಇಬ್ಬರೂ ಸೇರಿ ಡಿ. 24ರಂದು ವಿಷ ಪದಾರ್ಥವನ್ನು ಸೇವಿಸಿದ್ದಾರೆ.

ಇದನ್ನು ಓದಿ | Amit Shah | ಮುಂದಿನ 3 ವರ್ಷದಲ್ಲಿ ದೇಶದ ಎಲ್ಲ ಪಂಚಾಯಿತಿಗಳಲ್ಲಿ ಡೇರಿ ಸ್ಥಾಪನೆ: ಸಚಿವ ಅಮಿತ್ ಶಾ ಭರವಸೆ

ಬಳಿಕ ಗೋಕರ್ಣದಿಂದ ಅಂಕೋಲಾ ಮೂಲಕ ಬಸ್ಸಿನಲ್ಲಿ ಹೋಗುತ್ತಿದ್ದಾಗ ಸಂಜೆ 6.00 ಗಂಟೆಯ ಸುಮಾರಿಗೆ ಅಂಕೋಲಾದ ಬಸ್ ನಿಲ್ದಾಣದ ಹತ್ತಿರ ಇಬ್ಬರೂ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಂದೆ ಡಿ.27 ರಂದು ಹಾಗೂ ಮಗ ಡಿ.28 ರಂದು ಮೃತಪಟ್ಟಿದ್ದಾರೆ. ಮೃತನ ಸಹೋದರಿ ಪದ್ಮಜಾ ಡಿ.29ರಂದು ಅಂಕೋಲಾ ಪೊಲೀಸ್ ಠಾಣೆಗೆ ಆಗಮಿಸಿ ಈ ಸಂಬಂಧ ದೂರು ನೀಡಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Vulgar Behavior | ಕಿಕ್‌ ಏರಿಸಿಕೊಂಡು ಕಿರಿಕ್‌ ಮಾಡಿದವನಿಗೆ ಚಪ್ಪಲಿ ಸೇವೆ ಮಾಡಿದ ಮಹಿಳೆಯರು

Exit mobile version