Site icon Vistara News

Karnataka Election 2023: ಜನರನ್ನು ಮೂರ್ಖರನ್ನಾಗಿಸುವ ಉಚಿತ ಕೊಡುಗೆ ಸಂಸ್ಕೃತಿ ಕೊನೆಯಾಗಲಿ: ಕಾಸಿಯಾ

Kassia says freebies culture that fools people should end

Kassia says freebies culture that fools people should end

ಬೆಂಗಳೂರು: ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು (Karnataka Election 2023) ನೀಡುವ ಉಚಿತ ಕೊಡುಗೆಗಳ ಭರವಸೆ ಪ್ರವೃತ್ತಿಯನ್ನು ಕಾಸಿಯಾ ಬಲವಾಗಿ ವಿರೋಧಿಸುತ್ತದೆ. ಇದರ ಬದಲಿಗೆ ಅಭಿವೃದ್ಧಿ ವಿಷಯಗಳೊಂದಿಗೆ ಮತದಾರರ ಮುಂದೆ ಹೋಗಬೇಕು. ಮುಗ್ಧ ಸಾರ್ವಜನಿಕರನ್ನು ಮೂರ್ಖರನ್ನಾಗಿಸುವ ಉಚಿತ ಕೊಡುಗೆ ಸಂಸ್ಕೃತಿಯನ್ನು ಕೊನೆಗೊಳಿಸಬೇಕು, ಇದು ದೀರ್ಘಾವಧಿಯಲ್ಲಿ ದೇಶಕ್ಕೆ ಮಾರಕವಾಗಲಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಧ್ಯಕ್ಷ ಕೆ.ಎನ್. ನರಸಿಂಹಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಕೀಯ ಪಕ್ಷಗಳು ಉಚಿತ ವಿದ್ಯುತ್, ಉಚಿತ ನೀರು, ಯುವಕರಿಗೆ ನಿರುದ್ಯೋಗ ಭತ್ಯೆ ಮತ್ತು ಮಹಿಳೆಯರಿಗೆ ಮಾಸಾಶನಗಳಂತಹ ವಿವಿಧ ರೀತಿಯ ಭರವಸೆಗಳನ್ನು ನಾವು ಕೇಳುತ್ತಿದ್ದೇವೆ. ಇದು ತೆರಿಗೆದಾರರಿಗೆ ಅತ್ಯಂತ ಕಠಿಣ ಹೊರೆಯಾಗಲಿದೆ. ಇದರ ಬದಲಿಗೆ ತೆರಿಗೆದಾರರು, ಎಂಎಸ್‌ಎಂಇಗಳು ಮತ್ತು ಸಾಮಾನ್ಯ ನಾಗರಿಕರಿಗೆ ಹೆಚ್ಚಿನ ಕಾಳಜಿಯನ್ನು ನೀಡುವ ಅಭಿವೃದ್ಧಿ ವಿಷಯಗಳೊಂದಿಗೆ ಮತದಾರರ ಮುಂದೆ ಹೋಗಬೇಕು ಎಂದು ಹೇಳಿದ್ದಾರೆ.

ಪ್ರಸ್ತುತ ಶೇ. 9ಕ್ಕಿಂತ ಕಡಿಮೆ ಉದ್ಯಮಿಗಳು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆ.ಎಸ್.ಎಸ್.ಐ.ಡಿ.ಸಿ) ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಿದ ಸರ್ಕಾರಿ ಸ್ಥಾಪಿತ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕೈಗಾರಿಕಾ ವಸಾಹತುಗಳಿಗೆ ಬೇಡಿಕೆ-ಪೂರೈಕೆ ಅಂತರ ಹೆಚ್ಚಾಗಿದೆ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಉದ್ಯಮದ ಅಂತಹ ನೆಲಮಟ್ಟದ ಬೇಡಿಕೆಗಳೊಂದಿಗೆ ಪ್ರತಿಧ್ವನಿಸಬೇಕು. ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಕೈಗಾರಿಕಾ ವಸಾಹತುಗಳನ್ನು ಸ್ಥಾಪಿಸುವುದು, ಕೈಗಾರಿಕಾ ಪ್ರದೇಶಗಳಿಗೆ ಮೂಲಸೌಕರ್ಯ ಎಂಎಸ್‌ಎಂಇಗಳ ನಿರೀಕ್ಷೆಯಾಗಿದೆ ಎಂದು ಕಾಸಿಯಾ ಅಧ್ಯಕ್ಷರು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ | Goods exports growth : 2022-23ರಲ್ಲಿ 36 ಲಕ್ಷ ಕೋಟಿ ರೂ. ಸರಕು ರಫ್ತು

ಜನರನ್ನು ಸೋಮಾರಿಗಳು ಮತ್ತು ಅವಲಂಬಿತರನ್ನಾಗಿ ಮಾಡುವ ಉಚಿತ ಕೊಡುಗೆಗಳಿಗಾಗಿ ಪ್ರತಿ ತಿಂಗಳು ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯರ್ಥ ಮಾಡುವ ಬದಲು, ಜನರು ಮತ್ತು ಕೈಗಾರಿಕೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಹಣವನ್ನು ಹೇಗೆ ಖರ್ಚು ಮಾಡುತ್ತೇವೆ ಎಂಬುವುದನ್ನು ರಾಜಕೀಯ ಪಕ್ಷಗಳು ಜನರಿಗೆ ತಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಜಿಎಸ್‌ಟಿ ಸಂಗ್ರಹವು ಮಾಸಿಕ 1 ಲಕ್ಷ ಕೋಟಿ ರೂಪಾಯಿಗಳನ್ನು ದಾಟುತ್ತಿರುವುದು ಸಂತಸದ ವಿಚಾರವಾಗಿದೆ. ಆದರೆ, ತೆರಿಗೆದಾರರು ರಾಜಕೀಯ ಪಕ್ಷಗಳಿಗೆ ಅದನ್ನು ವ್ಯರ್ಥವಾಗಿ ಬಳಸಿಕೊಳ್ಳಲು ಬಿಡಬಾರದು. ರಾಜಕೀಯ ಪಕ್ಷಗಳು ಉದ್ಯೋಗಗಳನ್ನು ಹೇಗೆ ಸೃಷ್ಟಿಸುವುದು, ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸುವುದು ಮತ್ತು ಉತ್ತಮ ಆಡಳಿತವನ್ನು ಒದಗಿಸುವುದು ಹೇಗೆ ಎಂಬುದರ ಮೇಲೆ ಕೇಂದ್ರೀಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ | Kiccha Sudeepa: ಸಿಎಂ ಬೊಮ್ಮಾಯಿ ಮಾಮನನ್ನು ಬೆಂಬಲಿಸುವೆ; ಬಿಜೆಪಿ ಸೇರುವುದಿಲ್ಲ ಎಂದ ಕಿಚ್ಚ ಸುದೀಪ್‌

ಈಗಾಗಲೇ ಸರ್ಕಾರದ ಸಾಲವು ತುಂಬಾ ಹೆಚ್ಚಾಗಿದೆ ಮತ್ತು ಆದಾಯದ ಮೂಲವನ್ನು ಹೆಚ್ಚಿಸುವುದು ನಿರ್ಣಾಯಕ ಅಗತ್ಯವಾಗಿದೆ, ಇದರರ್ಥ ತೆರಿಗೆದಾರರ ಹಣವನ್ನು ಉಚಿತಗಳ ಉಚಿತ ಕೊಡುಗೆಗಳ ಮೂಲಕ ವ್ಯರ್ಥ ಮಾಡಬಾರದು ಮತ್ತು ಕೇವಲ ತೆರಿಗೆಯನ್ನು ಹೆಚ್ಚಿಸುವ ಮೂಲಕ ಆದಾಯವನ್ನು ಹೆಚ್ಚಿಸದೆ, ಉದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ಹೇಗೆ ಸೃಷ್ಟಿಸಬಹುದು ಎಂಬುದನ್ನು ಗಮನಿಸಬೇಕು ಎಂದು ಕೆ.ಎನ್. ನರಸಿಂಹಮೂರ್ತಿ ತಿಳಿಸಿದ್ದಾರೆ.

Exit mobile version