Site icon Vistara News

Aero India 2023: ಕೆಂಪೇಗೌಡ ವಿಮಾನ ನಿಲ್ದಾಣದ ವೇಳಾಪಟ್ಟಿಯಲ್ಲಿ ವ್ಯತ್ಯಾಸ

Bangalore airport

ಬೆಂಗಳೂರು: ಏರೋ ಇಂಡಿಯಾ ಶೋ ನಿಮಿತ್ತವಾಗಿ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದ ವಿಮಾನ ಹಾರಾಟ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಲಿದೆ.

14ನೇ ಆವೃತ್ತಿಯ ಏರೋ ಇಂಡಿಯಾ 2023 ಶೋ ಫೆ.13ರಿಂದ ಫೆ.17ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೆ.8- 17ರ ನಡುವೆ ಹಲವಾರು ವಿಮಾನ ಹಾರಾಟದ ವೇಳಾಪಟ್ಟಿಗಳನ್ನು ವ್ಯತ್ಯಾಸ ಮಾಡಲಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಫೆ.8- 11ರ ನಡುವೆ ಬೆಳಗ್ಗೆ 9ರಿಂದ 12 ಗಂಟೆಯವರೆಗೆ ಹಾಗೂ ಸಂಜೆ 2ರಿಂದ 5 ಗಂಟೆಯವರೆಗೆ, ಫೆ.12ರಂದು ಬೆಳಗ್ಗೆ 9ರಿಂದ 12 ಗಂಟೆಯವರೆಗೆ ಪೂರ್ವಾಭ್ಯಾಸಕ್ಕಾಗಿ; ಫೆ.13ರಂದು ಬೆಳಗ್ಗೆ 9ರಿಂದ 12 ಗಂಟೆಯವರೆಗೆ, ಫೆ.14- 15ರಂದು ಮಧ್ಯಾಹ್ನ 12ರಿಂದ 2.30ರವರೆಗೆ, ಫೆ.16- 17ರಂದು ಬೆಳಗ್ಗೆ 9.30ರಿಂದ 12 ಗಂಟೆಯವರೆಗೆ ಹಾಗೂ ಸಂಜೆ 2ರಿಂದ 5 ಗಂಟೆಯವರೆಗೆ ವೈಮಾನಿಕ ಪ್ರದರ್ಶನಗಳಿಗಾಗಿ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆ ಇರುವುದಿಲ್ಲ. ಈ ಸಮಯದಲ್ಲಿ ಪ್ರಯಾಣ ನಿಗದಿಪಡಿಸಿಕೊಂಡವರು ಸಂಬಂಧಿತ ಏರ್‌ಲೈನ್‌ಗಳನ್ನು ಸಂಪರ್ಕಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಪ್ರಕಟಣೆ ಸೂಚಿಸಿದೆ.

ಇದನ್ನೂ ಓದಿ: Aero India 2023: ಏರೋ ಇಂಡಿಯಾದಲ್ಲಿ ಭಾರತೀಯ ಪೆವಿಲಿಯನ್‌ನ ಪ್ರಮುಖ ಆಕರ್ಷಣೆಯಾಗಿ ತೇಜಸ್‌ ಯುದ್ಧ ವಿಮಾನ

Exit mobile version