Site icon Vistara News

KC General hospital: ಎಕ್ಸ್ ರೇ, ಸ್ಕ್ಯಾನಿಂಗ್‌ಗೆ ಕರೆಂಟ್ ‌ಪ್ರಾಬ್ಲಂ; ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

KC General hospital

KC General hospital

ಬೆಂಗಳೂರು: ಒಂದು ಸಣ್ಣ ಸ್ಕ್ಯಾನಿಂಗ್‌ ಮಾಡಿಸಬೇಕಾದರೂ ಖಾಸಗಿ ಲ್ಯಾಬ್‌ಗಳಲ್ಲಿ ಸಾವಿರಾರು ರೂಪಾಯಿ ನೀಡಬೇಕು. ಹೀಗಾಗಿ ಬಡವರು, ಮಧ್ಯಮ ವರ್ಗದವರು ಎಕ್ಸ್‌ರೇ, ಸ್ಕ್ಯಾನಿಂಗ್‌ ಮಾಡಿಸಬೇಕಾದರೆ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ರೋಗಿಗಳ ಬಗ್ಗೆ ಕೆ.ಸಿ.ಜನರಲ್ ಆಸ್ಪತ್ರೆಯ ಆಡಳಿತ ಮಂಡಳಿಗೆ ತಾತ್ಸಾರ ಇರುವುದು ಎದ್ದು ಕಾಣುತ್ತಿದೆ.

ಇದಕ್ಕೆ ನಗರದ ಹೃದಯಭಾಗದಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆ ಆಡಳಿತ ವರ್ತನೆಗೆ ಖಂಡನೆ ವ್ಯಕ್ತವಾಗಿದೆ. ಸ್ಕ್ಯಾನಿಂಗ್ ಎಂದು ಬಂದ ರೋಗಿಗಳಿಗೆ ಕರೆಂಟ್ ಇಲ್ಲ ನಾಳೆ ಬನ್ನಿ ಎಂದು ಸಿಬ್ಬಂದಿ ಹೇಳಿ ಕಳುಹಿಸುತ್ತಿದ್ದು, ಇದರಿಂದ ರೋಗಿಗಳು ಕಂಗಲಾಗಿದ್ದಾರೆ. ಅಂದಹಾಗೆ, ಟ್ರಾನ್ಸ್‌ಫಾರ್ಮರ್ಸ್‌ ಕೆಲಸದ ನಿಮಿತ್ತ ಪವರ್‌ ಕಟ್ ಮಾಡಲಾಗಿದ್ದು, ಇದರ ನೇರ ಪರಿಣಾಮ ರೋಗಿಗಳ ಮೇಲೆ ತಟ್ಟುತ್ತಿದೆ.

ಕರೆಂಟ್ ಸಪ್ಲೈ ಕಡಿತ ಮಾಡಿರುವ ಬಗ್ಗೆ ಗೊತ್ತಿರದ ರೋಗಿಗಳು ಕೆ.ಸಿ. ಜನರಲ್ ಆಸ್ಪತ್ರೆಗೆ ಆಗಮಿಸಿ, ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್‌ ಆಗುತ್ತಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿಯವರು ಮಾತ್ರ ಇದು ದೊಡ್ಡ ಸಮಸ್ಯೆಯೇ ಅಲ್ಲ ಎಂಬಂತೆ ವರ್ತಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: Stray Dogs: ಬೀದಿನಾಯಿಗಳಿಗೆ ದಾರುಣವಾಗಿ ಬಲಿಯಾದ 12 ವರ್ಷದ ಬಾಲಕ

ಸರ್ಕಾರಿ ಆಸ್ಪತ್ರೆಯಲ್ಲಿ ಅಭಿವೃದ್ಧಿ ಕೆಲಸ ನಡೆಯಬೇಕು. ಆದರೆ, ಹೀಗೆ ಇಡೀ ವ್ಯವಸ್ಥೆಯೇ ಸ್ಥಗಿತಗೊಂಡರೆ ಕಷ್ಟವಾಗುತ್ತದೆ. ಕನಿಷ್ಠ ಪಕ್ಷ ಜನರೇಟರ್ ಇರಿಸಿಕೊಂಡು ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಕಲ್ಪಿಸಬಹುದಿತ್ತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

Exit mobile version