Site icon Vistara News

Marathahalli Police: ಆರೋಪಿಯ ಕಿಡ್ನ್ಯಾಪ್ ಮಾಡಿ, 40 ಲಕ್ಷ ರೂ. ಪಡೆದು ಬಿಡುಗಡೆ; 4 ಪೊಲೀಸರ ವಿರುದ್ಧ ಎಫ್‌ಐಆರ್‌

kidnap and demand Rs 40 lakh, FIR against four including psi

kidnap and demand Rs 40 lakh, FIR against four including psi

ಬೆಂಗಳೂರು: ಹುಲಿ ಚರ್ಮ ಹಾಗೂ ಉಗುರು ಮಾರಾಟ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಕಿಡ್ನ್ಯಾಪ್‌ (Kidnap Case) ಮಾಡಿ ನಂತರ ಆತನ ಸಂಬಂಧಿಕರಿಂದ 40 ಲಕ್ಷ ರೂಪಾಯಿ ಪಡೆದು ಬಿಡುಗಡೆ ಮಾಡಿದ್ದ ಮಾರತಹಳ್ಳಿ ಠಾಣೆ (Marathahalli Police) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಪಿಎಸ್‌ಐ ಸೇರಿ ಮೂವರು ನಾಪತ್ತೆಯಾಗಿದ್ದು, ಒಬ್ಬ ಹೆಡ್‌ಕಾನ್ಸ್‌ಟೆಬಲ್‌ ಸೆರೆಯಾಗಿದ್ದಾರೆ.

ಹೆಡ್‌ ಕಾನ್ಸ್‌ಟೆಬಲ್‌ ಹರೀಶ್ ಬಂಧಿತರು. ಹುಲಿ ಚರ್ಮ ಹಾಗೂ ಉಗುರು ಮಾರಾಟ ಪ್ರಕರಣದ ಆರೋಪಿಯನ್ನು ಪೊಲೀಸರೇ ಕಿಡ್ನ್ಯಾಪ್ ಮಾಡಿ, ನಂತರ ಆತನ ಸಂಬಂಧಿಕರಿಗೆ ಫೋನ್‌ ಮಾಡಿ 40 ಲಕ್ಷ ರೂಪಾಯಿ ನೀಡಿದರೆ ವ್ಯಕ್ತಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ನಂತರ ಹಣ ಪಡೆದು ಆರೋಪಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ನಂತರ ಆರೋಪಿ ಸಂಬಂಧಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ | Family Dispute: ಗಂಡ-ಹೆಂಡತಿ ಜಗಳದಲ್ಲಿ ಬಡವಾದ ಬೆಂಗಳೂರು ಪೊಲೀಸರು! ಏನಿದು ಗಲಾಟೆ ಸಂಸಾರ?

ಕಿಡ್ನ್ಯಾಪ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಬಾಗಲೂರು ಪೊಲೀಸರಿಗೆ, ಕಿಡ್ನ್ಯಾಪರ್ಸ್ ಮಾರತಹಳ್ಳಿ ಠಾಣೆ ಪಿಎಸ್‌ಐ ರಂಗೇಶ್ ಮತ್ತು ಹೆಡ್ ಕಾನ್ಸ್‌ಟೆಬಲ್‌ ಹರೀಶ್, ಕಾನ್ಸ್‌ಟೆಬಲ್‌ಗಳಾದ ಮಹೇಶ್ ಹಾಗೂ ಮಹದೇವಸ್ವಾಮಿ ಎಂಬುವುದು ತಿಳಿದುಬಂದಿದೆ. ನಂತರ ಈ ಬಗ್ಗೆ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಮಾಹಿತಿ‌ ನೀಡಲಾಗಿತ್ತು. ಬಳಿಕ ಪ್ರತಾಪ್‌ ರೆಡ್ಡಿ ಅವರು ಕೂಡಲೇ ಪೊಲೀಸ್‌ ಸಿಬ್ಬಂದಿಯನ್ನು ಬಂಧಿಸಲು ಸೂಚಿಸಿದ್ದಾರೆ.

ಹೀಗಾಗಿ ಮಂಗಳವಾರ ಹೆಡ್ ಕಾನ್ಸ್‌ಟೆಬಲ್‌ ಹರೀಶ್ ಎಂಬುವವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಪಿಎಸ್‌ಐ ರಂಗೇಶ್, ಪೇದೆಗಳಾದ ಮಹೇಶ್‌ ಹಾಗೂ ಮಹದೇವಸ್ವಾಮಿಗಾಗಿ ಬಲೆ ಬೀಸಲಾಗಿದೆ.

Exit mobile version