Site icon Vistara News

Killer CEO: ಎತ್ತಿ ಆಡಿಸಿದ ತೋಳಲ್ಲಿ ಮಗು ಚಿನ್ಮಯ್‌ ಅಂತ್ಯಕ್ರಿಯೆ; ಈ ನೋವು ಮತ್ತಾವ ತಂದೆಗೂ ಬೇಡ

killer ceo father brings sons dead body

ಬೆಂಗಳೂರು: ಗಂಡ-ಹೆಂಡತಿ ಜಗಳದಲ್ಲಿ 4 ವರ್ಷದ ಮಗು ಬಲಿಯಾಯ್ತು. ಮುದ್ದಾಡಬೇಕಿದ್ದ ಕೈಗಳೇ ಕರುಳಬಳ್ಳಿಗೆ ಕೊಳ್ಳಿ ಇಟ್ಟು (Killer CEO) ಜೈಲು ಕಂಬಿ ಹಿಂದೆ ಇದ್ದರೆ, ಇತ್ತ ಹರಿಶ್ಚಂದ್ರಘಾಟ್​​​ನಲ್ಲಿ ತಂದೆ ವೆಂಕಟರಮಣ ದುಃಖದಲ್ಲೇ ಪುತ್ರ ಚಿನ್ಮಯ್‌ನ ಅಂತ್ಯಸಂಸ್ಕಾರ (Funeral) ನಡೆಸಿದರು.

ದುಃಖದಲ್ಲೇ ಹರಿಶ್ಚಂದ್ರ ಘಾಟ್‌ಗೆ ಬಂದ ಚಿನ್ಮಯ್‌ ತಂದೆ, ಎತ್ತಿ ಆಡಿಸಿದ ತೋಳಲ್ಲಿ ಮಗನನ್ನು ಮಣ್ಣು ಮಾಡಿದರು. ಇದಕ್ಕ ಮೊದಲು ಮಗುವನ್ನು ತಬ್ಬಿ, ಮುದ್ದಾಡಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ಈ ದೃಶ್ಯ ನೋಡಿದವರೆಲ್ಲೂ ಈ ನೋವು ಯಾವ ತಂದೆಗೂ ಬೇಡಪ್ಪಾ ಎಂದು ಎದೆಭಾರ ಮಾಡಿಕೊಂಡರು.

ಇನ್ನೂ ಇದಕ್ಕೂ ಮೊದಲು ನಿನ್ನೆ ಮಧ್ಯರಾತ್ರಿ 1.45ರ ಸುಮಾರಿಗೆ ಹಿರಿಯೂರಿನಿಂದ ಬೆಂಗಳೂರಿಗೆ ಮೃತದೇಹವನ್ನು ಕುಟುಂಬಸ್ಥರು ತಂದಿದ್ದರು. ಆಪ್ತರು, ಕುಟುಂಬಸ್ಥರು ಮಗುವಿನ ಅಂತಿಮ ದರ್ಶನ ಪಡೆದುಕೊಂಡರು. ಯಶವಂತಪುರದ ಬಳಿ ಇರುವ ಬ್ರಿಗೇಡ್ ಗೇಟ್‌ವೇ ರೆಸಿಡೆನ್ಸಿಯ ಫ್ಲ್ಯಾಟ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬ್ರಿಗೇಡ್ ಅಪಾರ್ಟ್ಮೆಂಟ್‌ನಲ್ಲಿ ಸ್ಥಳೀಯ ಪೊಲೀಸರು ಬಿಗಿ ಭದ್ರತೆಯನ್ನು ನೀಡಿದ್ದರು. ನಂತರ ಬುಧವಾರ ಬೆಳಗ್ಗೆ ಆಂಬ್ಯುಲೆನ್ಸ್‌ ಮೂಲಕ ಹರಿಶ್ಚಂದ್ರ ಘಾಟ್‌ಗೆ ಮಗು ಮೃತದೇಹವನ್ನು ತರಲಾಯಿತು. ಅಂತಿಮ ವಿಧಿ ವಿಧಾನವನ್ನು ಸಲ್ಲಿಸಿ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

ಇದನ್ನೂ ಓದಿ: Killer CEO: ತಲೆದಿಂಬಿನಿಂದ ಉಸಿರುಗಟ್ಟಿಸಿ ಮಗನನ್ನೇ ಕೊಂದ ಸಿಇಒ; ವೈದ್ಯರಿಂದ ಸ್ಫೋಟಕ ಮಾಹಿತಿ

Killer CEO: ʼಪ್ರೀತಿಯಿಂದಾಗಿಯೇ ಮಗುವನ್ನು ಕೊಂದೆʼ ಎಂದಳಾ ಹಂತಕಿ!

ಬೆಂಗಳೂರು: ʼನನಗೆ ಮಗನ ಮೇಲೆ ಅಪಾರ ಪ್ರೀತಿಯಿತ್ತು, ಅದಕ್ಕಾಗಿಯೇ ಮಗುವನ್ನು ಕೊಂದೆʼ ಎಂದು ಗೋವಾದಲ್ಲಿ ಮಗುವನ್ನು ಕೊಂದು ಬ್ಯಾಗಿನಲ್ಲಿ ಹಾಕಿ ತಂದ ಹಂತಕಿ, ಕಿಲ್ಲರ್‌ ಸಿಇಒ (Killer CEO) ಸುಚನಾ ಸೇಠ್‌ (Suchana Seth) ಹೇಳಿದ್ದಾಳೆ.

ಮಗು ಹತ್ಯೆ ಪ್ರಕರಣದಲ್ಲಿ ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ ಸಿಇಒ ಸುಚನಾ ಸೇಠ್ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಮಗುವಿನ ಮೇಲಿನ ಪ್ರೀತಿ ಹಾಗೂ ಮಾಜಿ ಗಂಡನ ಮೇಲಿನ ದ್ವೇಷದಿಂದಾಗಿಯೇ ಈ ಕೊಲೆ ಮಾಡಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.

ಮಗು ತನ್ನ ದಿನಚರಿ ಹೇಳಿ ಬಿಡುತ್ತೆ ಹಾಗು ತಂದೆಯ ಜೊತೆ ಆತ್ಮೀಯತೆ ಹೆಚ್ಚಾಗುತ್ತೆ ಎಂಬ ಕಾರಣದಿಂದ ಪತಿ ವೆಂಕಟರಮಣ ಕರೆ ಮಾಡಿದಾಗ ಸುಚನಾ ಅದನ್ನು ರಿಸೀವ್ ಮಾಡಿರಲಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಮಗು ತಂದೆ ಜತೆ ಹೋಗಿಬಿಡಬಹುದು ಹಾಗು ಕೋರ್ಟ್ ಕೂಡ ಇದಕ್ಕೆ ಸಮ್ಮತಿ ಸೂಚಿಸಬಹುದು ಎಂಬ ಕಾರಣಕ್ಕೆ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

“ನಮ್ಮ ವಿಚ್ಛೇದನ ಕೋರ್ಟ್‌ನಲ್ಲಿತ್ತು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನು ವಿಡಿಯೋ ಕಾಲ್ ಮೂಲಕ ತೋರಿಸ್ಬೇಕಿತ್ತು. ಅದು ನನಗೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೆ ಬಹಳ ಪ್ರೀತಿ. ಹೀಗಾಗಿ ನಾನು ಮಗುವಿನ ಪ್ರಜ್ಞೆ ತಪ್ಪಿಸಲು ಮುಖಕ್ಕೆ ದಿಂಬಿನಿಂದ ಒತ್ತಿ ಹಿಡಿದೆ. ಮಗು ಪ್ರಜ್ಞೆ ತಪ್ಪಿದೆ ಎಂದುಕೊಂಡಿದ್ದೆ. ಆದರೆ ಮಗು ಸಾವನ್ನಪ್ಪಿತ್ತು. ಇದೇ ನೋವಿನಲ್ಲಿ ಕೈ ಕುಯ್ದು ಆತ್ಮಹತ್ಯೆಗೆ ಯತ್ನಿಸಿದೆ. ಅದು ಸಾಧ್ಯವಾಗಿಲ್ಲ. ಗಾಬರಿಯಲ್ಲಿ ಏನೂ ಮಾಡಬೇಕೆಂದು ತೋಚದೆ ಸೂಟ್‌ಕೇಸ್‌ನಲ್ಲಿ ಹಾಕಿ ಪರಾರಿಯಾಗಲು ಯತ್ನಿಸಿದೆ” ಎಂದು ಸುಚನಾ ಸೇಠ್‌ ಹೇಳಿದ್ದಾಳೆ.

ಸದ್ಯ ಗೋವಾ ಪೊಲೀಸರು ಕೂಡ ಹೆಚ್ಚಿನ ತನಿಖೆಗಾಗಿ ಫ್ಲಾಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಸುಚನಾ ಸೇಠ್‌ ಅವರನ್ನು ಈಗಾಗಲೇ ಆರು ದಿನಗಳ ಕಾಲ ಗೋವಾ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಸ್ಪಾಟ್ ಇನ್ವೆಷ್ಟಿಗೇಷನ್ ನಡೆಯುತ್ತಿದೆ. ಮಗುವಿನ ಮೃತದೇಹದಲ್ಲಿ ಯಾವುದೇ ಗಾಯಗಳಿಲ್ಲ. ಎದೆ ಹಾಗು ಮುಖದ ಭಾಗ ಮಾತ್ರ ಊದಿಕೊಂಡಿದೆ. ಸದ್ಯ ಸುಚನಾ ಸ್ಟೇಟ್‌ಮೆಂಟನ್ನು ಪಡೆದುಕೊಂಡ ಬಳಿಕ ಕೃತ್ಯಕ್ಕೆ ಬಳಸಿದ್ದ ದಿಂಬುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version