ಬೆಂಗಳೂರು: ಕಳೆದ ಜೂ. 16ರಂದು ಏರ್‌ಪೋರ್ಟ್ ರಸ್ತೆಯ ಜಿಕೆವಿಕೆ ಬಳಿ ನಡೆದ ಕಿಡ್ನ್ಯಾಪ್ ಪ್ರಕರಣಕ್ಕೆ (Kidnapping case) ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಮಗನನ್ನು ಅಪಹರಿಸಿದವನು ಈಗ ಕಂಬಿ ಹಿಂದೆ ಸೆರೆಯಾಗಿದ್ದಾನೆ. ಹರಿಕೃಷ್ಣ ಬಂಧಿತ ಆರೋಪಿ ಆಗಿದ್ದಾನೆ.
ಕಳೆದ ವಾರ ಮಹಿಳೆಯೊಬ್ಬಳು ತನ್ನ ಮಗು ಜತೆಗೆ ಹೋಗುತ್ತಿದ್ದಳು. ಈ ವೇಳೆ ಆಟೋದಲ್ಲಿ ಬಂದಿದ್ದ ಮಹಿಳೆಯರು ಹಾಗೂ ವ್ಯಕ್ತಿಯೊಬ್ಬ, ತಾಯಿಯಿಂದ ಮಗುವನ್ನು ಕಿತ್ತುಕೊಂಡು ಕಿಡ್ನ್ಯಾಪ್ ಮಾಡಿಕೊಂಡು ಪರಾರಿ ಆಗಿದ್ದರು. ಕೂಡಲೇ ಮಗುವಿನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗುವಾಗಿ ಎಷ್ಟೇ ಪೊಲೀಸರು ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.
ಅಂದು ಜಿಕೆವಿಕೆ ಬಳಿ ನಡೆದಿದ್ದ ಸಿನಿಮೀಯ ಕಿಡ್ನ್ಯಾಪ್ ಪ್ರಕರಣಕ್ಕೆ ಜೂ.23ರಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮಗುವನ್ನು ಕರೆದುಹೋಗಿದ್ದು ತಂದೆಯೇ ಎಂದು ತಿಳಿದು ಬಂದಿದೆ. ಕೋರ್ಟ್ ಆದೇಶ ಮೀರಿ ಮಗು ಕರೆದೊಯ್ದ ಆರೋಪದಲ್ಲಿ ಬಳ್ಳಾರಿಯ ಉದ್ಯಮಿ ಹರಿಕೃಷ್ಣ ಬಂಧನ ಆಗಿದ್ದಾನೆ.
ಜೆಕೆವಿಕೆ ಬಳಿ ಎರಡು ಆಟೋದಲ್ಲಿ ಮೂವರು ಮಹಿಳೆಯರ ಜತೆ ಬಂದಿದ್ದ ಹರಿಕೃಷ್ಣ ಮಗುವನ್ನು ತಾಯಿಯಿಂದ ಕಸಿದುಕೊಂಡು ಹೋಗಿದ್ದ. ಈ ಮಾರ್ಗದಲ್ಲಿ ತೆರಳುತ್ತಿದ್ದ ವಿದ್ಯಾರಣ್ಯಪುರ ಸಬ್ ಇನ್ಸ್‌ಪೆಕ್ಟರ್ ಕೂಡಲೇ ಹೊಯ್ಸಳಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಹರಿಕೃಷ್ಣ ಜತೆ ಬಂದಿದ್ದ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಈ ವೇಳೆ ಹಿಂದೆ ತಂದೆ ಹತ್ಯೆ ಕೇಸ್‌ನಲ್ಲಿ ಆರೋಪಿಯಾಗಿದ್ದ ಉದ್ಯಮಿ ಹರಿಕೃಷ್ಣ ಈಗ ಮಗನ ಕಿಡ್ನ್ಯಾಪ್ ಕೇಸ್‌ನಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.
ಬಯಾಲಜಿಕಲ್ ಫಾದರ್
2020ರಲ್ಲಿ ತಲಘಟ್ಟಪುರದಲ್ಲಿ ಉದ್ಯಮಿ ಹರಿಕೃಷ್ಣ ಅವರ ತಂದೆಯ ಕೊಲೆ ಆಗಿತ್ತು. ತಂದೆ ಕೊಲೆ ಕೇಸ್‌ನಲ್ಲಿ ಹರಿಕೃಷ್ಣ ಆರೋಪಿಯಾಗಿದ್ದವ, ಈಗ ಮಗು ಕಿಡ್ನ್ಯಾಪ್ ಮಾಡಿದ್ದಾನೆ. ಹರಿಕೃಷ್ಣನೇ ಮಗುವಿಗೆ ಜನ್ಮದಾತನಾಗಿದ್ದರೂ, ಮಗುವಿನ ತಾಯಿ ಜತೆ ವಿವಾಹವಾಗಿರಲಿಲ್ಲ. ಉದ್ಯಮಿ ಹರಿಕೃಷ್ಣ ಮಗುವಿನ ಬಯಾಲಜಿಕಲ್ ಫಾದರ್ ಆಗಿದ್ದರು. ಮಗು ವಿಚಾರವಾಗಿ ಹರಿಕೃಷ್ಣ ಹಾಗೂ ಮಗುವಿನ ತಾಯಿ ಕೋರ್ಟ್‌ಗೆ ತೆರಳಿದ್ದರು. ಈ ವೇಳೆ ಕೋರ್ಟ್ ಷರತ್ತು ವಿಧಿಸಿ ಮಗುವನ್ನು ತಾಯಿಗೆ ಒಪ್ಪಿಸಿದ್ದರು. ಆದರೆ ಕಳೆದ ವಾರ ಏಕಾಏಕಿ ಬಂದು ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾನೆ.
ಇದನ್ನೂ ಓದಿ: Murder Case: ಇಟ್ಕೊಂಡವನಿಗಾಗಿ ಕಟ್ಕೊಂಡ ಗಂಡನಿಗೆ ಚಟ್ಟ ಕಟ್ಟಿದಳು; ಪ್ರಾಣ ಸ್ನೇಹಿತರೇ ಉಸಿರು ನಿಲ್ಲಿಸಿದ್ರು!
ಕಿಡ್ನ್ಯಾಪ್ ಮಾಡಿ ಊರು ಸುತ್ತಿದ ಅಪ್ಪ
ಸತತ 7 ದಿನಗಳ ಕಾಲ ಹುಡುಕಾಟ ನಡೆಸಿದರೂ ಸಹ ಯಾರ ಕೈಗೂ ಸಿಕ್ಕಿರಲಿಲ್ಲ. ಮಗುವನ್ನು ಕಿಡ್ನ್ಯಾಪ್ ಮಾಡಿದ ಹರಿಕೃಷ್ಣ ಬಳ್ಳಾರಿ, ಕಲಬುರಗಿ ನಂತರ ಗೋವಾ ಎಂದು ಊರೂರು ಸುತ್ತಿದ್ದ. ಸದ್ಯ ವಿಶೇಷ ಕಾರ್ಯಾಚರಣೆ ನಡೆಸಿ ಕೊಡಿಗೆಹಳ್ಳಿ ಪೊಲೀಸರು ಮಗು ಹಾಗೂ ಕಿಡ್ನ್ಯಾಪರ್ ತಂದೆಯನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಹರಿಕೃಷ್ಣನ ಜತೆಗೆ ಈತನಿಗೆ ಸಹಕರಿಸಿದ್ದ ಆಟೋ ಚಾಲಕ, ಮಹಿಳೆಯರನ್ನು ಬಂಧಿಸಿ ತನಿಖೆಯ ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ