Site icon Vistara News

Karwar News | ‌ಕೂಲ್‌ ಡ್ರಿಂಕ್ಸ್ ವಾಹನದಲ್ಲಿ ಗೋವಾ ಮದ್ಯ; ಇಬ್ಬರು ಆರೋಪಿಗಳ ಸೆರೆ

Illicit liquor Cool Drinks Vehicle kumta

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಿಂದ ಹೊನ್ನಾವರ ಕಡೆಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನವನ್ನು ಕುಮಟಾ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

ಇಬ್ಬರು ಆರೋಪಿಗಳು ಗೋವಾದ ಸಾವಿರಾರು ರೂ. ಮೌಲ್ಯದ ಮದ್ಯವನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕುಮಟಾ ಪಿಎಸ್ಐ ನವೀನ್ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕುಮಟಾದ ಗಿಬ್ ಸರ್ಕಲ್ ಬಳಿ ದಾಳಿ ನಡೆಸಲಾಗಿದೆ.

ಇವರು ಕೂಲ್‌ ಡ್ರಿಂಕ್ಸ್‌ ವಾಹನದಲ್ಲಿ ಮದ್ಯವನ್ನು ಸಾಗಿಸುತ್ತಿದ್ದರು ಎನ್ನಲಾಗಿದೆ. ದಾಳಿ ಮಾಡಿದ ಪೊಲೀಸರ ತಂಡವು ವಾಹನ, ಇಬ್ಬರು ಆರೋಪಿಗಳು ಮತ್ತು ಮದ್ಯವನ್ನು ವಶಪಡಿಸಿಕೊಂಡಿದೆ. ಈ ಸಂಬಂಧ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ | Elephant attack | ಸಕಲೇಶಪುರ ಬಳಿ ನೋವಿನಿಂದ ನರಳುತ್ತಾ ರಸ್ತೆಯಲ್ಲೇ ಸಾಗಿದ ಗಾಯಾಳು ಗಜರಾಜ

Exit mobile version