ಬೆಂಗಳೂರು: ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್‌ಗೆ (Kiccha sudeep) ಬಂದ ಬೆದರಿಕೆ ಪತ್ರವು (threat letter) ಪೊಲೀಸರಿಗೆ ಕಗ್ಗಂಟಾಗಿದೆ. ತನಿಖೆ ವೇಳೆ ಇನ್ನೇನು ಒಂದು ಸುಳಿವು ಸಿಕ್ಕಿತ್ತು ಎನ್ನುವಾಗಲೇ ಮತ್ತೊಂದು ಅಡೆತಡೆ ಎದುರಾಗಿತ್ತು. ಸದ್ಯ ಪುಟ್ಟೇನಹಳ್ಳಿ ಪೊಲೀಸರಿಂದ ಸಿಸಿಬಿಗೆ (CCB) ವರ್ಗಾವಣೆಯಾಗಿರುವ ಪ್ರಕರಣದ ಹಿಂದೆ ಬಿದ್ದಿರುವ ಅಧಿಕಾರಿಗಳು, ಸಿಕ್ಕ ಸಣ್ಣ ಮಾಹಿತಿಯನ್ನೂ ಬಿಡುತ್ತಿಲ್ಲ. ಸದ್ಯ ಈ ಸಂಬಂಧ ಮತ್ತೊಂದು ಕುರುಹು ಲಭ್ಯವಾಗಿದೆ.
ಸಿಸಿಬಿ ತಂಡದವರು ದೊಮ್ಮಲೂರಿನ ಅಂಚೆ ಕಚೇರಿ ಹೋಗಿ ಪರಿಶೀಲನೆ ನಡೆಸಿ ಒಂದಷ್ಟು ಸ್ಥಳ ಮಹಜರು ನಡೆಸಿದೆ. ಅಲ್ಲಿನ ಸಿಸಿಟವಿಯನ್ನೂ ಕೂಡ ರಿಕವರಿ ಮಾಡಿಕೊಂಡಿದೆ. ಸಿಸಿಟಿವಿಯಲ್ಲಿ ಪರಿಶೀಲನೆ ವೇಳೆ ಕಿಡಿಗೇಡಿಗಳು ಬೆದರಿಕೆ ಪತ್ರವನ್ನು ಪೋಸ್ಟ್ ಮಾಡಲು ಸ್ವಿಫ್ಟ್ ಕಾರಿನಲ್ಲಿ ಬಂದಿರುವುದು ಗೊತ್ತಾಗಿದೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಕಾರಿನ ನಂಬರ್ ಪ್ಲೇಟ್ ಮೂಲಕ ಆರೋಪಿಯನ್ನು ಹಿಡಿಯುವ ಧಾವಂತದಲ್ಲಿದ್ದ ಅಧಿಕಾರಿಗಳಿಗೆ ಇದೊಂದು ಫೇಕ್ ಎಂಬುದು ತಿಳಿದುಬಂದಿದೆ. ಕಾರಿನ ನಂಬರ್ ಪ್ಲೇಟ್ ಕೂಡ ನಕಲಿಯಾಗಿದ್ದು ಆ ವಿಳಾಸ ಕೆಂಗೇರಿಯ ವ್ಯಕ್ತಿಯ ವಾಹನಕ್ಕೆ ಸೇರಿದ್ದು ಎನ್ನಲಾಗಿದೆ. ಆದರೆ ಆ ವ್ಯಕ್ತಿ ಬಳಿ ಇದ್ದ ವಾಹನ ಕೂಡ ಸ್ವಿಫ್ಟ್ ಅಲ್ಲ ಎಂದು ತಿಳಿದು ಬಿಟ್ಟು ಕಳುಹಿಸಲಾಗಿದೆ. ಸದ್ಯ ಆ ಕಾರಿನ ಅಸಲಿ ನಂಬರ್ ಹಾಗೂ ಮಾಲೀಕನ ಬೆನ್ನು ಬಿದ್ದಿರುವ ಪೊಲೀಸರು ಆದಷ್ಟು ಬೇಗ ಪ್ರಕರಣ ಬಯಲಿಗೆಳೆಯಲು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: Govt Doctors Shortage: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ; ನೇಮಕಾತಿಗೆ ಬೇಕಿದೆ ಭರ್ತಿ 2 ತಿಂಗಳು
ಕ್ರಿಮಿನಲ್ ಕಾನ್ಸ್‌ಪಿರೆಸಿ ಅಡಿಯಲ್ಲಿ ಹಾಕಿರುವ 120 ಬಿ ಸೆಕ್ಷನ್ ಗೆ ಯಾವ ರೀತಿ ಕ್ರೈಂ ಮಾಡಬೇಕೋ ಅದೇ ರೀತಿ ಆಗಂತುಕರು ಮಾಡಿದ್ದಾರೆ ಎಂಬುದಕ್ಕೆ ಬಳಸಿದ ಕಾರಿಗೂ ನಕಲಿ ನಂಬರ್ ಹಾಕಿರುವುದು ಉದಾಹರಣೆಯಾಗಿದೆ. ಈ ಸಂಬಂಧ ಸಿಸಿಬಿಯಲ್ಲಿ ತನಿಖೆ ಮುಂದುವರಿದಿದೆ.