Site icon Vistara News

Karwar News | ಕಡಲಾಮೆಯ 211 ಮೊಟ್ಟೆ ರಕ್ಷಿಸಿದ ಅರಣ್ಯ ಸಂರಕ್ಷಣಾಧಿಕಾರಿ; ಮಾಹಿತಿ ಕೊಟ್ಟವರಿಗೆ ಸಾವಿರ ರೂ. ಗೌರವಧನ

Sea turtle egg Devbagh Beach

ಕಾರವಾರ: ತಾಲೂಕಿನ ದೇವಭಾಗ್ ಕಡಲ ತೀರದಲ್ಲಿ ಕಡಲಾಮೆ 2 ಮೊಟ್ಟೆ ಗೂಡುಗಳಲ್ಲಿ 211 ಮೊಟ್ಟೆ ಪತ್ತೆಯಾಗಿದ್ದು, ಅವುಗಳನ್ನು ಸಂರಕ್ಷಿಸಲಾಗಿದೆ.

ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ್ ಕೆ.ಸಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್, ಸಂಶೋಧನಾ ವಿದ್ಯಾರ್ಥಿಗಳಾದ ಸೂರಜ್, ಶಾನ್ ನವಾಜ್, ಅಕ್ಷಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೀನುಗಾರರ ಸಹಕಾರದಿಂದ ಕಡಲಾಮೆ ಸಂರಕ್ಷಣೆ ಸಾಧ್ಯವಾಗುತ್ತಿದ್ದು, ಮೊಟ್ಟೆ ಇಟ್ಟ ಬಗ್ಗೆ ಮಾಹಿತಿ ನೀಡಿದವರಿಗೆ ಇಲಾಖೆಯ ವತಿಯಿಂದ 1000 ರೂ. ಗೌರವಧನ ನೀಡಲಾಗುತ್ತಿದೆ. ಕಡಲಾಮೆಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಸಂರಕ್ಷಿಸಲ್ಪಟ್ಟಿದ್ದು, ಸಮುದ್ರ ಆಹಾರ ಸರಪಳಿಯಲ್ಲಿ ತಮ್ಮದೇ ಸ್ಥಾನ ಹೊಂದಿವೆ.

ಇದನ್ನೂ ಓದಿ| Rashmika Mandanna | ಕನ್ನಡದಲ್ಲೇ ಸಂಕ್ರಾಂತಿ ವಿಶ್‌ ಮಾಡಿದ್ರೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ!

Exit mobile version