ಕಲಬುರಗಿ: ಇಲ್ಲಿನ ಪಟ್ಟಣ ಗ್ರಾಮದ ನಿವಾಸಿಯೊಬ್ಬ ಬಕ್ರೀದ್ ಸಂಭ್ರಮಕ್ಕಾಗಿ ಗೋವನ್ನು ಹತ್ಯೆ ಮಾಡಿದ್ದು, ಅದು ಗರ್ಭ ಧರಿಸಿತ್ತು ಎಂಬ ವಿಷಯ ಬಳಿಕ ಗೊತ್ತಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೋಹತ್ಯೆ ಮಾಡಿದ ಹೈದರ್ ಶೇಕ್ ಬಂಧನಕ್ಕೊಳಗಾದ ಆರೋಪಿ. ಆತನೂರು ಗ್ರಾಮದ ಸಂತೆಯಿಂದ ಹೈದರ್ ಒಂದು ಗೋವು ಹಾಗೂ ಕರುವನ್ನು ಖರೀದಿಸಿ ತಂದಿದ್ದ ಎನ್ನಲಾಗಿದೆ. ಅದನ್ನು ಊರ ಹೊರಗಿನ ಖಾಲಿ ಜಾಗವೊಂದರಲ್ಲಿ ಹತ್ಯೆಗೆ ತೆಗೆದುಕೊಂಡು ಹೋಗಿದ್ದ. ಇದನ್ನು ಗಮನಿಸಿದ ಸ್ಥಳೀಯರು ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅವರು ಬರುವಷ್ಟರಲ್ಲಿ ಹೈದರ್ ಗೋವನ್ನು ಹತ್ಯೆ ಮಾಡಿದ್ದ ಎನ್ನಲಾಗಿದೆ. ಪರಿಶೀಲಿಸಿದಾಗ ಗೋವು ಗರ್ಭ ಧರಿಸಿದ್ದ ಸಂಗತಿ ಗೊತ್ತಾಗಿದೆ. ಹೈದರ್ ಬಳಿ ಇದ್ದ ಇನ್ನೊಂದು ಕರುವನ್ನು ಪೊಲೀಸರು ರಕ್ಷಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ| ಅಕ್ರಮ ಗೋ ಹತ್ಯೆ | ರಾಜ್ಯದಲ್ಲೇ ಮೊದಲ ಬಾರಿಗೆ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು, ಖಾದರ್ ಆಕ್ರೋಶ