Site icon Vistara News

Kidnap Case : ಶಿವಮೊಗ್ಗದಲ್ಲಿ ಹಾಡಹಗಲೇ ಯುವತಿ ಅಪಹರಣ!

Girl kidnap case

ಶಿವಮೊಗ್ಗ: ಶಿವಮೊಗ್ಗದಲ್ಲಿ (Shivamogga News) ಹಾಡಹಗಲೇ ಯುವತಿಯೊಬ್ಬಳ (Kidnap Case) ಅಪಹರಣವಾಗಿದೆ. ಇನ್ನೋವಾ ಕಾರಿನಲ್ಲಿ (Innova car) ಬಂದ ದುಷ್ಕರ್ಮಿಗಳು ಯುವತಿಯನ್ನು ಕಿಡ್ನ್ಯಾಪ್‌ ಮಾಡಿದ್ದಾರೆ. ನಗರದ ಬಸ್‌ ಸ್ಟ್ಯಾಂಡ್‌ ಹತ್ತಿರದ ಅಶೋಕ ಹೋಟೆಲ್‌ (Ashoka Hotel) ಬಳಿ ಯುವತಿಯನ್ನು ಎಳೆದು ಹೋಗಿರುವ ಘಟನೆ ಇಂದು (ಜು.17) ಬೆಳಗ್ಗೆ ನಡೆದಿದೆ.

ಜನರ ಓಡಾಟ ಇರುವಾಗಲೇ ಈ ಕಿಡ್ನ್ಯಾಪ್‌ ನಡೆದಿದೆ. ಕಾರಿನಲ್ಲಿ ಬಂದ ಅಪಹರಣಕೋರರು ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ. ಸ್ಥಳೀಯರು ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.

ಕಿಡ್ನ್ಯಾಪ್‌ ಆಗಿರುವ ಯುವತಿ ಯಾರು ಏನು ಎಂಬುದು ತಿಳಿದಿಲ್ಲ. ಸದ್ಯ ಪೊಲೀಸರು ಸುತ್ತಮುತ್ತಲ ಸಿಸಿ ಕ್ಯಾಮೆರಾವನ್ನು ಪರಿಶೀಲಿಸುತ್ತಿದ್ದಾರೆ. ಶಿವಮೊಗ್ಗ ನಗರದಲ್ಲೇ ಜನಸಂದಣಿ ಇರುವಲ್ಲೇ ಯುವತಿಯ ಅಪಹರಣ ಮಾಡಿರುವುದು ಜನರಲ್ಲಿ ಭೀತಿ ಹೆಚ್ಚಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version