Site icon Vistara News

Kasapa | ಶ್ರೀ ಕೃಷ್ಣರಾಜ ಪರಿಷತ್‌ ಮಂದಿರದ ನವೀಕೃತ ಕಟ್ಟಡವೀಗ ಸಾರ್ವಜನಿಕ ಮುಕ್ತ; ಬಾಡಿಗೆಗೆ ಸಿದ್ಧವೆಂದ ಕಸಾಪ

Kasapa Awards Kannada Sahitya Parishat to present datti awards for the year 2021 on March 12

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದ ನವೀಕೃತ ಕಟ್ಟಡವು ನವೆಂಬರ್‌ ತಿಂಗಳಿಂದ ಬಾಡಿಗೆ ಆಧಾರದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (Kasapa) ಅಧ್ಯಕ್ಷ ನಾಡೋಜ. ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರವು ಪಾರಂಪರಿಕ ಕಟ್ಟಡವಾಗಿದೆ. ಶ್ರೀ ಕೃಷ್ಣರಾಜ ಮಂದಿರವನ್ನು ಆಧುನಿಕ ಸ್ಪರ್ಶದೊಂದಿಗೆ ನೂತನವಾಗಿ ಅಭಿವೃದ್ಧಿಪಡಿಸಲಾಗಿದೆ. ಕಟ್ಟಡದಲ್ಲಿ ಸಂಪೂರ್ಣ ಹವಾ ನಿಯಂತ್ರಣದ ವ್ಯವಸ್ಥೆ, ಸುಸಜ್ಜಿತವಾದ ಪ್ರಸಾದನ ಕೊಠಡಿ, ಗಣ್ಯರ ಕೊಠಡಿ, ಆಧುನಿಕ ವ್ಯವಸ್ಥೆಗಳನ್ನೊಳಗೊಂಡ ನೂತನ ವೇದಿಕೆ, ಅತ್ಯಾಧುನಿಕ ಧ್ವನಿ ವ್ಯವಸ್ಥೆ (ಸೌಂಡ್ ಸಿಸ್ಟಮ್) ಬೃಹತ್‌ ಎಲ್ಇಡಿ ವಾಲ್ ಸ್ಕ್ರೀನ್‌, ಆಧುನಿಕ ತಂತ್ರಜ್ಞಾನಗಳುಳ್ಳ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

ಅಲ್ಲದೆ, ಸಾಂಸ್ಕೃತಿಕ ಹಿನ್ನೆಲೆಯುಳ್ಳ ಸುತ್ತಮುತ್ತಲಿನ ಪರಿಸರ, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಹಾಗೂ ೧೨೮ ಸ್ಥಿರ ಸುಖಾಸೀನಗಳು, ೬ ಸೋಫಾ, ೩೦ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು, ಒಟ್ಟಾರೆ ೧೬೪ ಕುರ್ಚಿಗಳನ್ನು ಮಾಡಲಾಗಿದೆ. ನೀರಿನ ಬಾಟಲಿ ಇಡಲು ಪ್ರತ್ಯೇಕ ಸ್ಥಳಾವಕಾಶವನ್ನು ಕಲ್ಪಿಸಲಾಗಿದ್ದು, ಆಸನಗಳಲ್ಲಿ ಕುಳಿತು ಬರವಣಿಗೆ ನಡೆಸಲು ಸಹ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಸೌಲಭ್ಯಗಳ ಸಹಿತ ವಿವಿಧ ಅನುಕೂಲತೆಗಳನ್ನು ಒಳಗೊಂಡಂತೆ ಈ ಸಭಾಂಗಣವನ್ನು ನವೀಕರಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಧುನಿಕ ವ್ಯವಸ್ಥೆಗಳನ್ನು ಹೊಂದಿರುವ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದ ದರವನ್ನು ಸಾಮಾನ್ಯ ಜನರಿಗೂ ಕೈಗೆಟುಕುವಂತೆ ನಿಗದಿಪಡಿಸಲಾಗಿದೆ. ಇದರ ಪ್ರಯೋಜನವನ್ನು ಕನ್ನಡಿಗರು ಪಡೆದುಕೊಳ್ಳಬೇಕೆಂದು ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಕನ್ನಡದ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಉಪನ್ಯಾಸ, ಕವಿಗೋಷ್ಠಿ, ಗಣ್ಯರಿಗೆ ಶ್ರದ್ಧಾಂಜಲಿ, ಸುಗಮ ಸಂಗೀತ, ವಾರ್ಷಿಕೋತ್ಸವ, ಸನ್ಮಾನ, ಅಭಿನಂದನೆ, ಖಾಸಗಿ ಕಾರ್ಯಕ್ರಮಗಳು, ಶಾಲಾ ಹಾಗೂ ಕಾಲೇಜು ಕಾರ್ಯಕ್ರಮ, ನಾಟಕ ಹಾಗೂ ಇತ್ಯಾದಿ ಕಾರ್ಯಕ್ರಮಗಳಿಗೆ ಅನುಕೂಲವಾಗುಂತೆ ನವೀಕೃತ ಸಭಾಭವನವನ್ನು ಸಿದ್ಧಪಡಿಸಲಾಗಿದೆ. ದರವೂ ಸಹ ಕೈಗೆಟುವಂತಿದೆ ಎಂದು ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅವಮಾನ ಅಕ್ಷಮ್ಯ: ಕಿಡಿಗೇಡಿಗಳ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್‌ ದೂರು

Exit mobile version