Site icon Vistara News

Foreign Trade Policy: ಎಫ್‌ಟಿಪಿ ಅಡಿಯಲ್ಲಿ ಕ್ಷಮಾದಾನ ಯೋಜನೆ ಅವಧಿ ವಿಸ್ತರಿಸಿ: ಕೇಂದ್ರ ಸರ್ಕಾರಕ್ಕೆ ಕಾಸಿಯಾ ಮನವಿ

Kassia says freebies culture that fools people should end

Kassia says freebies culture that fools people should end

ಬೆಂಗಳೂರು: ರಫ್ತು ಬಾಧ್ಯತೆಗಳಲ್ಲಿನ ಲೋಪಕ್ಕಾಗಿ ಕೇಂದ್ರ ಸರ್ಕಾರದ ಒಂದು ಬಾರಿ ಇತ್ಯರ್ಥ ನೀತಿಯು (Foreign Trade Policy) ಕ್ಷಮಾದಾನ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು 2023ರ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ. ಆದರೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಈ ಯೋಜನೆಯ ಗರಿಷ್ಠ ಪ್ರಯೋಜನ ಪಡೆಯಲು ಕ್ಷಮಾದಾನ ಯೋಜನೆಯನ್ನು 2024ರ ಮಾರ್ಚ್ 31 ರವರೆಗೆ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅಧ್ಯಕ್ಷ ಕೆ.ಎನ್. ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಪರಿಚಯಿಸಿದ ಹೊಸ ವಿದೇಶಿ ವ್ಯಾಪಾರ ನೀತಿ (ಎಫ್‌ಟಿಪಿ) ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹೊಸ ಎಫ್‌ಟಿಪಿಯನ್ನು ಕಾಸಿಯಾ ಸ್ವಾಗತಿಸುತ್ತದೆ. ಇದರಿಂದ ಎಂಎಸ್‌ಎಂಇ ವಲಯದ ರಫ್ತುದಾರರಿಗೆ ಅನುಕೂಲವಾಗಲಿದೆ. ಈ ನೀತಿಯಿಂದಾಗಿ ಒಂದು ದೇಶದಿಂದ ಕೆಲವು ಸರಕುಗಳನ್ನು ಖರೀದಿಸಲು ಮತ್ತು ಭಾರತೀಯ ಬಂದರುಗಳನ್ನು ತಲುಪದೆ ವಿದೇಶಕ್ಕೆ ರಫ್ತು ಮಾಡಲು ಅನುಮತಿ ಸಿಗಲಿದೆ. ಇದು ರಫ್ತುದಾರರಿಗೆ ಹೊಸ ಅವಕಾಶಗಳನ್ನು ತೆರೆಯಲಿದೆ ಎಂದು ತಿಳಿಸಿದ್ದಾರೆ.

ಭಾರತೀಯ ರೂಪಾಯಿಯಲ್ಲಿ ಪಾವತಿಸಲು ಕ್ರಮ ಮತ್ತು ಎಫ್‌ಟಿಪಿ ಪ್ರಯೋಜನಗಳನ್ನು ರಫ್ತುದಾರರಿಗೆ ವಿಸ್ತರಿಸಿರುವುದಕ್ಕೆ ಕೇಂದ್ರ ವಾಣಿಜ್ಯ ಸಚಿವಾಲಯದ ಕ್ರಮವನ್ನು ಶ್ಲಾಘಿಸಿರುವ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) ಘೋಷಿಸಲಾದ ಮತ್ತೊಂದು ಸಕಾರಾತ್ಮಕ ಪ್ರಕಟಣೆಯಲ್ಲಿ ವಿವಿಧ ಕಾರಣಗಳಿಂದಾಗಿ ತಮ್ಮ ರಫ್ತು ಬಾಧ್ಯತೆಗಳನ್ನು ಪೂರೈಸಲು ಸಾಧ್ಯವಾಗದ ರಫ್ತುದಾರರಿಗೆ ಪರಿಹಾರವನ್ನು ಒದಗಿಸಿದ್ದಕ್ಕಾಗಿ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ | Small savings schemes : ಸುಕನ್ಯಾ ಸಮೃದ್ಧಿ ಸೇರಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ 0.70% ತನಕ ಏರಿಕೆ

ರಫ್ತು ಬಾಧ್ಯತೆಗಳಲ್ಲಿನ ಲೋಪಕ್ಕಾಗಿ ಒಂದು-ಬಾರಿ ಇತ್ಯರ್ಥ ನೀತಿಯು ಕ್ಷಮಾದಾನ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯು 2023ರ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ ಹಾಗೂ ಪೂರೈಸದ ಬಾಧ್ಯತೆಗಳಿಗನುಗುಣವಾಗಿ ಸಂಪೂರ್ಣ ವಿನಾಯಿತಿ ಪಡೆದ ಕಸ್ಟಮ್ಸ್ ಸುಂಕ ಮತ್ತು ಗರಿಷ್ಠ ಬಡ್ಡಿಯು ವಿನಾಯಿತಿ ಪಾವತಿಸಿದ ನಂತರ ಇಪಿಸಿಜಿ ಮತ್ತು ಮುಂಗಡ ಪರವಾನಗಿ ಅಡಿಯಲ್ಲಿ ರಫ್ತು ಬಾಧ್ಯತೆಯನ್ನು ಕ್ರಮಬದ್ಧಗೊಳಿಸಬಹುದಾಗಿರುತ್ತದೆ. ಗರಿಷ್ಠ ಬಡ್ಡಿಯುನ್ನು ವಿನಾಯಿತಿ ಪಡೆದಿರುವ ಸುಂಕಗಳ ಶೇ.100ಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿರುವ ಅವರು, ಕ್ಷಮಾದಾನ ಯೋಜನೆಯನ್ನು 2024ರ ಮಾರ್ಚ್ 31 ರವರೆಗೆ ವಿಸ್ತರಿಸಲು ಕೇಂದ್ರವನ್ನು ವಿನಂತಿಸಿದ್ದಾರೆ.

ಈ ವಿಸ್ತರಣೆಯು ಅನೇಕ ಎಂಎಸ್‌ಎಂಇಗಳಿಗೆ ಕ್ಷಮಾದಾನ ಯೋಜನೆಯ ಗರಿಷ್ಠ ಪ್ರಯೋಜನವನ್ನು ಪಡೆಯಲು ಸಹಾಯಕವಾಗಲಿದೆ. ಉಕ್ರೇನ್ ಯುದ್ಧದ ಪರಿಣಾಮ ಪೂರೈಕೆ ಅಡೆತಡೆಗಳು ಮತ್ತು ಇತರ ನಿರ್ಬಂಧಗಳಿಂದಾಗಿ, ಅನೇಕ ಎಸ್‌ಎಂಇಎಸ್‌ಗಳು ತಮ್ಮ ರಫ್ತು ಬಾಧ್ಯತೆಗಳನ್ನು ಪೂರೈಸಲು ಸಾಧ್ಯವಾಗಿರುವುದಿಲ್ಲ, ಆದುದರಿಂದ ಎಂಎಸ್‌ಎಂಇಗಳ ಪರವಾಗಿ ನಮ್ಮ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಒಪ್ಪಿಕೊಳ್ಳುವಂತೆ ನಾವು ಕೇಂದ್ರಕ್ಕೆ ಮನವಿ ಮಾಡುತ್ತೇವೆ ಎಂದು ಕಾಸಿಯಾ ಅಧ್ಯಕ್ಷರು ತಿಳಿಸಿದ್ದಾರೆ.

ಇದನ್ನೂ ಓದಿ | Price hike : ಇಂದಿನಿಂದ ಯಾವುದು ದುಬಾರಿ, ಯಾವುದು ಅಗ್ಗ, ಹೊಸ ಬದಲಾವಣೆ ಏನು?

ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗಾಗಿ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ (CGTMSE)

ಕೇಂದ್ರ ಆಯವ್ಯಯ 2023-24ರಲ್ಲಿ ಮಾಡಿದ CGTMSE ಯ ಪುನರುಜ್ಜೀವನದ ಘೋಷಣೆಯ ನಂತರ ಎಂಎಸ್‌ಎಂಇಗಳಿಗಾಗಿ ಕ್ರೆಡಿಟ್ ಗ್ಯಾರಂಟಿ ಮಿತಿಯನ್ನು 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳವರೆಗೆ ವಿಸ್ತರಿಸಿರುವುದು ಮತ್ತು ಸೂಕ್ಷ ಮತ್ತು ಸಣ್ಣ ಉದ್ಯಮಗಳಿಗೆ CGTMSE ಯೋಜನೆಯಡಿ 1 ಕೋಟಿ ರೂ.ಗಳ ವರೆಗಿನ ಸಾಲಗಳಿಗೆ ವಾರ್ಷಿಕ ಗ್ಯಾರಂಟಿ ಶುಲ್ಕವನ್ನು ಶೇ.2 ರಿಂದ ಶೇಕಡಾ 0.37 ಕ್ಕೆ ಕಡಿಮೆ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಾಸಿಯಾ ವತಿಯಿಂದ ಧನ್ಯವಾದ ಹೇಳುವುದಾಗಿ ಅವರು ತಿಳಿಸಿದ್ದಾರೆ.

Exit mobile version