ಬೆಂಗಳೂರು: ಇತ್ತೀಚೆಗೆ ಜನರಲ್ಲಿ ಕಿಡ್ನಿ ಸಮಸ್ಯೆಗಳು (kidney disease) ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ಗೆ ತುತ್ತಾದವರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ. ದೇಶದಲ್ಲಿ ಶೇ. 10ರಷ್ಟು ಜನರಿಗೆ ತೀವ್ರತರವಾದ ಕಿಡ್ನಿ ಸಮಸ್ಯೆ ಕಾಡುತ್ತಿದ್ದು, ಹಲವರು ಮೃತಪಡುತ್ತಿದ್ದಾರೆ.
ಬಹುತೇಕರಿಗೆ ಕಿಡ್ನಿ ಸಮಸ್ಯೆ ಇರುವುದೇ ತಿಳಿಯದಂತಾಗಿದೆ. ಕೊರೊನಾ ಮುನ್ನ ಇಷ್ಟೊಂದು ಪ್ರಮಾಣದಲ್ಲಿ ಕಿಡ್ನಿ ಸಮಸ್ಯೆ ಇರಲಿಲ್ಲ. ಆದರೆ ಕೊರೊನಾ ನಂತರ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂಬ ವಿಷಯ ತಿಳಿದುಬಂದಿದೆ.
ಕಿಡ್ನಿ ಸಮಸ್ಯೆಯ ಲಕ್ಷಣಗಳು ಏನು?
ಹೆಚ್ಚು ಆಯಾಸವಾಗುವುದು, ನಿದ್ರೆಯ ಕೊರತೆಯುಂಟಾಗುವುದು, ತುರಿಕೆ ಶುರುವಾಗುವುದು ಹಾಗೂ ಮೂತ್ರದ ಬಣ್ಣದಲ್ಲಿ ಬದಲಾವಣೆ ಆಗುವುದನ್ನು ಗಮನಿಸಬಹುದು. ಮುಖ ಮತ್ತು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು ಸೇರಿ ಸ್ನಾಯು ಸೆಳೆತದೊಂದಿಗೆ ಉಸಿರಾಟದ ತೊಂದರೆಯುಂಟಾಗುತ್ತದೆ.
ಇದನ್ನೂ ಓದಿ: Lorry strike: ಬೆಂಗಳೂರಲ್ಲಿ ಮಾ. 17ರಿಂದ ಹಾಲು-ತರಕಾರಿ ಇಲ್ಲ? ಇದು ಲಾರಿ ಚಾಲಕರ ಮುಷ್ಕರ ಎಫೆಕ್ಟ್
ಮುಂಜಾಗ್ರತಾ ಕ್ರಮ ವಹಿಸುವುದು ಹೇಗೆ?
ಪ್ರತಿನಿತ್ಯ ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ನೀರು ಸೇವಿಸಬೇಕು. ವೈದ್ಯರ ಸಲಹೆ ಇಲ್ಲದೆ ಪ್ರೋಟಿನ್‌ಯುಕ್ತ ಆಹಾರ ತಿನ್ನಬಾರದು. ಹೆಚ್ಚು ನೋವು ನಿವಾರಕ ಮಾತ್ರೆಗಳನ್ನು ಬಳಸಬಾರದು. ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ಮೂತ್ರ ಸಮಸ್ಯೆ ಕಂಡು ಬಂದಾಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಕಿಡ್ನಿ ಸಮಸ್ಯೆ ಕುರಿತು ಸ್ವಲ್ಪ ಯಾಮಾರಿದರೂ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ತಜ್ಞ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ