ಬೆಂಗಳೂರು: ಲೋಕಸಭಾ ಚುನಾವಣೆ ಸೇರಿ ವಿವಿಧ ಕಾರಣಗಳಿಂದ ಹಲವು ಬಾರಿ ಮುಂದೂಡಿಕೆಯಾಗಿದ್ದ ಕೆಎಎಸ್ ಪೂರ್ವ ಭಾವಿ ಪರೀಕ್ಷೆ(KAS Recruitment 2024), ಆ.25ರಂದೇ ನಡೆಯಲಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೆಪಿಎಸ್‌ಸಿ, ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ವೃಂದದ ಒಟ್ಟು 384 ಹುದ್ದೆಗಳಿಗೆ ಫೆ.26ಎಂದು ಅಧಿಸೂಚನೆ ಹೊರಡಿಸಿತ್ತು. ಈ ಸಂಬಂಧ ಜುಲೈ 30ರಂದು ನಡೆದ ಆಯೋಗದ ಸಭೆಯಲ್ಲಿ ಚರ್ಚಿಸಿ, ಆ.25ರಂದು ನಿಗದಿಪಡಿಸಿರುವ ಪೂರ್ವಭಾವಿ ಪರೀಕ್ಷೆಗೆ (KAS prelims exam) ಈಗಾಗಲೇ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲವೆಂದು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ | Job News: 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆಪಿಎಸ್‌ಸಿಗೆ ಪ್ರಸ್ತಾವನೆ; ಎಲ್ಲಿ ಎಷ್ಟು ಹುದ್ದೆ?
ಪರೀಕ್ಷಾ ದಿನಾಂಕ ಬದಲಾವಣೆಗೆ ಮನವಿ
ಕೆಎಎಸ್ ಪೂರ್ವ ಭಾವಿ ಪರೀಕ್ಷೆ ನಿಗದಿಯಾಗಿರುವ ಆ.25ರಂದೇ ಬ್ಯಾಂಕಿಂಗ್ ಹುದ್ದೆಗಳಿಗೆ ಐಬಿಪಿಎಸ್ ಪರೀಕ್ಷೆ ನಡೆಸುತ್ತಿದೆ. ಇದರಿಂದ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಕೆಎಎಸ್ ಪ್ರಿಲಿಮ್ಸ್ ಪರೀಕ್ಷಾ ದಿನಾಂಕ ಮುಂದೂಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಪೂರ್ವ ಸಿದ್ಧತೆ ನಡೆದಿರುವುದರಿಂದ ದಿನಾಂಕ ಬದಲಿಸಲು ಸಾಧ್ಯವಿಲ್ಲ ಎಂದು ಕೆಪಿಎಸ್‌ಸಿ ತಿಳಿಸಿದೆ.
Job Alert: ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಐಟಿಐ ಪಾಸಾದವರು ಅಪ್ಲೈ ಮಾಡಿ
ಬೆಂಗಳೂರು: ಐಟಿಐ, ಬಿಟೆಕ್ ಅಥವಾ ಬಿಇ ಓದಿ ಒಂದೊಳ್ಳೆ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಗೋಲ್ಡನ್ ಚಾನ್ಸ್. ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (Electronics Corporation of India Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (ECIL Recruitment 2024). ಪ್ರಾಜೆಕ್ಟ್ ಎಂಜಿನಿಯರ್, ಟೆಕ್ನಿಕಲ್ ಆಫೀಸರ್ ಸೇರಿ ಸುಮಾರು 115 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ತಿಳಿಸಿದೆ. ಉದ್ಯೋಗದ ಸ್ಥಳ: ಭಾರತಾದ್ಯಂತ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಆಗಸ್ಟ್ 8 (Job Alert).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಪ್ರಾಜೆಕ್ಟ್ ಎಂಜಿನಿಯರ್ 20 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿಟೆಕ್
ಟೆಕ್ನಿಕಲ್ ಆಫೀಸರ್ 53 ಹುದ್ದೆ, ವಿದ್ಯಾರ್ಹತೆ: ಬಿಇ ಅಥವಾ ಬಿಟೆಕ್
ಜೂನಿಯರ್ ಟೆಕ್ನಿಷಿಯನ್ 42 ಹುದ್ದೆ, ವಿದ್ಯಾರ್ಹತೆ: ಐಟಿಐ
ವಯೋಮಿತಿ
ಪ್ರಾಜೆಕ್ಟ್ ಎಂಜಿನಿಯರ್: ಗರಿಷ್ಠ ವಯಸ್ಸು 33 ವರ್ಷ
ಟೆಕ್ನಿಕಲ್ ಆಫೀಸರ್: ಗರಿಷ್ಠ ವಯಸ್ಸು 33 ವರ್ಷ
ಜೂನಿಯರ್ ಟೆಕ್ನಿಷಿಯನ್: ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ವಿದ್ಯಾರ್ಹತೆ, ಉದ್ಯೋಗದ ಅನುಭವ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಮಾಸಿಕ ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾಜೆಕ್ಟ್ ಎಂಜಿನಿಯರ್: 40,000 ರೂ. – 55,000 ರೂ., ಟೆಕ್ನಿಕಲ್ ಆಫೀಸರ್: 25,000 ರೂ. – 31,000 ರೂ. ಮತ್ತು ಜೂನಿಯರ್ ಟೆಕ್ನಿಷಿಯನ್: 22,412 ರೂ. – 27,258 ರೂ. ಮಾಸಿಕ ವೇತನ ದೊರೆಯಲಿದೆ. ಆಯ್ಕೆಯಾದವರಿಗೆ ಜಾಮ್ನಗರ, ಬಾರಕ್‌ಪುರ, ಕೈಗಾ, ಹೈದರಾಬಾದ್, ವಿಶಾಖಪಟ್ಟಣ, ಗೌರಿಬಿದನೂರು, ಮಂಗಳೂರು, ಮುಂಬೈ, ಚೆನ್ನೈ, ಥಾಣೆ, ನವದೆಹಲಿ, ಅಲಹದಾಬಾದ್, ಗುವಹಾಟಿ, ನಾಗ್ಪುರ, ರಾವತ್‌ಭಾಟ, ಗುಜರಾತ್, ತಾರಾಪುರ, ಖರಕ್‌ಪುರ, ಕುಂಡಕುಳಂ ಮುಂತಾಡೆ ಪೋಸ್ಟಿಂಗ್ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ECIL Recruitment 2024 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಕೆ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://www.ecil.co.in/job_details_17_2024.php)
- ಅಗತ್ಯ ವಿವರಗಳನ್ನು ತುಂಬಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ದಾಖಲೆ, ಫೋಟೊ ಅಪ್ಲೋಡ್ ಮಾಡಿ.
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಅಪ್ಲಿಕೇಷನ್ ಫಾರಂ ಡೌನ್ಲೋಡ್ ಮಾಡಿಟ್ಟುಕೊಂಡು ಪ್ರಿಂಟ್ಔಟ್ ತೆಗೆಯಿರಿ.
ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ವಿಳಾಸ ecil.co.inಗೆ ಭೇಟಿ ನೀಡಿ.
ಇದನ್ನೂ ಓದಿ: SSC Recruitment 2024: 2,0