Site icon Vistara News

Kidnapping case : ಬುರ್ಖಾಧಾರಿ ಮಹಿಳೆಯರಿಂದ ಬೆಂಗಳೂರಲ್ಲಿ ಉದ್ಯಮಿಯ ಕಿಡ್ನ್ಯಾಪ್‌!

Kidnapping Case in bengaluru

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳಾ ಉದ್ಯಮಿಯ ಹಲ್ಲೆ ನಡೆಸಿ ಕಿಡ್ನ್ಯಾಪ್‌ (Kidnapping case) ಮಾಡಲಾಗಿದೆ. ನಿವೃತ್ತ ಸೇನಾಧಿಕಾರಿ ವಿಜಯ್ ಎಂಬುವವರ ಪತ್ನಿ ಪಂಕಜ ಕಿಡ್ನ್ಯಾಪ್‌ ಆದವರು.

ಹೋಟೆಲ್ ಉದ್ಯಮಿ ಆಗಿರುವ ಪಂಕಜ ಅವರು, ಎಂಇಎಸ್ ರಿಂಗ್ ರಸ್ತೆಯಲ್ಲಿರುವ ಡಿಎಂ ರೆಸಿಡೆನ್ಸಿಯ ಮಾಲೀಕರಾಗಿದ್ದಾರೆ. ಭಾನುವಾರ (ಅ.1) ಮಧ್ಯಾಹ್ನ 12 ಗಂಟೆ ಸುಮಾರಿಗೆ ರೂಂ ಬುಕ್ ಮಾಡುವ ಸೋಗಿನಲ್ಲಿ ಸುಮಾರು 25 ಬುರ್ಖಾಧಾರಿ ಮಹಿಳೆಯರು ಮತ್ತು ಪುರುಷರು ಬಂದಿದ್ದಾರೆ.

ಇದನ್ನೂ ಓದಿ: Road Accident : ಭೀಕರ ಅಪಘಾತದಲ್ಲಿ ಅಮ್ಮ-ಮಗ ಸೇರಿ ಮೂವರು ದಾರುಣ ಸಾವು

ಬುರ್ಖಾ ಧರಿಸಿ ಬಂದವರ ಬಳಿ ಪಂಕಜ ಆಡ್ರೆಸ್‌ ಪ್ರೂಫ್‌ ಕೇಳಿದ್ದಾರೆ. ಈ ವೇಳೆ ಸ್ಥಳೀಯರಿಗೆ ರೂಂ ನೀಡುವುದಿಲ್ಲ ಎಂದಿದ್ದಾರೆ. ಈ ಸಂಬಂಧ ಮಾತಿಗೆ ಮಾತು ಬೆಳೆದು ಗಲಾಟೆಗೆ ತಿರುಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಬುರ್ಖಾಧಾರಿ ಮಹಿಳೆಯರು ಅವರೊಟ್ಟಿಗೆ ಬಂದಿದ್ದ ಪುರಷರು ರೆಸಿಡೆನ್ಸಿಯ ಗಾಜು ಪುಡಿ ಪುಡಿ ಮಾಡಿ, ಹಲ್ಲೆ ನಡೆಸಿದ್ದಾರೆ. ಬಳಿಕ ಬುರ್ಖಾ ಧರಿಸಿದವರು ಸಿನಿಮೀಯ ರೀತಿಯಲ್ಲಿ ಪಂಕಜರನ್ನು ಸುತ್ತುವರೆದು ಕಿಡ್ನ್ಯಾಪ್‌ ಮಾಡಿದ್ದಾರೆ.

ಕಿಡ್ನ್ಯಾಪ್‌ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪಂಕಜ ಅವರ ಮೇಲೆ ಹಲ್ಲೆ ನಡೆಸಿ ಬಳಿಕ ಆಟೋದಲ್ಲಿ ಕಿಡ್ನ್ಯಾಪ್‌ ಮಾಡಿದ್ದಾರೆ. ಇತ್ತ ಪಂಕಜ ಅವರು ಎಷ್ಟೇ ಕೂಗಾಡಿದರು ಸಾರ್ವಜನಿಕರು ಸಹಾಯಕ್ಕೆ ಬಂದಿಲ್ಲ. ಕೊಂಚ ದೂರ ಹೋದಾಗ ಪಂಕಜ ಕಿರುಚಾಡಿದ್ದಾರೆ. ಕೂಡಲೇ ಇದನ್ನು ಗಮನಿಸಿದ ಜಾಲಹಳ್ಳಿ ಸಂಚಾರಿ ಪೊಲೀಸರು ಆಟೋವನ್ನು ಬೆನ್ನಟ್ಟಿದ್ದಾರೆ.

ಬಿಇಎಲ್ ಸರ್ಕಲ್ ಬಳಿ ಆಟೋಗೆ ಅಡ್ಡಹಾಕಿದ ಪೊಲೀಸರು ಉದ್ಯಮಿ ಪಂಕಜ ಅವರನ್ನು ರಕ್ಷಣೆ ಮಾಡಿದ್ದಾರೆ. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಮಹಿಳೆ ಬಚಾವ್ ಆಗಿದ್ದಾರೆ. ಘಟನೆ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಯಾಕಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version